‘ಕೆಜಿಎಫ್ ಚಾಪ್ಟರ್ 2’ ಸಿನಿಮಾ (KGF Chapter 2) ತೆರೆಗೆ ಬರೋಕೆ ರೆಡಿ ಆಗಿದೆ. ಏಪ್ರಿಲ್ 14ರಂದು ವಿಶ್ವಾದ್ಯಂತ ಯಶ್ (Yash) ನಟನೆಯ ಈ ಸಿನಿಮಾ ರಿಲೀಸ್ ಆಗುತ್ತಿದೆ. ನಿಧಾನವಾಗಿ ‘ಕೆಜಿಎಫ್ 2’ ತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಮಾರ್ಚ್ 21ರಂದು ‘ಕೆಜಿಎಫ್ 2’ ಟೀಂ ಹೊಸ ಸಾಂಗ್ ಬಿಡೋಕೆ ಸಿದ್ಧತೆ ಮಾಡಿಕೊಂಡಿದೆ. ‘ತೂಫಾನ್..’ (Toofan Song) ಹೆಸರಿನ ಲಿರಿಕಲ್ ಸಾಂಗ್ ರಿಲೀಸ್ ಮಾಡುವ ಮೂಲಕ ಹವಾ ಸೃಷ್ಟಿಸಲು ‘ಕೆಜಿಎಫ್’ ತಂಡ ರೆಡಿ ಆಗಿದೆ. ಇದಕ್ಕಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಅದಕ್ಕೂ ಮೊದಲು ‘ಕೆಜಿಎಫ್ 2’ ತಂಡ ಅಭಿಮಾನಿಗಳಿಗೆ ಅಲರ್ಟ್ ಒಂದನ್ನು ನೀಡಿದೆ.
‘ಕೆಜಿಎಫ್ 2’ ಸಿನಿಮಾದ ಹೊಸ ಪೋಸ್ಟರ್ಅನ್ನು ಚಿತ್ರತಂಡ ಇಂದು (ಮಾರ್ಚ್ 20) ಬಿಡುಗಡೆ ಮಾಡಿದೆ. ಬ್ಯಾಕ್ಗ್ರೌಂಡ್ ಸಂಪೂರ್ಣವಾಗಿ ಕೆಂಪು ಬಣ್ಣದಲ್ಲಿ ಕಾಣಿಸಿದೆ. ಇದರ ಮಧ್ಯೆ ಯಶ್ ನಿಂತಿದ್ದಾರೆ. ಅವರ ಲುಕ್ ಹಾಗೂ ಗತ್ತು ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಅಲ್ಲದೆ, ಯಾವ ಯೂಟ್ಯೂಬ್ ಚಾನೆಲ್ನಲ್ಲಿ ಸಾಂಗ್ ರಿಲೀಸ್ ಆಗಲಿದೆ ಎಂಬ ಅಲರ್ಟ್ಅನ್ನು ಕೂಡ ನೀಡಿದೆ ತಂಡ.
‘ಕೆಜಿಎಫ್ 2’ ಕನ್ನಡ ಮಾತ್ರವಲ್ಲದೆ, ದಕ್ಷಿಣ ಭಾರತದ ಭಾಷೆಗಳಾದ ತೆಲುಗು, ತಮಿಳು, ಮಲಯಾಳಂನಲ್ಲಿ ರಿಲೀಸ್ ಆಗುತ್ತಿದೆ. ಹಿಂದಿಯಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಎಲ್ಲಾ ಭಾಷೆಗಳಲ್ಲಿ ಮಾರ್ಚ್ 21ರಂದು ಸಾಂಗ್ ರಿಲೀಸ್ ಆಗಲಿದೆ. ಈ ಬಗ್ಗೆ ಚಿತ್ರತಂಡ ಅಪ್ಡೇಟ್ ನೀಡಿದೆ. ದಕ್ಷಿಣ ಭಾರತದ ಸಾಂಗ್ ಲಹರಿ ಮ್ಯೂಸಿಕ್ನಲ್ಲಿ ಹಾಗೂ ಹಿಂದಿ ವರ್ಷನ್, ಎಂಆರ್ಟಿ ಮ್ಯೂಸಿಕ್ನಲ್ಲಿ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ನೀಡಲಾಗಿದೆ.
#Toofan Lyrical Video Song from tomorrow at 11:07 AM.
South Versions on @LahariMusic: https://t.co/TYFopfZdVV
Hindi Version on @Mrtmusicoff: https://t.co/izzHFwwZyD
Music by @RaviBasrur ?#KGFChapter2 @TheNameIsYash @prashanth_neel @VKiragandur @hombalefilms pic.twitter.com/eFPllHFp3Z
— Hombale Films (@hombalefilms) March 20, 2022
ಏಪ್ರಿಲ್ 14ರಂದು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ಪ್ರಚಾರ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಅದಕ್ಕಾಗಿ ಈಗಾಗಲೇ ಭರದ ಸಿದ್ಧತೆ ನಡೆದಿದೆ. ಭಾರತ ಮಾತ್ರವಲ್ಲದೇ ವಿದೇಶದ ಚಿತ್ರಮಂದಿರಗಳಲ್ಲಿ ಸ್ಟ್ಯಾಂಡಿ ಮತ್ತು ಪೋಸ್ಟರ್ಗಳನ್ನು ಪ್ರದರ್ಶಿಸಲು ತಯಾರಿ ನಡೆದಿದೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಸ್ಟ್ಯಾಂಡಿಗಳು ವಿಶೇಷವಾಗಿ ವಿನ್ಯಾಸಗೊಂಡಿವೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿರುವುದರಿಂದ ಅದೇ ರೀತಿಯಲ್ಲಿ ಭರ್ಜರಿ ಪ್ರಚಾರಕಾರ್ಯಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಬಾಲಿವುಡ್ ಸ್ಟಾರ್ ಕಲಾವಿದರಾದ ಸಂಜಯ್ ದತ್, ರವೀನಾ ಟಂಡನ್ ಕೂಡ ನಟಿಸಿರುವುದರಿಂದ ಸಹಜವಾಗಿಯೇ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹೈಪ್ ಹೆಚ್ಚಿದೆ. ಅಧೀರ ಎಂಬ ಡಿಫರೆಂಟ್ ಪಾತ್ರಕ್ಕೆ ಸಂಜಯ್ ದತ್ ಬಣ್ಣ ಹಚ್ಚಿದ್ದಾರೆ. ರಮಿಕಾ ಸೇನ್ ಎಂಬ ಪವರ್ಫುಲ್ ಮಹಿಳೆಯಾಗಿ ರವೀನಾ ಟಂಡನ್ ಕಾಣಿಸಿಕೊಳ್ಳಲಿದ್ದಾರೆ. ಆ ಪಾತ್ರದ ಝಲಕ್ ಹೇಗಿರಲಿದೆ ಎಂಬುದನ್ನು ಈಗಾಗಲೇ ತೋರಿಸಲಾಗಿದೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’ಯಲ್ಲಿ ‘ಕೆಜಿಎಫ್’ ಚಿತ್ರದ ಬಗ್ಗೆ ಉಲ್ಲೇಖ; ಇಲ್ಲಿದೆ ವಿಡಿಯೋ