10 ಗಂಟೆಗಳಲ್ಲಿ 93 ಲಕ್ಷ ವೀಕ್ಷಣೆ ಕಂಡ ‘ತೂಫಾನ್​’ ಸಾಂಗ್​; ಟ್ರೆಂಡಿಂಗ್​ನಲ್ಲಿ 1ನೇ ಸ್ಥಾನ

| Updated By: ರಾಜೇಶ್ ದುಗ್ಗುಮನೆ

Updated on: Mar 22, 2022 | 12:37 PM

Toofan Lyrical song: ‘ಕೆಜಿಎಫ್​ 2’ ಚಿತ್ರದ ಬಗ್ಗೆ ಇರುವ ಕ್ರೇಜ್​ ತುಂಬಾನೇ ದೊಡ್ಡ ಮಟ್ಟದ್ದು ಅನ್ನೋದು ಪದೇಪದೇ ಸಾಬೀತಾಗುತ್ತಲೇ ಇದೆ. ದೇಶ ಮಟ್ಟದಲ್ಲಿ ಕನ್ನಡದ ಸಿನಿಮಾ ಸದ್ದು ಮಾಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.

10 ಗಂಟೆಗಳಲ್ಲಿ 93 ಲಕ್ಷ ವೀಕ್ಷಣೆ ಕಂಡ ‘ತೂಫಾನ್​’ ಸಾಂಗ್​; ಟ್ರೆಂಡಿಂಗ್​ನಲ್ಲಿ 1ನೇ ಸ್ಥಾನ
ಯಶ್
Follow us on

‘ಕೆಜಿಎಫ್​ 2’ ಚಿತ್ರದ (KGF 2) ‘ತೂಫಾನ್​..’ ಹಾಡು ನಿಜಕ್ಕೂ ಬಿರುಗಾಳಿಯನ್ನೇ ಎಬ್ಬಿಸಿದೆ. ಯಶ್ (Yash) ಚಿತ್ರದ ಲಿರಿಕಲ್​ ವಿಡಿಯೋವನ್ನು ಅಭಿಮಾನಿಗಳು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ, 10 ಗಂಟೆಯಲ್ಲಿ ‘ತೂಫಾನ್​..’ ಹಾಡಿನ (Toofan Lyrical song) ವೀಕ್ಷಣೆ ಕೋಟಿ ಸಮೀಪಿಸಿದೆ. ಇದು ‘ಕೆಜಿಎಫ್​ 2’ ಚಿತ್ರದ ಮೇಲಿರುವ ಕ್ರೇಜ್​ ಎಷ್ಟು ಎಂಬುದಕ್ಕೆ ಹಿಡಿದ ಕನ್ನಡಿ ಆಗಿದೆ. ಕೇವಲ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗಿನಲ್ಲೂ ಈ ಹಾಡು ಸದ್ದು ಮಾಡುತ್ತಿದೆ. ಸದ್ಯ, ಚಿತ್ರದ ಟ್ರೇಲರ್​ಗಾಗಿ ಫ್ಯಾನ್ಸ್ ಕಾದು ಕೂತಿದ್ದಾರೆ.

‘ಕೆಜಿಎಫ್​ 2’ ಚಿತ್ರದ ಬಗ್ಗೆ ಇರುವ ಕ್ರೇಜ್​ ತುಂಬಾನೇ ದೊಡ್ಡ ಮಟ್ಟದ್ದು ಅನ್ನೋದು ಪದೇಪದೇ ಸಾಬೀತಾಗುತ್ತಲೇ ಇದೆ. ದೇಶ ಮಟ್ಟದಲ್ಲಿ ಕನ್ನಡದ ಸಿನಿಮಾ ಸದ್ದು ಮಾಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಇಂದು (ಮಾರ್ಚ್​ 21) ರಿಲೀಸ್ ಆದ ಚಿತ್ರದ ‘ತೂಫಾನ್​..’ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಹಾಡು ರಿಲೀಸ್​ ಆದ 10 ಗಂಟೆಯಲ್ಲಿ ಐದು ಭಾಷೆಗಳಿಂದ ಬರೋಬ್ಬರಿ 9.3 ಮಿಲಿಯನ್ ಅಂದರೆ 93 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಈ ಹಾಡನ್ನು ಕೇಳಿ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ರವಿ ಬಸ್ರೂರ್​ ಸಂಗೀತಕ್ಕೆ ತಲೆ ಆಡಿಸಿದ್ದಾರೆ. ತೆಲುಗು, ತಮಿಳಿನಲ್ಲೂ ಸಿನಿಮಾದ ಹಾಡು ಸದ್ದು ಮಾಡುತ್ತಿದೆ. ತೆಲುಗಿನಲ್ಲಿ 21 ಲಕ್ಷ, ತಮಿಳಿನಲ್ಲಿ 7 ಲಕ್ಷ, ಮಲಯಾಳಂನಲ್ಲಿ 3 ಲಕ್ಷ ಹಾಗೂ ಹಿಂದಿಯಲ್ಲಿ 30 ಲಕ್ಷ ಬಾರಿ ಈ ಹಾಡು ವೀಕ್ಷಣೆ ಕಂಡಿದೆ. ಈ ಮೂಲಕ ಈ ಹಾಡು ಐದು ಭಾಷೆಗಳಿಂದ 93 ಲಕ್ಷ ಬಾರಿ ವೀಕ್ಷಣೆ ಕಂಡಂತಾಗಿದೆ.

‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ ಗೆಲ್ಲಲು ಹಾಡುಗಳು ಕೂಡ ಪ್ರಮುಖ ಕಾರಣ ಆಗಿದ್ದವು. ಸಖತ್​ ಮಾಸ್​ ಆದಂತಹ ಹಾಡುಗಳನ್ನು ರವಿ ಬಸ್ರೂರು ನೀಡಿದ್ದರು. ಈಗ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಸಾಂಗ್ಸ್​ ಮೇಲೆ ಅದೇ ಮಟ್ಟದ ನಿರೀಕ್ಷೆ ಇದೆ. ಸದ್ಯ ಮೊದಲ ಹಾಡು ಬಿಡುಗಡೆ ಆಗಿದ್ದು, ಅದಕ್ಕೆ ರವಿ ಬಸ್ರೂರು ಅವರೇ ಸಾಹಿತ್ಯ ಬರೆದಿದ್ದಾರೆ. ಇನ್ನುಳಿದ ಹಾಡುಗಳಿಗಾಗಿ ಫ್ಯಾನ್ಸ್​ ಕಾಯುವಂತಾಗಿದೆ. ಸದ್ಯ ರಿಲೀಸ್​ ಆಗಿರಯವ ‘ತೂಫಾನ್​’ ಹಾಡಿನಲ್ಲಿ ಕೆಲವು ಡೈಲಾಗ್​ಗಳು ಕೂಡ ಹೈಲೈಟ್​ ಆಗಿವೆ. ಅವುಗಳನ್ನು ಕೇಳಿ ಸಿನಿಪ್ರಿಯರು ಎಂಜಾಯ್​ ಮಾಡುತ್ತಿದ್ದಾರೆ.

‘ಕೆಜಿಎಫ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್​ ಆಗಿತ್ತು. ಬಾಲಿವುಡ್ ಮಂದಿ ಕೂಡ ಈ ಚಿತ್ರವನ್ನು ಒಪ್ಪಿಕೊಂಡರು. ಹೀಗಾಗಿ, ಹಿಂದಿಯಲ್ಲಿ ಸಿನಿಮಾ 44 ಕೋಟಿ ರೂಪಾಯಿ ಗಳಿಕೆ ಮಾಡಿತು. ಕನ್ನಡದ ಸಿನಿಮಾ ಹಿಂದಿಯಲ್ಲಿ ಇಷ್ಟು ದೊಡ್ಡ ಮಟ್ಟದ ಗಳಿಕೆ ಮಾಡಿದ್ದು ಅದೇ ಮೊದಲು. ಈ ಕಾರಣಕ್ಕೆ ‘ಕೆಜಿಎಫ್​ 2’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಇನ್ನು, ‘ಕೆಜಿಎಫ್​ 2’ನಲ್ಲಿ ಬಾಲಿವುಡ್​ನ ದಿಗ್ಗಜರಿದ್ದಾರೆ. ಖ್ಯಾತ ನಟ ಸಂಜಯ್ ದತ್​ ಅವರು ಈ ಸಿನಿಮಾದಲ್ಲಿ ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ರವೀನಾ ಟಂಡನ್​ ರಾಜಕಾರಣಿಯ ಪಾತ್ರ ಮಾಡುತ್ತಿದ್ದಾರೆ. ಹೀಗಾಗಿ, ‘ಕೆಜಿಎಫ್​ 2’ಗೆ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗುತ್ತಿದೆ.

ಇದನ್ನೂ ಓದಿ: Toofan Lyrical Video: ಬಂದೇ ಬಿಡ್ತು ತೂಫಾನ್​; ‘ಕೆಜಿಎಫ್​ ಚಾಪ್ಟರ್​ 2’ ಚಿತ್ರದ ಮೊದಲ ಲಿರಿಕಲ್​ ವಿಡಿಯೋ ರಿಲೀಸ್​

‘ತೂಫಾನ್’ ಅವತಾರದಲ್ಲಿ ಬಂದ ಯಶ್​; ‘ಕೆಜಿಎಫ್​ 2’ ಮೇಲಿನ ಕಾತರಕ್ಕೆ ಕಿಚ್ಚು ಹೊತ್ತಿಸಿವೆ ಈ ಲುಕ್​ಗಳು

Published On - 9:22 pm, Mon, 21 March 22