Sudeep: ‘ಬೆದರಿಕೆ ಪತ್ರ ಬರೆದಿದ್ದು ಚಿತ್ರರಂಗದವರು’: ಶಾಕಿಂಗ್​ ವಿಚಾರ ಬಯಲು ಮಾಡಿದ ಕಿಚ್ಚ ಸುದೀಪ್​

|

Updated on: Apr 05, 2023 | 1:54 PM

Kichcha Sudeep Threat Letter: ‘ಖಂಡಿತ ಇದನ್ನ ಚಿತ್ರರಂಗದವರೇ ಮಾಡಿಸಿದ್ದಾರೆ. ಅದಕ್ಕೆ ಹೇಗೆ ಉತ್ತರ ಕೊಡಬೇಕು ಅಂತ ನನಗೆ ಗೊತ್ತಿದೆ. ಇವೆಲ್ಲ ಕಾನೂನಿನ ಪ್ರಕಾರ ಹೋದರೆ ಒಳ್ಳೆಯದು’ ಎಂದು ಸುದೀಪ್​ ಹೇಳಿದ್ದಾರೆ.

Sudeep: ‘ಬೆದರಿಕೆ ಪತ್ರ ಬರೆದಿದ್ದು ಚಿತ್ರರಂಗದವರು’: ಶಾಕಿಂಗ್​ ವಿಚಾರ ಬಯಲು ಮಾಡಿದ ಕಿಚ್ಚ ಸುದೀಪ್​
ಸುದೀಪ್
Follow us on

ನಟ ಕಿಚ್ಚ ಸುದೀಪ್​ (Kichcha Sudeep) ಅವರಿಗೆ ಕಿಡಿಗೇಡಿಗಳು ಬೆದರಿಕೆ ಪತ್ರ ಕಳಿಸಿರುವ ಪ್ರಕರಣ ಸಂಚಲನ ಸೃಷ್ಟಿ ಮಾಡಿದೆ. ಸುದೀಪ್​ ಅವರು ಬಿಜೆಪಿ ಜೊತೆ ಕೈ ಜೋಡಿಸುತ್ತಾರೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬೆದರಿಕೆ ಪತ್ರ (Threat Letter) ಬಂದಿರುವುದರಿಂದ ಇದು ರಾಜಕೀಯದವರ ಕೈವಾಡ ಇರಬಹುದು ಎಂದು ಊಹಿಸಲಾಗಿತ್ತು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬೆದರಿಕೆ ಪತ್ರ ಬರೆದಿರುವುದು ರಾಜಕೀಯದವರಲ್ಲ ಎಂದು ಸುದೀಪ್​ ಸ್ಪಷ್ಟನೆ ನೀಡಿದ್ದಾರೆ. ‘ಖಂಡಿತ ಇದನ್ನ ಚಿತ್ರರಂಗದವರೇ ಮಾಡಿಸಿದ್ದಾರೆ. ಯಾರು ಅಂತ ಗೊತ್ತಿದ್ದರೂ ಕೂಡ ಈಗ ಸೈಲೆಂಟಾಗಿ ಇರುತ್ತೇನೆ. ಅದಕ್ಕೆ ಹೇಗೆ ಉತ್ತರ ಕೊಡಬೇಕು ಅಂತ ನನಗೆ ಗೊತ್ತಿದೆ. ಇವೆಲ್ಲ ಕಾನೂನಿನ ಪ್ರಕಾರ ಹೋದರೆ ಒಳ್ಳೆಯದು’ ಎಂದು ಸುದೀಪ್​ ಹೇಳಿದ್ದಾರೆ.

‘ಯಾರು ಪತ್ರ ಬರೆದಿದ್ದಾರೆ ಎಂಬ ವಿಚಾರ ಹೊರಗಡೆ ಬರುತ್ತದೆ. ಅದನ್ನು ನಾನು ಸುಮ್ಮನೆ ಬಿಡುವುದಿಲ್ಲ. ಕೆಲವು ನಿಲುವುಗಳನ್ನು ತೆಗೆದುಕೊಂಡಿದ್ದೇನೆ. ಅದಕ್ಕೆ ಬದ್ಧವಾಗಿದ್ದೇನೆ. ಎಲ್ಲ ಪಕ್ಷದಲ್ಲೂ ನನಗೆ ಆತ್ಮೀಯರು ಇದ್ದಾರೆ. ನನ್ನ ಪರ ಇರುವವರಿಗಾಗಿ ನಾವು ಕೆಲವು ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಸುದೀಪ್​ ಹೇಳಿದ್ದಾರೆ.

