AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೋನು ನಿಗಂ ಹಾಡಿಗೆ ಕತ್ತರಿ ಹಾಕಿಸಿದ್ದೆ’; ಹುಚ್ಚ ಸಿನಿಮಾದ ‘ಉಸಿರೆ ಉಸಿರೆ’ ಹಾಡಿನ ಬಗ್ಗೆ ಅಚ್ಚರಿ ಸಂಗತಿ ಬಿಚ್ಚಿಟ್ಟ ಸುದೀಪ್

ಹುಚ್ಚ ಸಿನಿಮಾದ ಸೂಪರ್ ಹಿಟ್ ಹಾಡು ಉಸಿರೆ ಉಸಿರೆ ಹಾಡಿದ್ದ ರಾಜೇಶ್ ಕೃಷ್ಣನ್ ಅವರಿಗೂ ಮೊದಲು ಆ ಹಾಡು ಹಾಡಿದ್ದು ಖ್ಯಾತ ಗಾಯಕ ಸೋನು ನಿಗಂ. ಆ ವೇಳೆ ನಡೆದಿದ್ದ ಅಚ್ಚರಿಯ ಘಟನೆಯನ್ನು ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಬಿಚ್ಚಿಟ್ಟಿದ್ದಾರೆ.

'ಸೋನು ನಿಗಂ ಹಾಡಿಗೆ ಕತ್ತರಿ ಹಾಕಿಸಿದ್ದೆ'; ಹುಚ್ಚ ಸಿನಿಮಾದ 'ಉಸಿರೆ ಉಸಿರೆ' ಹಾಡಿನ ಬಗ್ಗೆ ಅಚ್ಚರಿ ಸಂಗತಿ ಬಿಚ್ಚಿಟ್ಟ ಸುದೀಪ್
ಸುದೀಪ್
TV9 Web
| Updated By: ಸುಷ್ಮಾ ಚಕ್ರೆ|

Updated on:Aug 08, 2021 | 9:45 PM

Share

ಬಿಗ್ ಬಾಸ್​ ಕನ್ನಡ ಸೀಸನ್ 8 ಫಿನಾಲೆ ಎಪಿಸೋಡ್ ಇಂದು ಪ್ರಸಾರವಾಗುತ್ತಿದೆ. ಬಿಗ್ ಬಾಸ್​ ವೇದಿಕೆಯಲ್ಲಿ ಸ್ಪರ್ಧಿಗಳ ಜರ್ನಿಯ ವಿಡಿಯೋಗಳನ್ನು ಹಾಕುವ ಮೂಲಕ ಸರ್​ಪ್ರೈಸ್ ನೀಡುತ್ತಿದ್ದ ನಟ ಕಿಚ್ಚ ಸುದೀಪ್ ಅವರಿಗೆ ಇಂದು ಇಬ್ಬರು ಖ್ಯಾತ ಗಾಯಕರು ಸರ್​ಪ್ರೈಸ್ ನೀಡಿದ್ದಾರೆ. ರಘು ದೀಕ್ಷಿತ್ ಮತ್ತು ರಾಜೇಶ್ ಕೃಷ್ಣನ್ ಕಿಚ್ಚ ಸುದೀಪ್ ನಟಿಸಿರುವ ಸಿನಿಮಾಗಳ ಹಾಡುಗಳನ್ನು ಹಾಡುವ ಮೂಲಕ ತಮ್ಮ ಗೆಳೆಯನಿಗೆ ಸರ್​ಪ್ರೈಸ್ ನೀಡಿದ್ದಾರೆ. ಅವರಿಬ್ಬರ ಜೊತೆ ಸೇರಿ ಕಿಚ್ಚ ಸುದೀಪ್ ಕೂಡ ಹಾಡು ಹಾಡಿದ್ದಾರೆ.

