ಹೊರಬಿತ್ತು ‘ಕೆಜಿಎಫ್​ ಚಾಪ್ಟರ್​ 2’ ಸಿನಿಮಾದ ಮೊದಲ ವಿಮರ್ಶೆ; ಐದಕ್ಕೆ ಐದು ಸ್ಟಾರ್​

| Updated By: ರಾಜೇಶ್ ದುಗ್ಗುಮನೆ

Updated on: Apr 11, 2022 | 3:58 PM

ಉಮೈರ್ ಅವರು ಈ ಮೊದಲು ‘ಆರ್​ಆರ್​ಆರ್​’ ಚಿತ್ರ ತೆರೆಗೆ ಬರುವುದಕ್ಕೂ ಮೊದಲೇ ವೀಕ್ಷಣೆ ಮಾಡಿದ್ದರು. ಈ ವೇಳೆ ಅವರು ಎಸ್​.ಎಸ್​. ರಾಜಮೌಳಿ ನಿರ್ದೇಶನವನ್ನು ಹೊಗಳಿದ್ದರು.

ಹೊರಬಿತ್ತು ‘ಕೆಜಿಎಫ್​ ಚಾಪ್ಟರ್​ 2’ ಸಿನಿಮಾದ ಮೊದಲ ವಿಮರ್ಶೆ; ಐದಕ್ಕೆ ಐದು ಸ್ಟಾರ್​
ಯಶ್
Follow us on

‘ಕೆಜಿಎಫ್​ ಚಾಪ್ಟರ್​ 2’ (KGF Chapter 2) ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಪ್ರಶಾಂತ್ ನೀಲ್ (Prashanth Neel) ನಿರ್ದೇಶನ, ಯಶ್ ಅವರ ಆ್ಯಕ್ಷನ್ ನೋಡೋಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸಿನಿಮಾ ತೆರೆಗೆ ಬರೋಕೆ ಇನ್ನು ಬೆರಳೆಣಿಕೆಯ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಚಿತ್ರದ ವಿಮರ್ಶೆ (KGF Chapter 2 Review). ಹೊರಬಿದ್ದಿದೆ. ‘ಕೆಜಿಎಫ್​ 2’ ವೀಕ್ಷಣೆ ಮಾಡಿರುವ ವಿದೇಶಿ ಸೆನ್ಸಾರ್ ಮಂಡಳಿಯ ಸದಸ್ಯ ಉಮೈರ್ ಸಂಧು ಅವರು ಚಿತ್ರಕ್ಕೆ ಐದು ಸ್ಟಾರ್ ನೀಡಿದ್ದಾರೆ ಪ್ರಶಾಂತ್ ನೀಲ್ ನಿರ್ದೇಶನವನ್ನು ಹಾಡಿ ಹೊಗಳಿದ್ದಾರೆ.

ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಕೆಜಿಎಫ್ 2’ ಬಗ್ಗೆ ಉಮೈರ್ ಬರೆದುಕೊಂಡಿದ್ದಾರೆ. ‘ಸಿನಿಮಾ ಅದ್ಭುತವಾಗಿದೆ. ವಿಶ್ಯುವಲ್​ಗಳು ಸ್ಟನ್ನಿಂಗ್ ಆಗಿದೆ. ಆ್ಯಕ್ಷನ್ ದೃಶ್ಯಗಳು ಸಾಕಷ್ಟು ಮನರಂಜನೆ ನೀಡುತ್ತವೆ. ಮತ್ತೆ ಮತ್ತೆ ಸಿನಿಮಾ ನೋಡಬೇಕು ಅನಿಸುತ್ತದೆ. ಪ್ರತಿಯೊಬ್ಬ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ನಮ್ಮ ದೃಷ್ಟಿ ಹೀರೋ ಹಾಗೂ ವಿಲನ್ ಮೇಲೆ ಇರುತ್ತದೆ. ಯಶ್ ಅವರ ನಟನೆ ಮೈಯಲ್ಲಿ ವಿದ್ಯುತ್ ಹರಿಯುವಂತೆ ಮಾಡುತ್ತದೆ. ಸಂಜಯ್ ದತ್​ ನಟನೆ ಅತ್ಯದ್ಭುತ’ ಎಂದು ಬರೆದುಕೊಂಡಿದ್ದಾರೆ ಅವರು. ಇನ್ನು ಚಿತ್ರಕ್ಕೆ ಅವರು ಐದು ಸ್ಟಾರ್ ನೀಡಿದ್ದಾರೆ.