ಇದನ್ನೂ ಓದಿ: Kichcha Sudeep: ನಟ ಕಿಚ್ಚ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಇದನ್ನೂ ಓದಿ
‘ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ, ಯಾರಿಗೂ ಟಿಕೆಟ್ ಕೇಳಿಲ್ಲ’; ಸುದೀಪ್ ಸ್ಪಷ್ಟನೆ
Kiccha Sudeep: ತೆರೆಮೇಲೆ ಸುದೀಪ್​ ರಾಜಕಾರಣಿ ಪಾತ್ರ ಮಾಡಿದ್ದು ಒಮ್ಮೆ ಮಾತ್ರ; ‘ಕಿಚ್ಚ’ ಚಿತ್ರದಲ್ಲಿತ್ತು ಪಕ್ಕಾ ಪೊಲಿಟಿಕಲ್​ ಕಥೆ​
‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’; ಸುದೀಪ್ ಬಿಜೆಪಿ ಸೇರ್ತಾರೆ ಎನ್ನುವ ವಿಚಾರದಲ್ಲಿ ಪ್ರಕಾಶ್ ರಾಜ್ ಪ್ರತಿಕ್ರಿಯೆ
Kichcha Sudeep: ನಟ ಕಿಚ್ಚ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

‘ಇಂಥ ಕೆಲಸ ಮಾಡುವ ಬೇರೆಯವರಿಗೂ ಇದು ಒಂದು ಪಾಠ ಆಗಬೇಕಿದೆ. ವಿಳಾಸ ಗೊತ್ತಿದೆ ಎಂದಮಾತ್ರಕ್ಕೆ ಯಾರು ಬೇಕಾದರೂ ಒಂದು ಪೋಸ್ಟ್​ ಮಾಡುತ್ತಾರೆ. ಇದಕ್ಕೂ ರಾಜಕೀಯದಲ್ಲಿ ಇರುವವರಿಗೂ ಯಾವುದೇ ಸಂಬಂಧ ಇಲ್ಲ. ಚಿತ್ರರಂಗದಲ್ಲಿ ಇರುವವರೇ ಇದನ್ನು ಮಾಡಿದ್ದಾರೆ. ಅವರು ಯಾರು ಎಂಬುದು ಕೂಡ ನನಗೆ ಗೊತ್ತು. ಆ ಬಗ್ಗೆ ನಾನು ಇವತ್ತು ಮಾತನಾಡಲ್ಲ. ಸರಿಯಾದ ದಾರಿಯಲ್ಲೇ ಅದು ಬರಲಿ. ಒಂದು ವಿಚಾರ ತಿಳಿದುಕೊಳ್ಳಿ. ನಾನು ಯಾವುದಕ್ಕೂ ಹೆದರುವವನಲ್ಲ. ಅದಂತೂ ಸತ್ಯ’ ಎಂದಿದ್ದಾರೆ ಸುದೀಪ್​.

ಇದನ್ನೂ ಓದಿ: Kiccha Sudeep: ತೆರೆಮೇಲೆ ಸುದೀಪ್​ ರಾಜಕಾರಣಿ ಪಾತ್ರ ಮಾಡಿದ್ದು ಒಮ್ಮೆ ಮಾತ್ರ; ‘ಕಿಚ್ಚ’ ಚಿತ್ರದಲ್ಲಿತ್ತು ಪಕ್ಕಾ ಪೊಲಿಟಿಕಲ್​ ಕಥೆ​

ಪ್ರಮುಖ ರಾಜಕೀಯ ಪಕ್ಷಗಳಿಂದ ಸುದೀಪ್​ ಅವರಿಗೆ ಮಣೆ ಹಾಕುವ ಪ್ರಯತ್ನ ಕೆಲವು ತಿಂಗಳಿಂದ ನಡೆಯುತ್ತಿತ್ತು. ಆ ವಿಚಾರದಲ್ಲಿ ಸುದೀಪ್​ ಈಗ ನಿರ್ಧಾರ ತೆಗೆದುಕೊಂಡಿದ್ದಾರೆ. ‘ನನ್ನ ಜೊತೆ ಪ್ರೀತಿಯಿಂದ ಇರುವವರ ಪರವಾಗಿ ನಿಂತುಕೊಳ್ಳುಬೇಕು ಅಂದರೆ ನಾನು ನಿಂತುಕೊಳ್ಳುತ್ತೇನೆ. ಯಾವುತ್ತೋ ಒಂದು ದಿನ ಕೆಲವು ವ್ಯಕ್ತಿಗಳು ನನ್ನ ಕೈ ಹಿಡಿದಿದ್ದಾರೆ. ಅದನ್ನು ನಾನು ಮರೆಯಬಾರದು’ ಎಂದು ಸುದೀಪ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:18 pm, Wed, 5 April 23