AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss 8 Finale: ವಿನ್ನರ್ ಯಾರೆಂದು ಹಾಡಲ್ಲೇ ಸುಳಿವು ಕೊಟ್ಟರಾ ಬಿಗ್ ಬಾಸ್? ಬೇಸರಗೊಂಡ ದಿವ್ಯಾ ಉರುಡುಗ

Divya Uruduga | ಬಿಗ್ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆಯ ಸ್ಟೇಜ್ ಹತ್ತುವ ನಿರೀಕ್ಷೆಯಲ್ಲಿದ್ದ ದಿವ್ಯಾ ಉರುಡುಗ ಅವರಿಗೆ ಕೊನೆಯ ಎಪಿಸೋಡ್​ನಲ್ಲಿ ಬೆಳಗ್ಗೆ ಹಾಕಲಾದ ಆ ಒಂದು ಹಾಡಿನಿಂದ ಟೆನ್ಷನ್ ಹಾಗೂ ಬೇಸರವಾಗಿದೆ. ಯಾವುದು ಆ ಹಾಡು?

Bigg Boss 8 Finale: ವಿನ್ನರ್ ಯಾರೆಂದು ಹಾಡಲ್ಲೇ ಸುಳಿವು ಕೊಟ್ಟರಾ ಬಿಗ್ ಬಾಸ್? ಬೇಸರಗೊಂಡ ದಿವ್ಯಾ ಉರುಡುಗ
ದಿವ್ಯಾ ಉರುಡುಗ
TV9 Web
| Edited By: |

Updated on:Aug 08, 2021 | 8:20 PM

Share

ಬಿಗ್ ಬಾಸ್​ ಕನ್ನಡ 8ನೇ ಸೀಸನ್​ನ ವಿನ್ನರ್ (Bigg Boss Kannada Season 8 Winner)  ಯಾರೆಂಬುದು ಬಹಿರಂಗವಾಗಲು ಕೆಲವೇ ಕ್ಷಣಗಳು ಉಳಿದಿವೆ. ಮಂಜು ಪಾವಗಡ ಮತ್ತು ಅರವಿಂದ್ ಕೆ.ಪಿ. ಇಬ್ಬರೂ ನಟ ಕಿಚ್ಚ ಸುದೀಪ್ (Kiccha Sudeep) ಅವರ ಎಡ-ಬಲದಲ್ಲಿ ನಿಲ್ಲುತ್ತಾರೆಂಬುದು ಬಿಗ್ ಬಾಸ್ ಮೊದಲ ಇನ್ನಿಂಗ್ಸ್​ನಿಂದಲೂ ಇರುವ ಲೆಕ್ಕಾಚಾರ. ಇವರಿಬ್ಬರಲ್ಲಿ ವಿನ್ನರ್ ಯಾರಾಗಲಿದ್ದಾರೆ? ಎಂಬ ಕುತೂಹಲದ ನಡುವೆ ದಿವ್ಯಾ ಉರುಡುಗ ಕೂಡ ಭಾರೀ ಪೈಪೋಟಿ ನೀಡುತ್ತಿರುವುದರಿಂದ ಟಾಪ್​ 2ರಲ್ಲಿ ದಿವ್ಯಾ ಉರುಡುಗ ಕೂಡ ಇರಬಹುದು ಎಂದೂ ಹೇಳಲಾಗುತ್ತಿದೆ. ದಿವ್ಯಾ ಕೂಡ ತಾವು ಫಿನಾಲೆಯ ಸ್ಟೇಜ್ ಏರುತ್ತೇನೆ ಎಂಬ ವಿಶ್ವಾಸದಲ್ಲಿದ್ದರು. ಆದರೆ, ಬಿಗ್ ಬಾಸ್​ 8ನೇ ಸೀಸನ್​ನ ಕೊನೆಯ ಎಪಿಸೋಡ್​ನಲ್ಲಿ ಬೆಳಗ್ಗೆ ಹಾಕಲಾದ ಆ ಒಂದು ಹಾಡಿನಿಂದ ದಿವ್ಯಾ ಉರುಡುಗ ಅವರಿಗೆ ಆತಂಕ ಹೆಚ್ಚಾಗಿದೆ.

