2022ರಲ್ಲಿ ಬಂಗಾರದ ಬೆಳೆ ತೆಗೆದ ಸ್ಯಾಂಡಲ್​ವುಡ್​; ಈ ವರ್ಷ 100 ಕೋಟಿ ರೂ. ಗಳಿಸಿದ ಸಿನಿಮಾಗಳಿವು

| Updated By: ರಾಜೇಶ್ ದುಗ್ಗುಮನೆ

Updated on: Oct 17, 2022 | 11:01 PM

‘ಕೆಜಿಎಫ್ 2’ ಚಿತ್ರ ಮಾಡಿದ ಹಲವು ದಾಖಲೆಗಳನ್ನು ಯಾರಿಂದಲೂ ಮುರಿಯಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಈ ಬಾರಿ ನೋರಾರು ಕೋಟಿ ಬಿಸ್ನೆಸ್ ಮಾಡಿದ ಸಿನಿಮಾಗಳ ಪಟ್ಟಿ ಇಲ್ಲಿದೆ.

2022ರಲ್ಲಿ ಬಂಗಾರದ ಬೆಳೆ ತೆಗೆದ ಸ್ಯಾಂಡಲ್​ವುಡ್​; ಈ ವರ್ಷ 100 ಕೋಟಿ ರೂ. ಗಳಿಸಿದ ಸಿನಿಮಾಗಳಿವು
Follow us on

ಈ ವರ್ಷ ಕನ್ನಡ ಚಿತ್ರರಂಗದ (Sandalwood)  ಪಾಲಿಗೆ ವರದಾನವಾಗಿದೆ. ಕೊವಿಡ್​ನಿಂದ ಕಂಗೆಟ್ಟಿದ್ದ ಚಿತ್ರರಂಗ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಕನ್ನಡ ಸಿನಿಮಾ ಇಂಡಸ್ಟ್ರಿಯ ಕೀರ್ತಿ ವಿಶ್ವ ಮಟ್ಟಕ್ಕೆ ಹಬ್ಬಿದೆ. ಒಂದೇ ವರ್ಷ ಹಲವು ಚಿತ್ರಗಳು 100 ಕೋಟಿ ರೂಪಾಯಿ ಕ್ಲಬ್ ಸೇರಿರೋದು ವಿಶೇಷ. ‘ಕೆಜಿಎಫ್ 2’ ಚಿತ್ರ (KGF Chapter 2) ಮಾಡಿದ ಹಲವು ದಾಖಲೆಗಳನ್ನು ಯಾರಿಂದಲೂ ಮುರಿಯಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಈ ಬಾರಿ ನೂರಾರು ಕೋಟಿ ಬಿಸ್ನೆಸ್ ಮಾಡಿದ ಸಿನಿಮಾಗಳ ಪಟ್ಟಿ ಇಲ್ಲಿದೆ.

ಜೇಮ್ಸ್

ಪುನೀತ್ ರಾಜ್​ಕುಮಾರ್ ಅವರು ಕಳೆದ ಅಕ್ಟೋಬರ್ 29ರಂದು ನಿಧನ ಹೊಂದಿದರು. ಅವರಿಲ್ಲ ಎನ್ನುವ ನೋವು ಅಭಿಮಾನಿಗಳನ್ನು ತೀವ್ರವಾಗಿ ಕಾಡುತ್ತಿದೆ. ಅವರ ಜನ್ಮದಿನದಂದೇ (ಮಾರ್ಚ್​ 17, 2022) ‘ಜೇಮ್ಸ್’ ಸಿನಿಮಾ ತೆರೆಗೆ ಬಂತು. ಇದು ಪುನೀತ್ ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ. ಈ ಕಾರಣಕ್ಕೆ ಅಭಿಮಾನಿಗಳು ಭಾವನಾತ್ಮಕವಾಗಿ ಕನೆಕ್ಟ್ ಆದರು. ಈ ಚಿತ್ರ 151 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಇದನ್ನೂ ಓದಿ
100 ಕೋಟಿ ರೂ. ಕ್ಲಬ್ ಸೇರಿದ ‘ಕಾಂತಾರ’; ಇನ್ಮುಂದೆ ಏಕಾಏಕಿ ಏರಲಿದೆ ರಿಷಬ್ ಚಿತ್ರದ ಕಲೆಕ್ಷನ್?
‘ಕಾಂತಾರ’ಕ್ಕೆ ಬಾಲಿವುಡ್​​​ನಲ್ಲಿ ಕ್ರೇಜ್ ಹೇಗಿದೆ? ತಾವು ನೋಡಿದ್ದನ್ನು ವಿವರಿಸಿದ ತೆಲುಗು ನಟ ವಿಷ್ಣು ಮಂಚು
ಹಿಂದಿಯಲ್ಲಿ ‘ಕಾಂತಾರ’ಕ್ಕೆ ಭರ್ಜರಿ ಓಪನಿಂಗ್; ಸಲ್ಮಾನ್​ ಖಾನ್ ಚಿತ್ರದ ಕಲೆಕ್ಷನ್ ಹಿಂದಿಕ್ಕಿದ ರಿಷಬ್ ಸಿನಿಮಾ
Kantara Movie: ಬಾಲಿವುಡ್​ನಲ್ಲೂ ಧೂಳೆಬ್ಬಿಸುತ್ತಿರುವ ಕಾಂತಾರ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿದ ಚಿತ್ರತಂಡ