ಈ ವೇಳೆ ತಮ್ಮ ‘ಹುಚ್ಚ’ ಸಿನಿಮಾದ ಬಗ್ಗೆ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿರುವ ಕಿಚ್ಚ ಸುದೀಪ್, ಹುಚ್ಚ ಸಿನಿಮಾದ ವೇಳೆ ನಾನು ಏನೂ ಆಗಿರಲಿಲ್ಲ. ಅದರಲ್ಲಿನ ಉಸಿರೆ ಉಸಿರೆ ಹಾಡನ್ನು ಸೋನು ನಿಗಂ ಹಾಡಿದ್ದರು. ಆದರೆ, ನನಗೆ ಯಾಕೋ ಅವರು ಹಾಡಿದ್ದು ಇಷ್ಟವಾಗಲಿಲ್ಲ. ಅವರಿಗೆ ಕನ್ನಡ ಗೊತ್ತಿಲ್ಲದೇ ಇದ್ದಿದ್ದಕ್ಕೋ ಏನೋ ಆ ಹಾಡಿನಲ್ಲಿ ಫೀಲಿಂಗ್ ಇರಲಿಲ್ಲ. ನಾನು ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಬಳಿ ಇದೇ ವಿಷಯ ಹೇಳಿದೆ. ಆ ಕಾಲಕ್ಕೆ ಸೋನು ನಿಗಂ ದೊಡ್ಡ ಗಾಯಕ.  ಅವರು ಹಾಡಿದ ಹಾಡನ್ನು ತೆಗೆದುಹಾಕುವುದು ಸಣ್ಣ ವಿಷಯವೇನಾಗಿರಲಿಲ್ಲ. ಆದರೆ, ಆ ಹಾಡನ್ನು ನನ್ನ ಗೆಳೆಯ ರಾಜೇಶ್ ಕೃಷ್ಣನ್ ಬಳಿ ಹಾಡಿಸಿ ಎಂದು ರಾಜೇಶ್ ರಾಮನಾಥನ್ ಬಳಿ ಮನವಿ ಮಾಡಿದೆ. ರಾತ್ರಿ ಯಾರೂ ಇಲ್ಲದ ವೇಳೆ ಕರೆದುಕೊಂಡು ಬಂದು ಹಾಡಿಸುತ್ತೇನೆ ಎಂದು ಹೇಳಿದೆ.

