ಮೂರನೇ ಭಾನುವಾರ ‘ಕೆಡಿ’ ಗಳಿಸಿದ್ದೆಷ್ಟು? ಒಟ್ಟೂ ಕಲೆಕ್ಷನ್ ವಿವರ ಇಲ್ಲಿದೆ

KD Movie Collection: ಕೆಡಿ: ದಿ ಡೆವಿಲ್' ಸಿನಿಮಾ 22 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿರ್ದೇಶಕ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‌ನ ಈ ಚಿತ್ರವು ಬೆಂಗಳೂರಿನ ಭೂಗತ ಜಗತ್ತಿನ ಕಥಾಹಂದರ ಹೊಂದಿದೆ. 'ಸೆರಗ ಸರ್ಸೆ' ಹಾಡಿನ ಅಶ್ಲೀಲತೆ, ಟ್ರೇಲರ್‌ನಲ್ಲಿ ಅನಧಿಕೃತ ದೃಶ್ಯಗಳಿಂದಾಗಿ ಚಿತ್ರ ಹಲವು ವಿವಾದಗಳಿಗೆ ಸಿಲುಕಿತ್ತು. ಆದರೂ, ಧ್ರುವ ಸರ್ಜಾ ಅಭಿಮಾನಿಗಳನ್ನು ಮೆಚ್ಚಿಸಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ.

ಮೂರನೇ ಭಾನುವಾರ ‘ಕೆಡಿ’ ಗಳಿಸಿದ್ದೆಷ್ಟು? ಒಟ್ಟೂ ಕಲೆಕ್ಷನ್ ವಿವರ ಇಲ್ಲಿದೆ
ಧ್ರುವ ಸರ್ಜ

Updated on: May 18, 2026 | 7:41 AM

ನಿರ್ದೇಶಕ ಪ್ರೇಮ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್‌ನ ‘ಕೆಡಿ: ದಿ ಡೆವಿಲ್’ ಸಿನಿಮಾ (KD Movie) ರಿಲೀಸ್ ಆಗಿ ಮೂರು ವಾರಗಳು ಕಳೆಯುತ್ತಾ ಬಂದಿವೆ. ದೊಡ್ಡ ಬಜೆಟ್​​ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಬೆಂಗಳೂರಿನ ಭೂಗತ ಜಗತ್ತಿನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಧ್ರುವ ಹಾಗೂ ರೀಷ್ಮಾ ಜೊತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

‘ಕೆಡಿ’ ಸಿನಿಮಾಗೆ ಈವರೆಗೆ 10,795 ಶೋಗಳು ಸಿಕ್ಕಿವೆ. ಈ ಸಿನಿಮಾ ಮೊದಲ ಮೂರು ದಿನ ಉತ್ತಮ ಗಳಿಕೆ ಮಾಡಿತು. ಈ ಸಿನಿಮಾ ಮೂರನೇ ಭಾನುವಾರ 39 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 22 ಕೋಟಿ ರೂಪಾಯಿ ಆಗಿದೆ. ಟಿವಿ, ಒಟಿಟಿ ಹಕ್ಕುಗಳ ಮಾರಾಟದಿಂದ ಸಿನಿಮಾಗೆ ಲಾಭ ಆಗಬಹುದು ಎಂದು ಊಹಿಸಲಾಗಿದೆ.

‘ಕೆಡಿ’ ಸಿನಿಮಾ ಬಿಡುಗಡೆಗೆ ಮುನ್ನ ಸಾಂಗ್ ಮತ್ತು ಟ್ರೇಲರ್ ವಿಚಾರದಲ್ಲಿ ಸಾಕಷ್ಟು ವಿವಾದಗಳನ್ನು ಎದುರಿಸಿತು. ಚಿತ್ರದ ‘ಸೆರಗ ಸರ್ಸೆ’ ಹಾಡಿನಲ್ಲಿ ನೋರಾ ಫತೇಹಿ ಕಾಣಿಸಿಕೊಂಡಿದ್ದರು. ಆದರೆ, ಈ ಹಾಡಿನ ಸಾಹಿತ್ಯ ಅತ್ಯಂತ ಅಶ್ಲೀಲ ಹಾಗೂ ದ್ವಂದ್ವಾರ್ಥದಿಂದ ಕೂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾದ ಬೆನ್ನಲ್ಲೇ, ಚಿತ್ರತಂಡ ಯೂಟ್ಯೂಬ್‌ನಿಂದ ಈ ಹಾಡನ್ನು ತೆಗೆದುಹಾಕಿತು. ಈ ಹಾಡನ್ನು ಸಿನಿಮಾದಿಂದಲೂ ತೆಗೆಯಲಾಗಿದೆ.

ಇದನ್ನೂ ಓದಿ: ಒಂದು ವಾರಕ್ಕೆ ‘ಕೆಡಿ’ ಸಿನಿಮಾ ಗಳಿಕೆ ಮಾಡಿದ್ದೆಷ್ಟು? ಇಲ್ಲಿದೆ ಲೆಕ್ಕಾಚಾರ

ಇನ್ನು ಚಿತ್ರದ ಟ್ರೇಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸೆನ್ಸಾರ್ ಮಂಡಳಿ ಕಿಡಿಕಾರಿತ್ತು. ಅನುಮತಿ ಇಲ್ಲದ ಕೆಲವು ದೃಶ್ಯಗಳು ಅದರಲ್ಲಿ ಸೇರಿದ್ದ ಕಾರಣಕ್ಕಾಗಿ ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿತ್ತು. ನಂತರ ಪರಿಷ್ಕೃತ ಟ್ರೇಲರ್ ಅನ್ನು ಮರು-ಅಪ್‌ಲೋಡ್ ಮಾಡಲಾಯಿತು. ಈ ಸೆನ್ಸಾರ್ ವಿವಾದಗಳಿಂದಾಗಿ ಸಿನಿಮಾ ಏಪ್ರಿಲ್ 30 ರಂದು ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿ, ಇತರ ಭಾಷೆಗಳ ಡಬ್ಬಿಂಗ್ ಆವೃತ್ತಿಗಳ ಬಿಡುಗಡೆ ತಡವಾಯಿತು. ಧ್ರುವ ಸರ್ಜಾ ಅಭಿಮಾನಿಗಳಿಗೆ ಚಿತ್ರ ಇಷ್ಟವಾಗಿದ್ದರೂ, ವಿವಾದಗಳೇ ಈ ಚಿತ್ರದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us