
ನಟ ಕಿಚ್ಚ ಸುದೀಪ್ (Sudeep) ಅವರು ನಮ್ಮ ನೆಲ, ಜಲ, ಭಾಷೆ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ನಮ್ಮ ನಾಡಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಅವಮಾನ ಆದರೂ ಅದನ್ನು ಸಹಿಸೋದಿಲ್ಲ. ಕನ್ನಡವನ್ನು ‘ಕನ್ನಡ್’ ಎಂದು ಪರಭಾಷಿಗರು ಹೇಳಿದಾಗ ಅದನ್ನು ತಿದ್ದಿದ್ದರು. ಈಗ ಕನ್ನಡ ಬಾವುಟಕ್ಕೆ ಅವಮಾನ ಆದ ಜಾಗದಲ್ಲೇ ನಮ್ಮ ಬಾವುಟ ಹಾರಿಸಿದ್ದಾರೆ.
ಶಬರಿಮಲೆಗೆ ತೆರಳುವ ಮಾರ್ಗದಲ್ಲಿ ತಮಿಳುನಾಡಿನ ಈರೋಡ್ ಬಳಿ ಕರ್ನಾಟಕದಿಂದ ತೆರಳೋ ಮಾಲಾಧಾರಿಗೆಳಿಗೆ ಸಮಸ್ಯೆ ಮಾಡಲಾಗಿತ್ತು. ಕರ್ನಾಟಕದ ಬಾವುಟ ಹೊಂದಿರುವ ವಾಹನಗಳನ್ನು ಅಡ್ಡಗಟ್ಟಲಾಗಿತ್ತು. ವಾಹನದ ಮೇಲಿನ ಬಾವುಟಗಳನ್ನು ತೆಗೆಸಲಾಗಿದೆ. ಈ ರೀತಿಯ ಘಟನೆ ಪದೇ ಪದೇ ನಡೆಯುತ್ತಿದೆ. ಇದನ್ನು ಅನೇಕರು ಖಂಡಿಸಿದ್ದರು. ತಮಿಳುನಾಡಿನಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಆಗಿದೆ ಎಂಬ ಆರೋಪ ಕೇಳಿ ಬಂತು.
ಇತ್ತೀಚಿಗೆ ತಮಿಳುನಾಡಿನಲ್ಲಿ ಅಪಮಾನಕ್ಕೊಳಗಾದ ಅದೇ ಸ್ಥಳದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಬಾಸ್ ಕರ್ನಾಟಕ ಧ್ವಜವನ್ನು ಎತ್ತಿ ಹಿಡಿದಿದ್ದಾರೆ..🔥💛❤️🌟
Pride of Kannada Cenima ❤️🔥@KicchaSudeep 👑#KicchaSudeep #KarnatakaBulldozers #CCL2026 #BRBFirstBlood #CCL pic.twitter.com/OZjgVnHulq
— Kichchana Hudugaru Jayanagara (@Team_KHJ_) January 25, 2026
ಈ ಘಟನೆ ನಡೆದ ಕೆಲವೇ ವಾರದಲ್ಲಿ ಸುದೀಪ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅವಮಾನ ಆದ ಜಾಗದಲ್ಲೇ ಕನ್ನಡದ ಬಾವುಟ ಹಾರಿಸಿದ್ದಾರೆ. ಹೌದು, ಜನವರಿ 25ರಂದು ಕರ್ನಾಟಕ ಬುಲ್ಡೋಜರ್ಸ್ vs ಭೋಜ್ಪುರಿ ದಬಾಂಗ್ ಮ್ಯಾಚ್ ನಡೆದಿದೆ. ಈ ಪಂದ್ಯ ನಡೆದಿದ್ದು ತಮಿಳುನಾಡಿನ ಕೊಯಿಮತ್ತೂರಿನಲ್ಲಿ. ಪಂದ್ಯ ಮುಗಿದ ಬಳಿಕ ಸುದೀಪ್ ಬಾವುಟ ಹಾರಿಸಿದ್ದಾರೆ.
ಇದನ್ನೂ ಓದಿ: ರಾಕೆಟ್ ವೇಗ; ಸಿಸಿಎಲ್ನಲ್ಲಿ ಅದ್ಭುತ ಸಿಕ್ಸ್ ಹೊಡೆದ ಕಿಚ್ಚ ಸುದೀಪ್
ಕರ್ನಾಟಕ ಬುಲ್ಡೋಜರ್ಸ್ಗೆ ಜನವರಿ 25ರಂದು ನಡೆದಿದ್ದು ಮೂರನೇ ಪಂದ್ಯ. ಈ ಮೊದಲು ಎರಡೂ ಪಂದ್ಯಗಳನ್ನು ಆಡಿ ಗೆದ್ದಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ 20 ಓವರ್ನಲ್ಲಿ 202 ರನ್ ಕಲೆ ಹಾಕಿತು. ಈ ಬೃಹತ್ ಮೊತ್ತ ಬೆನ್ನು ಹತ್ತಿದ ಬುಲ್ಡೋಜರ್ಸ್ ತಂಡ ಉತ್ತಮ ಆರಂಭವನ್ನೇ ಕಂಡಿತು. ಆದರೆ, ನಂತರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. ಕೊನೆಯ ಓವರ್ನಲ್ಲಿ 26 ರನ್ ಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. 184 ರನ್ಗೆ ದಬಾಂಗ್ಸ್ ಆಲ್ ಔಟ್ ಆಯಿತು. ಈ ಮೂಲಕ ಬುಲ್ಡೋಜರ್ಸ್ ಗೆದ್ದು, ಅಂಕಪಟ್ಟಿಯಲ್ಲಿ ಟಾಪ್ ಸ್ಥಾನ ಗಳಿಸಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.