ಉಮೈರ್ ಅವರು ಈ ಮೊದಲು ‘ಆರ್​ಆರ್​ಆರ್​’ ಚಿತ್ರ ತೆರೆಗೆ ಬರುವುದಕ್ಕೂ ಮೊದಲೇ ವೀಕ್ಷಣೆ ಮಾಡಿದ್ದರು. ಈ ವೇಳೆ ಅವರು ಎಸ್​.ಎಸ್​. ರಾಜಮೌಳಿ ನಿರ್ದೇಶನವನ್ನು ಹೊಗಳಿದ್ದರು. ಸಿನಿಮಾ ಸೂಪರ್ ಎಂದು ಬರೆದುಕೊಂಡಿದ್ದರು. ಆ ಮಾತು ನಿಜವಾಗಿದೆ. ಸಿನಿಮಾ ಹಿಟ್ ಆಗಿ, ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿದೆ. ಈಗ ಯಶ್ ಚಿತ್ರವನ್ನು ನೋಡಿ ಅವರು ಯಶಸ್ಸು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದು, ಇದು ನಿಜವಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇತ್ತೀಚೆಗೆ ಯಶ್ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ‘ಮುಂದಿನ ದಿನಗಳಲ್ಲಿ ಯಶ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಾರಾ ಅಥವಾ ಕನ್ನಡದಲ್ಲಿ ಮಾತ್ರ ನಟಿಸುತ್ತಾರಾ’ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಯಶ್ ಉತ್ತರ ನೀಡಿದ್ದರು. ‘ಬೇರೆ ರಾಜ್ಯಗಳಿಗೆ ಹೋಗಿ ನಮ್ಮ ಸಿನಿಮಾ ತೋರಿಸಿ, ನಾನು ಹೀರೋ ಎಂದು ಪರಿಚಯಿಸಿಕೊಂಡಿದ್ದೇನೆ. ಅವರು ಅಷ್ಟೊಂದು ಪ್ರೀತಿ ಕೊಡುತ್ತಿರುವಾಗ ಇಲ್ಲಿಯೇ ಕೂರೋಕೆ ಆಗಲ್ಲ. ಲೈಫ್​ನಲ್ಲಿ ಯಾವುದೂ ಶಾಶ್ವತ ಅಲ್ಲ ಅನ್ನೋದು ಗೊತ್ತಿದೆ. ಆದರೆ, ನಮ್ಮ ಗುರಿ ಮಾತ್ರ ಶಾಶ್ವತ. ಇಷ್ಟು ಜನರನ್ನು ಸಂಪಾದಿಸಿ ಸೇಫ್​ ಆಗಿ ಕೂರುತ್ತೇನೆ ಎಂದರೆ ಅದು ಆಗುವ ಮಾತಲ್ಲ. ಇದೊಂದು ರೀತಿಯಲ್ಲಿ ಯುದ್ಧ ಭೂಮಿ, ನಾವು ನುಗ್ಗುತ್ತಿರೋದೆ’ ಎಂದಿದ್ದರು ಯಶ್​.

ಇದನ್ನೂ ಓದಿ: ಬೇರೆ ಆಗುವ ಮಾತು ಬಂದಿದ್ದಕ್ಕೆ ಸಿಟ್ಟಾಗಿದ್ದ ಪ್ರಶಾಂತ್ ನೀಲ್; ಯಶ್ ಬಿಚ್ಚಿಟ್ರು ಅಚ್ಚರಿಯ ವಿಚಾರ

‘ಕೆಜಿಎಫ್​ 2’ ಬೇರೆ ವರ್ಷನ್​ಗೆ ಧ್ವನಿ ಕೊಡಲ್ಲ ಅಂದ್ರು ಯಶ್​; ಕಾರಣವೇನು?