ಲೀಕ್ ಆಯ್ತಾ ಕಿಚ್ಚ ಸುದೀಪ್-ಪ್ರೇಮ್ ಹೊಸ ಸಿನಿಮಾ ಟೈಟಲ್?

ಆ ಸಿನಿಮಾದ ಬಳಿಕ ಮತ್ತೆ ಪ್ರೇಮ್ ಮತ್ತು ಸುದೀಪ್ ಒಟ್ಟಿಗೆ ಕೆಲಸ ಮಾಡುವುದಿಲ್ಲವೇನೋ ಎಂದೇ ಹಲವರು ಎಣಿಸಿದ್ದರು. ಆದರೆ ಅದನ್ನೆಲ್ಲ ಸುಳ್ಳು ಮಾಡಿ ಇದೀಗ ಸುದೀಪ್ ಅವರು ಪ್ರೇಮ್ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದು, ಸಿನಿಮಾದ ಟೈಟಲ್ ಅನ್ನು ನವೆಂಬರ್ 27ಕ್ಕೆ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ. ಆದರೆ ಅಧಿಕೃತ ಘೋಷಣೆಗೆ ಮುನ್ನ ಸಿನಿಮಾದ ಟೈಟಲ್ ಸೋರಿಕೆ ಆಗಿದೆ ಎನ್ನಲಾಗುತ್ತಿದೆ.

ಲೀಕ್ ಆಯ್ತಾ ಕಿಚ್ಚ ಸುದೀಪ್-ಪ್ರೇಮ್ ಹೊಸ ಸಿನಿಮಾ ಟೈಟಲ್?
Sudeep Prem

Updated on: Nov 25, 2026 | 3:30 PM

ಮುಖ್ಯಾಂಶಗಳು

  • ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ಸಿನಿಮಾ
  • ಸುದೀಪ್ ಸಿನಿಮಾದ ಹೆಸರು ಲೀಕ್?
  • ಸುದೀಪ್ ಮತ್ತು ಪ್ರೇಮ್ ಸಿನಿಮಾದ ಹೆಸರೇನು?

ಕಿಚ್ಚ ಸುದೀಪ್ ಮತ್ತೊಮ್ಮೆ ನಿರ್ದೇಶಕ ಪ್ರೇಮ್ ಜೊತೆಗೆ ಕೈ ಜೋಡಿಸಿದ್ದಾರೆ. ಪ್ರೇಮ್ ಅವರು ಈ ಹಿಂದೆ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟನೆ ಮಾಡಿದ್ದ ‘ದಿ ವಿಲನ್’ ಸಿನಿಮಾ ನಿರ್ದೇಶಿಸಿದ್ದರು. ಭಾರಿ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ನಿರೀಕ್ಷಿತ ಪ್ರದರ್ಶನವನ್ನು ಕಾಣಲಿಲ್ಲ. ಆ ಸಿನಿಮಾದ ಬಳಿಕ ಮತ್ತೆ ಪ್ರೇಮ್ ಮತ್ತು ಸುದೀಪ್ ಒಟ್ಟಿಗೆ ಕೆಲಸ ಮಾಡುವುದಿಲ್ಲವೇನೋ ಎಂದೇ ಹಲವರು ಎಣಿಸಿದ್ದರು. ಆದರೆ ಅದನ್ನೆಲ್ಲ ಸುಳ್ಳು ಮಾಡಿ ಇದೀಗ ಸುದೀಪ್ ಅವರು ಪ್ರೇಮ್ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದು, ಸಿನಿಮಾದ ಟೈಟಲ್ ಅನ್ನು ನವೆಂಬರ್ 27ಕ್ಕೆ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ. ಆದರೆ ಅಧಿಕೃತ ಘೋಷಣೆಗೆ ಮುನ್ನ ಸಿನಿಮಾದ ಟೈಟಲ್ ಸೋರಿಕೆ ಆಗಿದೆ ಎನ್ನಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲ ಸ್ಕ್ರೀನ್​​ಶಾಟ್​​ಗಳ ಪ್ರಕಾರ ಪ್ರೇಮ್ ನಿರ್ದೇಶನ ಮಾಡುತ್ತಿರುವ ಸುದೀಪ್ ಅವರ ಹೊಸ ಸಿನಿಮಾದ ಹೆಸರು ‘ದಾದಾ ಆನ್ ಹಾಲಿಡೇಸ್’ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಮಾಣ ಪತ್ರವೊಂದು ಹರಿದಾಡುತ್ತಿದೆ. ‘ದಾದಾ ಆನ್ ಹಾಲೀಡೇಸ್’ ಸಿನಿಮಾದ ಟೀಸರ್​ ಪ್ರಸಾರಕ್ಕೆ ಸಿಬಿಎಫ್​​ಸಿಯಿಂದ ಪಡೆಯಲಾಗಿರುವ ಅನುಮತಿ ಪ್ರಮಾಣ ಪತ್ರ ಅದೆನ್ನಲಾಗುತ್ತಿದೆ. ಸುದೀಪ್ ನಟಿಸಿ, ಪ್ರೇಮ್ ನಿರ್ದೇಶನ ಮಾಡುತ್ತಿರುವ ಸಿನಿಮಾಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಇದು ಎಂದು ಸೋಷಿಯಲ್ ಮೀಡಿಯಾನಲ್ಲಿ ಸುದ್ದಿ ಹರಿದಾಡುತ್ತಿದೆ.