ಕೆಜಿಎಫ್ 2

ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಸಿನಿಮಾ ಸಾಕಷ್ಟು ಮೋಡಿ ಮಾಡಿತ್ತು. ಈ ಕಾರಣಕ್ಕೆ ‘ಕೆಜಿಎಫ್ 2’ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಈ ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಯಿತು. ಮೊದಲ ದಿನವೇ ಚಿತ್ರ ನೂರಾರು ಕೋಟಿ ರೂಪಾಯಿ ಬಾಚಿತು. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 1400 ಕೋಟಿ ರೂಪಾಯಿ ಸಮೀಪಿಸಿದೆ. ಬಾಲಿವುಡ್ ಒಂದರಲ್ಲೇ 420+ ಕೋಟಿ ರೂ. ಕಮಾಯಿ ಮಾಡಿದೆ.

777 ಚಾರ್ಲಿ

ರಕ್ಷಿತ್ ಶೆಟ್ಟಿ ನಿರ್ಮಾಪಕನಾಗಿ ಹಾಗೂ ನಟನಾಗಿ ದೊಡ್ಡ ಯಶಸ್ಸು ಕಂಡ ಸಿನಿಮಾ ‘777 ಚಾರ್ಲಿ’. ಈ ಚಿತ್ರದಲ್ಲಿ ಶ್ವಾನದ ಪಾತ್ರ ಕೂಡ ಹೈಲೈಟ್ ಆಗಿತ್ತು. ಚಾರ್ಲಿಯ ನಟನೆ ನೋಡಿ ಜನರು ಮೆಚ್ಚಿಕೊಂಡರು. ಈ ಸಿನಿಮಾ ಬಗ್ಗೆ ಅಭಿಮಾನಿಗಳು ಇಟ್ಟುಕೊಂಡ ನಿರೀಕ್ಷೆ ಸುಳ್ಳಾಗಿಲ್ಲ. ಈ ಚಿತ್ರ 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಎಂದು ಚಿತ್ರತಂಡದವರೇ ಹೇಳಿಕೊಂಡಿದ್ದಾರೆ.

ವಿಕ್ರಾಂತ್ ರೋಣ

ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ಕ್ಕೆ ರಿಲೀಸ್ ಆಯಿತು. 3ಡಿಯಲ್ಲಿ ಮೂಡಿ ಬಂದ ಈ ಚಿತ್ರದ ಕಲೆಕ್ಷನ್ 159 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ ಎನ್ನಲಾಗಿದೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. ಸಲ್ಮಾನ್ ಖಾನ್ ಸೇರಿ ಅನೇಕರು ಚಿತ್ರಕ್ಕೆ ಬೆಂಬಲ ನೀಡಿದ್ದರು.

‘ಕಾಂತಾರ’

ಸೆಪ್ಟೆಂಬರ್ 30ಕ್ಕೆ ರಿಲೀಸ್ ಆದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ ‘ಕಾಂತಾರ’. ಈ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾ ಈಗಾಗಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

Published On - 7:57 pm, Mon, 17 October 22