ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯಶ್-ರಾಧಿಕಾ 2017ರಲ್ಲಿ ವಿವಾಹವಾದರು. ಈ ಜೋಡಿಗೆ ಆಯ್ರಾ ಯಶ್ ಮತ್ತು ಯಥರ್ವ್ ಯಶ್ ಎಂಬಿಬ್ಬರು ಮಕ್ಕಳಿದ್ದಾರೆ.
ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವುಗಳಿಗೆ ಮಿಲಿಯನ್ಗಟ್ಟಲೆ ಲೈಕ್ಸ್ ಸಿಗುತ್ತವೆ.
ಶೂಟಿಂಗ್ನಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಮಕ್ಕಳಿಗಾಗಿ, ಕುಟುಂಬಕ್ಕಾಗಿ ಯಶ್ ಸಮಯ ಮೀಸಲಿಡುತ್ತಾರೆ. ಲಾಕ್ಡೌನ್ ವೇಳೆ ಅವರು ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ.
ಪೋಸ್ ಕೊಡೋದ್ರಲ್ಲಿ ಪುಟಾಣಿ ಆಯ್ರಾ ತುಂಬ ಚೂಟಿ. ಆಕೆಯ ಫೋಟೋಗಳೆಂದರೆ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆಯ್ರಾಳ ಹಲವು ಫೋಟೋಗಳು ವೈರಲ್ ಆಗಿವೆ.
ಒಂದು ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದ ರಾಧಿಕಾ ಪಂಡಿತ್ ಅವರು ಈಗ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಮದುವೆ ನಂತರ ಅವರು ‘ಆದಿಲಕ್ಷ್ಮೀ ಪುರಾಣ’ ಚಿತ್ರದಲ್ಲಿ ನಟಿಸಿದ್ದರು.
ರಾಧಿಕಾ ಪಂಡಿತ್ ಮತ್ತೆ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಒಳ್ಳೆಯ ಪಾತ್ರದ ಮೂಲಕ ಅವರು ಮತ್ತೆ ಬಣ್ಣ ಹಚ್ಚಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ರಾಧಿಕಾ ಪಂಡಿತ್ಗೆ 18 ಲಕ್ಷ ಫಾಲೋವರ್ಸ್ ಇದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
Published On - 3:53 pm, Thu, 20 May 21