Loading...

ಈಗ ವೈರಲ್ ಆಗಿರುವ ಪ್ರಮಾಣ ಪತ್ರದ ಸ್ಕ್ರೀನ್ ಶಾಟ್​​ನಲ್ಲಿರುವ ಮಾಹಿತಿಯಂತೆ, ಟೀಸರ್ 3:15 ನಿಮಿಷ ಅವಧಿಯದ್ದಾಗಿದೆ. ಪ್ರಮಾಣ ಪತ್ರಕ್ಕಾಗಿ ನಿರ್ಮಾಪಕ ಶಶಿಕಿರಣ್ ಆರ್ ಎನ್ನುವರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ‘ಆರುದ್ರ’ ಸಿನಿಮಾಸ್ ನಿರ್ಮಾಣ ಸಂಸ್ಥೆಯ ಮೂಲಕ ಸಲ್ಲಿಕೆ ಮಾಡಲಾಗಿದ್ದು, ನವೆಂಬರ್ 17ರಂದೇ ಟೀಸರ್​ಗೆ ಪ್ರಮಾಣ ಪತ್ರ ನೀಡಲಾಗಿದೆ. ಯಾವುದೇ ಟೀಸರ್ ಅಥವಾ ಟ್ರೈಲರ್ ಅನ್ನು ಚಿತ್ರಮಂದಿರದಲ್ಲಿ ಪ್ರಸಾರ ಮಾಡಲು ಸಿಬಿಎಫ್​​ಸಿಯ ಅನುಮತಿ ಪಡೆಯಬೇಕಾಗುತ್ತದೆ. ಈ ಸಿನಿಮಾದ ಟೀಸರ್ ಅನ್ನು ಚಿತ್ರಮಂದಿರದಲ್ಲಿ ಪ್ರಸಾರ ಮಾಡುವ ಉದ್ದೇಶ ಚಿತ್ರತಂಡಕ್ಕೆ ಇರುವ ಕಾರಣ, ಇದೀಗ ಟೀಸರ್​​ಗೆ ಅನುಮತಿ ಪಡೆಯಲಾಗಿದ್ದಿರಬಹುದು.

ಇದನ್ನೂ ಓದಿ:ಕಿರಣ್ ಶಾಸ್ತ್ರಿ ದಿಟ್ಟ ಆಟಕ್ಕೆ ಸುದೀಪ್ ಕಡೆಯಿಂದ ಸಿಕ್ತು ವಿಶೇಷ ಉಡುಗೊರೆ

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆ ಆಗಿ ವರ್ಷವಾಗುತ್ತಾ ಬರುತ್ತಿದೆ. ಕಳೆದ ವರ್ಷ ಡಿಸೆಂಬರ್​​ನಲ್ಲಿ ‘ಮಾರ್ಕ್’ ರಿಲೀಸ್ ಆಗಿತ್ತು. ಇದೀಗ ಸುದೀಪ್ ಅವರು ‘ಬಿಲ್ಲ ರಂಗ ಭಾಷಾ’ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಮುಗಿಸಿದ್ದು, ಪ್ರೇಮ್ ಜೊತೆಗೆ ಹೊಸ ಸಿನಿಮಾದ ಚಿತ್ರೀಕರಣ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಇದು ಮಾತ್ರವೇ ಅಲ್ಲದೆ ಇನ್ನೂ ಹಲವು ಸಿನಿಮಾಗಳಲ್ಲಿ ಸುದೀಪ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ದೇವರಾಯ’, ತಮಿಳಿನ ನಿರ್ದೇಶಕ ಚೇರನ್ ನಿರ್ದೇಶನ ಮಾಡಲಿರುವ ಸಿನಿಮಾದ ಜೊತೆಗೆ ಇನ್ನೂ ಕೆಲ ಸಿನಿಮಾಗಳಲ್ಲಿ ಸುದೀಪ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us