‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’; ಚಿತ್ರಪ್ರೇಮಿಗಳಿಗೆ ಕುತೂಹಲ ಮೂಡಿಸಿದ ಹೊಂಬಾಳೆ ಫಿಲ್ಮ್ಸ್ ಹೊಸ ಘೋಷಣೆ

| Updated By: Digi Tech Desk

Updated on: Apr 26, 2022 | 3:04 PM

Hombale Films: ಈಗಾಗಲೇ ಹಲವು ಕುತೂಹಲಕರ ಸಿನಿಮಾಗಳನ್ನು ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ ಘೋಷಿಸಿದೆ. ಇದೀಗ ಚಿತ್ರಪ್ರೇಮಿಗಳಿಗೆ ಮತ್ತೊಂದು ಹೊಸ ಸಮಾಚಾರ ನೀಡಲು ಸಂಸ್ಥೆ ಸಿದ್ದವಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ.

‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’; ಚಿತ್ರಪ್ರೇಮಿಗಳಿಗೆ ಕುತೂಹಲ ಮೂಡಿಸಿದ ಹೊಂಬಾಳೆ ಫಿಲ್ಮ್ಸ್ ಹೊಸ ಘೋಷಣೆ
‘ಹೊಂಬಾಳೆ ಫಿಲ್ಮ್ಸ್’ ಹಂಚಿಕೊಂಡ ಹೊಸ ಪೋಸ್ಟರ್ (Credits: Hombale Films/ Twitter)
Follow us on

‘ಕೆಜಿಎಫ್ ಚಾಪ್ಟರ್ 2’ ಯಶಸ್ಸಿನಲ್ಲಿರುವ ‘ಹೊಂಬಾಳೆ ಫಿಲ್ಮ್ಸ್’ (Hombale Films) ಮುಂದಿನ ಘೋಷಣೆಗಳ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ಕುತೂಹಲ ಮನೆಮಾಡಿದೆ. ಈಗಾಗಲೇ ನಿರ್ಮಾಣ ಸಂಸ್ಥೆಯು ಹಲವು ಬಿಗ್​ಬಜೆಟ್ ಚಿತ್ರಗಳ ನಿರ್ಮಾಣವನ್ನು ಘೋಷಿಸಿದೆ. ಈ ನಡುವೆ ಅಭಿಮಾನಿಗಳಿಗೆ ಹೊಸ ಸರ್ಪ್ರೈಸ್ ನೀಡಿದೆ ಹೊಂಬಾಳೆ. ಹೌದು. ಇಂದು ಟ್ವೀಟ್ ಮೂಲಕ ಘೋಷಣೆ ಮಾಡಿರುವ ನಿರ್ಮಾಣ ಸಂಸ್ಥೆಯು, ಹೊಸ ವಿಚಾರ ಘೋಷಿಸಿದ್ದರೂ ಅದರಲ್ಲಿ ಸರ್ಪ್ರೈಸ್ ಕಾಯ್ದುಕೊಂಡಿದೆ. ಈ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸುವಂತೆ ಮಾಡಿದೆ. ಅಷ್ಟಕ್ಕೂ ‘ಹೊಂಬಾಳೆ ಫಿಲ್ಮ್ಸ್’ ಹೇಳಿದ್ದೇನು? ಅಭಿಮಾನಿಗಳ ರಿಯಾಕ್ಷನ್ ಹೇಗಿದೆ? ಇಲ್ಲಿದೆ ನೋಡಿ.

‘ಹೊಂಬಾಳೆ ಫಿಲ್ಮ್ಸ್’ ತನ್ನ ಟ್ವಿಟರ್ ಖಾತೆಯಲ್ಲಿ ಇಂದು ಹೊಸ ಘೋಷಣೆ ಮಾಡಿದೆ. ಅದರಲ್ಲಿ ‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’ ಎಂದು ಬರೆಯಲಾಗಿದ್ದು, ಈ ಮೂಲಕ ಹೊಸ ಘೋಷಣೆ ಕುತೂಹಲ ಮೂಡಿಸಿದೆ. ಆದರೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಚಿತ್ರತಂಡ ಇನ್ನೂ ನೀಡಿಲ್ಲ. ಇದಕ್ಕಾಗಿ ಚಿತ್ರಪ್ರೇಮಿಗಳು ನಾಳೆ ಅಂದರೆ ಏಪ್ರಿಲ್ 27ರ ಬೆಳಗ್ಗೆ 9.50ರವರೆಗೆ ಕಾಯಲೇಬೇಕು. ‘ಬೆಳ್ಳಿ ತೆರೆಯ ಹೊಸ ಪರ್ವದ ಬಗ್ಗೆ ನಾಳೆ ಬೆಳಗ್ಗೆ 9.50ಕ್ಕೆ ನಿಮಗೆ ಮಾಹಿತಿ ನೀಡುತ್ತೇವೆ’ ಎಂದು ನಿರ್ಮಾಣ ಸಂಸ್ಥೆ ಟ್ವೀಟ್ ಮಾಡಿದೆ.

ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

‘ಹೊಂಬಾಳೆ ಫಿಲ್ಮ್ಸ್’ ಘೋಷಣೆಯ ಬೆನ್ನಲ್ಲೇ ನೆಟ್ಟಿಗರು ತಮ್ಮ ಅನಿಸಿಕೆಗಳ ಮೂಲಕ ನಾಳೆಯ ಘೋಷಣೆಯ ಬಗ್ಗೆ ಊಹಿಸುತ್ತಿದ್ದಾರೆ. ಬಹಳಷ್ಟು ಜನರು ಯುವ ರಾಜ್​ಕುಮಾರ್ ನಟನೆಯ ಚಿತ್ರದ ಅನೌನ್ಸ್ ಇದಾಗಿರಲಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್​ ನಿರ್ದೇಶನ ಮಾಡಲಿದ್ದಾರೆ ಎಂದೂ ನಿರೀಕ್ಷಿಸಿದ್ದಾರೆ. ಆದರೆ ಇದು ನಿಜವೇ ಅಥವಾ ‘ಹೊಂಬಾಳೆ ಫಿಲ್ಮ್ಸ್’ ಹೊಸ ಯೋಜನೆಯೊಂದನ್ನು ಪರಿಚಯಿಸಲಿದೆಯೇ ಎಂಬುದು ತಿಳಿಯಬೇಕಾದರೆ ನಾಳೆಯವರೆಗೆ ಕಾಯಲೇಬೇಕಾಗಿದೆ.

‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್​ನಲ್ಲಿ ಸಿದ್ಧವಾಗುತ್ತಿವೆ ಹಲವು ಸಿನಿಮಾಗಳು:

‘ಹೊಂಬಾಳೆ ಫಿಲ್ಮ್ಸ್​’ ಮೂಲಕ ಪ್ರಸ್ತುತ ಅನೇಕ ಸಿನಿಮಾಗಳ ಸಿದ್ಧವಾಗುತ್ತಿವೆ. ಪ್ರಭಾಸ್​ ನಟನೆಯ ‘ಸಲಾರ್​’, ಶ್ರೀಮುರಳಿ ಅಭಿನಯದ ‘ಬಘೀರ’, ರಿಷಬ್​​ ಶೆಟ್ಟಿ ನಿರ್ದೇಶನದ ‘ಕಾಂತಾರಾ’, ಜಗ್ಗೇಶ್​ ನಟನೆಯ ‘ರಾಘವೇಂದ್ರ ಸ್ಟೋರ್ಸ್​’ ಮುಂತಾದ ಸಿನಿಮಾಗಳು ತಯಾರಾಗುತ್ತಿವೆ. ಈ ಸಾಲಿಗೆ ಇತ್ತೀಚೆಗೆ ಸುಧಾ ಕೊಂಗರಾ ಅವರ ಸಿನಿಮಾ ಸೇರ್ಪಡೆಯಾಗಿತ್ತು. ಸೂರರೈ ಪೊಟ್ರು’ ನಿರ್ದೇಶಕಿ ಜತೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದ ನಿರ್ಮಾಣ ಸಂಸ್ಥೆಯು, ನೈಜ ಕತೆಗಳನ್ನಾಧರಿಸಿ ಸಿನಿಮಾ ತಯಾರಾಗಲಿದೆ ಎಂದು ಘೋಷಿಸಿತ್ತು.

ಇದನ್ನೂ ಓದಿ: ‘ಹೊಂಬಾಳೆ ಫಿಲ್ಮ್ಸ್​’ ಹೊಸ ಚಿತ್ರ ಅನೌನ್ಸ್​; ಈ ಬಾರಿ ಚಾನ್ಸ್​ ಪಡೆದಿದ್ದು ಲೇಡಿ ಡೈರೆಕ್ಟರ್​ ಸುಧಾ ಕೊಂಗರ

ಟೀಸರ್​ ಮೂಲಕ ಗಮನ ಸೆಳೆದ ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್​’; ಹೊಂಬಾಳೆ ಫಿಲ್ಮ್ಸ್​ ಪ್ರಯತ್ನಕ್ಕೆ ಸಿಕ್ತು ಮೆಚ್ಚುಗೆ

Published On - 2:36 pm, Tue, 26 April 22