
ಕಿಚ್ಚ ಸುದೀಪ್ ಅವರು ನಟನೆಯ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ ಎಂಬುದು ಗೊತ್ತೇ ಇದೆ. ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವು ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ‘ಈಗ’ ಚಿತ್ರದಲ್ಲಿ ಅವರ ನಟನೆಯ ಬಗ್ಗೆ ಮತ್ತೆ ಹೇಳುವ ಅಗತ್ಯವೇ ಇಲ್ಲ. ಅವರು ನಿರ್ದೇಶನದ ಮೂಲಕವೂ ಫೇಮಸ್ ಆದವರು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಟನಾಗಿ ನೀಡಿದ್ದಾರೆ. ಅವರು ಈಗ ನಿರ್ಮಾಪಕ ಕೂಡ ಹೌದು. ಹಾಗಾದರೆ ಸಿನಿಮಾದಲ್ಲಿ ಅವರಿಗೆ ಯಾವುದು ತುಂಬಾ ಹೆಚ್ಚು ಇಷ್ಪಪಡುತ್ತಾರೆ? ಇದಕ್ಕೆ ಅವರು ಉತ್ತರ ನೀಡಿದ್ದಾರೆ. ಅವರು ಈ ಮೊದಲು ತಮಿಳು ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದರು.
ಸುದೀಪ್ ಅವರು ಚಿತ್ರರಂಗಕ್ಕೆ ಸಾಕಷ್ಟು ಇಷ್ಟಪಟ್ಟು ಬಂದವರು. ನಿರ್ದೇಶನಕನಾಗಲು ಬಂದವರು ನಟನಾದರು. ಅವರಿಗೆ ಚಿತ್ರರಂಗದ ಪ್ರತಿ ವಿಷಯವೂ ಇಷ್ಟ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಕಾರಣದಿಂದಲೇ ಅವರು ಚಿತ್ರರಂಗದಲ್ಲಿ ಇಷ್ಟು ವರ್ಷಗಳ ಕಾಲ ಇದ್ದ ಬಳಿಕ ಅವರು ಯಶಸ್ಸು ಕಾಣುತ್ತಾ ಇದ್ದಾರೆ. ಅವರು ನಟನೆ, ನಿರ್ದೇಶನ ಎನ್ನದೇ ಇಡೀ ಚಿತ್ರರಂಗವನ್ನು, ಸಿನಿಮಾನ ಇಷ್ಟಪಡುವವರಾಗಿದ್ದಾರೆ.
ನನಗೆ ನಿರ್ದೇಶನ ನಟನೆ ಎಂದಲ್ಲ, ನನಗೆ ಸಿನಿಮಾ ಎಂಬುದೇ ಇಷ್ಟ. ಸಿನಿಮಾ ಮಾಡಲು ಇಷ್ಟಪಡುತ್ತೇನೆ. ಒಂದು ಪೇಂಟಿಂಗ್ ಎಂದಾಗ ನಾನು ಅದರಲ್ಲಿ ಒಂದು ಬಣ್ಣ ಆಗಲು ಇಷ್ಟಪಡುತ್ತೇನೆ. ನಾನು ಸ್ಟಾರ್ ಎಂಬ ಕಾರಣಕ್ಕೆ ಇಡೀ ಪೇಯಿಂಟ್ ನಾನೇ ಎಂದು ಹೇಳಲ್ಲ ಎಂದಿದ್ದರು ಸುದೀಪ್.
ಇದನ್ನೂ ಓದಿ: ಸುದೀಪ್ ಜೊತೆಗೆ ಸಿನಿಮಾ ಘೋಷಿಸಿದ ಪ್ರೇಮ್: ಕಿಚ್ಚನ ಅಭಿಮಾನಿಗಳಿಗೆ ಭಯ
‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ‘ಮ್ಯಾಕ್ಸ್’ ಸಿನಿಮಾ ಬಳಿಕ ರಿಲೀಸ್ ಆದ ಈ ಚಿತ್ರ ಗಮನ ಸೆಳೆಯಲು ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ ತಮಿಳಿನ ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೂಲಕ ಅವರು ಮೆಚ್ಚುಗೆ ಪಡೆಯೋ ನಿರೀಕ್ಷೆ ಇದೆ. ‘ಮ್ಯಾಕ್ಸ್’ ಸಿನಿಮಾ ಕೂಡ ಕಳೆದ ವರ್ಷ ಇದೇ ದಿನ ತೆರೆಗೆ ಬಂದಿತ್ತು. ಈಗ ಅವರು ‘ಮಾರ್ಕ್’ ಚಿತ್ರದಲ್ಲಿ ಮತ್ತೆ ಪೊಲೀಸ್ ಅವತಾರ ತಾಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.