ಆಗ ಇನ್ನೂ ಫ್ರೆಷರ್ ಆಗಿದ್ದ ನನ್ನ ಮಾತಿಗೆ ಯಾವ ಬೆಲೆಯೂ ಇರಲಿಲ್ಲ. ಆದರೂ ರಾಜೇಶ್ ರಾಮನಾಥನ್ ನನ್ನ ಮಾತಿಗೆ ಒಪ್ಪಿ ರಾಜೇಶ್ ಕೃಷ್ಣನ್ ಅವರ ಬಳಿ ಹಾಡಿಸಲು ಒಪ್ಪಿದರು. ನೀವು ಬಂದಲ್ಲ, ಆ ದಿನದ ನನ್ನ ಪರಿಸ್ಥಿತಿ ಹೇಗಿತ್ತೆಂದರೆ ರಾಜೇಶ್ ಕೃಷ್ಣನ್ ಹಾಡಿದ್ದಕ್ಕೆ ಅವರಿಗೆ ಪೇಮೆಂಟ್ ಕೂಡ ಕೊಟ್ಟಿರಲಿಲ್ಲ. ಕೊಡಲು ನನ್ನ ಬಳಿ ಹಣವೂ ಇರಲಿಲ್ಲ. ಆದರೂ ನನ್ನ ಮೇಲಿನ ಸ್ನೇಹದಿಂದ ರಾಜೇಶ್ ಬಂದು ಹಾಡಿದರು. ಈಗಲೂ ಸೂಪರ್ ಹಿಟ್ ಹಾಡುಗಳ ಪಟ್ಟಿಯಲ್ಲಿರುವ ಉಸಿರೆ ಉಸಿರೆ ಹಾಡು ನನ್ನ ಫೇವರೆಟ್ ಹಾಡು. ಹುಚ್ಚ ಸಿನಿಮಾದ ಹಾಡುಗಳ ಸಿಡಿ, ಕ್ಯಾಸೆಟ್​ಗಳ ಮೇಲೆ ಈ ಹಾಡನ್ನು ಹಾಡಿದವರ ಜಾಗದಲ್ಲಿ ಸೋನು ನಿಗಂ ಹೆಸರೇ ಇತ್ತು. ಇತ್ತೀಚೆಗೆ ಅಲ್ಲಿ ರಾಜೇಶ್ ಕೃಷ್ಣನ್ ಹೆಸರು ಬಂದಿತು. ಇದೆಲ್ಲ ಸಾಧ್ಯವಾಗಿದ್ದು ಸಂಗೀತ ನಿರ್ದೇಶಕ ರಾಜೇಶ್ ರಾಮನಾಥನ್ ಮನಸು ಮಾಡಿದ್ದಕ್ಕೆ ಎಂದು ಕಿಚ್ಚ ಸುದೀಪ್ ಉಸಿರೆ ಉಸಿರೆ ಹಾಡಿನ ಕುರಿತಾದ ಅಚ್ಚರಿಯ ಮಾಹಿತಿಯನ್ನು ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಬಹಳ ಒಳ್ಳೆಯ ಗಾಯಕ ಎಂಬುದು ಅವರ ಅಭಿಮಾನಿಗಳೆಲ್ಲರಿಗೂ ಗೊತ್ತಿರುವ ವಿಚಾರ. ಜಸ್ಟ್​ ಮಾತ್ ಮಾತಲ್ಲಿ ಟೈಟಲ್ ಸಾಂಗ್ ಹಾಡುವ ಮೂಲಕ ರಘು ದೀಕ್ಷಿತ್ ಕಿಚ್ಚ ಸುದೀಪ್​ಗೆ ಸರ್​ಪ್ರೈಸ್ ಕೊಟ್ಟರೆ ರಾಜೇಶ್ ಕೃಷ್ಣನ್ ಚಂದು ಮತ್ತು ಪಾರ್ಥ ಸಿನಿಮಾದ ಈ ಪ್ರೀತಿ ಒಂಥರಾ ಕಚಗುಳಿ, ಅವಳ ಒಲವ ನಗೆ ಹಾಡುಗಳನ್ನು ಹಾಡಿದರು. ಇದು ಸುದೀಪ್​ಗೆ ಕೂಡ ಅನಿರೀಕ್ಷಿತವಾಗಿತ್ತು. ಇದಾದ ಬಳಿಕ ಬಿಗ್​ ಬಾಸ್​ ಕನ್ನಡ 8ನೇ ಸೀಸನ್​ ವೀಕೆಂಡ್ ಎಪಿಸೋಡ್​ಗಳನ್ನು ನಡೆಸಿಕೊಟ್ಟ ಕಿಚ್ಚ ಸುದೀಪ್ ಅವರ ಜರ್ನಿಯ ವಿಡಿಯೋವನ್ನು ಕೂಡ ವೇದಿಕೆಯಲ್ಲಿ ಹಾಕಲಾಯಿತು.

ಅಂದಹಾಗೆ, ರಾಜೇಶ್ ಕೃಷ್ಣನ್ ಮತ್ತು ರಘು ದೀಕ್ಷಿತ್ ಇದ್ದಕ್ಕಿದ್ದಂತೆ ಬಿಗ್ ಬಾಸ್ ಫಿನಾಲೆಯ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಏಕೆ? ಎಂದು ನೀವು ಯೋಚಿಸುತ್ತಿರಬಹುದು. ಸಂಗೀತ ಲೋಕದ ದಿಗ್ಗಜ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ಸೂಪರ್ ಹಿಟ್ ಕಾರ್ಯಕ್ರಮ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಹೊಸ ರೂಪದಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್, ವಿ. ಹರಿಕೃಷ್ಣನ್ ಹಾಗೂ ರಘು ದೀಕ್ಷಿತ್ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Bigg Boss Kannada Finale: ಬಿಗ್ ಬಾಸ್ ಫಿನಾಲೆ ಎಪಿಸೋಡ್​ನಲ್ಲಾದ ತಪ್ಪಿನ ಕಾರಣ ಬಿಚ್ಚಿಟ್ಟ ಕಿಚ್ಚ ಸುದೀಪ್

ಬಿಗ್ ಬಾಸ್ ಫಿನಾಲೆಯಲ್ಲಿ ಅರವಿಂದ್​ ಕೆಪಿ ಗೆಲುವಿಗೂ, ಸೋಲಿಗೂ ಕಾರಣವಾಗಬಹುದು ಈ ಅಂಶಗಳು

(Kiccha Sudeep Revealed Interesting Story Behind Huccha Movie Usire Song in Bigg Boss Kannada Finale Episode)

Published On - 9:44 pm, Sun, 8 August 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