‘ಬಿಗ್ ಬಾಸ್​’ ರಾಜೀವ್ ನಟನೆಯ ‘ಉಸಿರೇ ಉಸಿರೇ’ ಸಿನಿಮಾ ತಂಡ ಸೇರಿದ ಕಿಚ್ಚ ಸುದೀಪ್

Usire Usire Movie: ‘ಉಸಿರೇ ಉಸಿರೇ’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ.

‘ಬಿಗ್ ಬಾಸ್​’ ರಾಜೀವ್ ನಟನೆಯ ‘ಉಸಿರೇ ಉಸಿರೇ’ ಸಿನಿಮಾ ತಂಡ ಸೇರಿದ ಕಿಚ್ಚ ಸುದೀಪ್
ಸುದೀಪ್
Edited By:

Updated on: Dec 22, 2022 | 12:08 PM

‘ಕನ್ನಡ ಬಿಗ್​ ಬಾಸ್ ಸೀಸನ್ 8’ರಲ್ಲಿ ರಾಜೀವ್ (Rajeev) ಸ್ಪರ್ಧಿಯಾಗಿದ್ದರು. ರಾಜೀವ್ ಹಾಗೂ ಕಿಚ್ಚ ಸುದೀಪ್​ ನಡುವೆ ಒಳ್ಳೆಯ ಗೆಳೆತನವಿದೆ. ಸುದೀಪ್​ (Sudeep) ಅವರನ್ನು ಪ್ರೀತಿಯಿಂದ ಅಣ್ಣ ಎಂದೇ ಸಂಭೋದಿಸುತ್ತಾರೆ ರಾಜೀವ್​. ಇಬ್ಬರಿಗೂ ಕ್ರಿಕೆಟ್​ ಮೇಲೆ ಎಲ್ಲಿಲ್ಲದ ಆಸಕ್ತಿ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯೋಕೆ ಸಿಸಿಎಲ್​ ಕೂಡ ಕಾರಣ. ಈಗ ರಾಜೀವ್​ ನಟಿಸುತ್ತಿರುವ ‘ಉಸಿರೇ ಉಸಿರೇ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತ ಘೋಷಣೆ ಮಾಡಿದೆ.

‘ವಿಕ್ರಾಂತ್ ರೋಣ’ ತೆರೆಕಂಡ ಬಳಿಕ ಸುದೀಪ್ ಅವರ ಹೊಸ ಸಿನಿಮಾ ಘೋಷಣೆ ಆಗಿಲ್ಲ. ಅವರು ಉಪೇಂದ್ರ ಅವರ ‘ಕಬ್ಜಾ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ನಿರ್ಮಾಣದ ಹೊಸ ಸಿನಿಮಾಗೆ ಸುದೀಪ್ ಹೀರೋ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಶೀಘ್ರವೇ ಈ ಬಗ್ಗೆ ಮಾಹಿತಿ ಹೊರಬೀಳಲಿದೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ‘ಉಸಿರೇ ಉಸಿರೇ’ ಚಿತ್ರತಂಡವನ್ನು ಸುದೀಪ್ ಸೇರಿಕೊಂಡಿದ್ದಾರೆ.

‘ಉಸಿರೇ ಉಸಿರೇ’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡದವರು ಸುದೀಪ್ ಅವರನ್ನು ಭೇಟಿಯಾಗಿದ್ದು ಕಿಚ್ಚ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಪಾತ್ರ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ
Kannadathi Serial: ಭುವಿಗೆ ಸಿಕ್ತು ಕೊಲೆಗಾರನ ಮೊಬೈಲ್; ಶೀಘ್ರವೇ ಬಯಲಾಗಲಿದೆ ಸಂಚು
ರಾಜೀವ್ ಹೊಸ ಚಿತ್ರ ‘ಉಸಿರೇ ಉಸಿರೇ’ಗೆ  ಕಿಚ್ಚ ಸುದೀಪ್ ಸಿನಿಮಾ ಕನೆಕ್ಷನ್​
‘ಸೋನು ನಿಗಂ ಹಾಡಿಗೆ ಕತ್ತರಿ ಹಾಕಿಸಿದ್ದೆ’; ಹುಚ್ಚ ಸಿನಿಮಾದ ‘ಉಸಿರೆ ಉಸಿರೆ’ ಹಾಡಿನ ಬಗ್ಗೆ ಅಚ್ಚರಿ ಸಂಗತಿ ಬಿಚ್ಚಿಟ್ಟ ಸುದೀಪ್

ಇದನ್ನೂ ಓದಿ: ರಾಜೀವ್ ಹೊಸ ಚಿತ್ರ ‘ಉಸಿರೇ ಉಸಿರೇ’ಗೆ  ಕಿಚ್ಚ ಸುದೀಪ್ ಸಿನಿಮಾ ಕನೆಕ್ಷನ್​

ಎನ್. ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿ.ಎಂ. ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ. ರಾಜೀವ್​ಗೆ ನಾಯಕಿಯಾಗಿ ಶ್ರೀಜಿತ ಘೋಷ್ ನಟಿಸುತ್ತಿದ್ದು, ಇದು ಅವರ ಕನ್ನಡದ ಚೊಚ್ಚಲ ಚಿತ್ರ. ಖ್ಯಾತ ನಟ ಅಲಿ ಕೂಡ ಈ ಸಿನಿಮಾದಲ್ಲಿದ್ದಾರೆ.  ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಬ್ರಹ್ಮಾನಂದಮ್, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಸರವಣನ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:27 am, Thu, 22 December 22