ಬಿಗ್ ಬಾಸ್​ ಶೋನ ಕೊನೆಯ ದಿನ ಬೆಳಗ್ಗೆ ಜೂನಿಯರ್ ಎನ್​ಟಿಆರ್​ ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿರುವ ಪುನೀತ್​ ರಾಜ್​ಕುಮಾರ್ ಅಭಿನಯದ ಚಕ್ರವ್ಯೂಹ ಸಿನಿಮಾದ ಹಾಡು ಕೇಳಿ ದಿವ್ಯಾ ಉರುಡುಗ ಸ್ವಲ್ಪ ಬೇಸರಗೊಂಡರಂತೆ. ಈ ವಿಷಯವನ್ನು ಕಿಚ್ಚ ಸುದೀಪ್ ಬಳಿ ದಿವ್ಯಾ ಅವರೇ ಹೇಳಿಕೊಂಡಿದ್ದಾರೆ. ‘ಗೆಳೆಯ ಗೆಳೆಯಾ ಗೆಲುವು ನಮದಯ್ಯ’ ಎಂಬ ಹಾಡು ಕೇಳಿ ಈ ಬಾರಿ ಮಂಜು ಮತ್ತು ಅರವಿಂದ್ ಅವರೇ ಫಿನಾಲೆ ಸ್ಟೇಜ್​ ಹತ್ತುವುದು ಖಚಿತವೇನೋ ಎಂದು ದಿವ್ಯಾ ಲೆಕ್ಕಾಚಾರ ಹಾಕಿದರಂತೆ.

ನೀವು ಬೇರೆ ಯಾವ ಹಾಡು ಹಾಕಿದ್ದರೂ ನನಗೆ ಬೇಜಾರಾಗುತ್ತಿರಲಿಲ್ಲ ಆದರೆ ಗೆಳೆಯ ಗೆಳೆಯ ಅಂತ ಅವರಿಬ್ಬರಿಗೆ ಹೊಂದುವ ಹಾಡು ಹಾಕಿದಾಗ ಹಾಗಾದರೆ ನಾನು ಈ ರೇಸ್​ನಲ್ಲೇ ಇಲ್ವಾ? ಎಂದು ನನಗೆ ಆತಂಕವಾಯ್ತು ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಅದಕ್ಕೆ ನಗುತ್ತಲೇ ಉತ್ತರಿಸಿದ ಕಿಚ್ಚ ಸುದೀಪ್, ನಾವು ಹಾಕೋ ಎಲ್ಲ ಹಾಡಿಗೂ ಅರ್ಥ ಹುಡುಕಬೇಡಿ. ನೀವು ಅದೇ ಯೋಚನೆಯಲ್ಲಿ ಇರುವುದರಿಂದ ಹಾಗೆ ಅನಿಸಿರುತ್ತದೆ ಎಂದು ಹೇಳಿ ಸಮಾಧಾನ ಮಾಡಿದ್ದಾರೆ.

ಹಾಗೇ, ಬಿಗ್​ ಬಾಸ್​ನ ಬೇರೆ ಸ್ಪರ್ಧಿಗಳು ತನ್ನ ಬಗ್ಗೆ ಹೇಳಿದ ಮಾತುಗಳನ್ನು ಕೇಳಿ ದಿವ್ಯಾ ಉರುಡುಗ ಕೊಂಚ ಬೇಸರಗೊಂಡಿದ್ದರು. ನಾನು ನನ್ನ ಸಂಪೂರ್ಣ ಎಫರ್ಟ್ ಹಾಕಿ ಆಟವಾಡಿದರೂ ಎಲ್ಲರೂ ನಾನು ಯಾರದೋ ಬೆಂಬಲದಿಂದ ಈ ಮಟ್ಟಕ್ಕೆ ಬಂದಿದ್ದೇನೆ ಎಂದು ಮಾತನಾಡುತ್ತಿದ್ದಾರೆ. ಒಬ್ಬರು ಹಾಗೆ ಹೇಳಿದ್ದರೆ ಬೇಜಾರಾಗುತ್ತಿರಲಿಲ್ಲ ಆದರೆ ಎಲ್ಲರೂ ಅದೇ ರೀತಿ ಹೇಳಿದರು. ನಾನು ಬಿಗ್ ಬಾಸ್ ವಿನ್ ಆಗಲು ಸಮರ್ಥಳಲ್ಲ ಎಂದು ಹೇಳುವುದಕ್ಕೆ ಒಂದೇ ಒಂದು ಸರಿಯಾದ ಕಾರಣ ಕೊಡಬಹುದಿತ್ತು. ನನಗೆ ಗಾಯವಾದಾಗಲೂ ನಾನು ಟಾಸ್ಕ್ ಅಲ್ಲಿ ಹಿಂದೆ ಬಿದ್ದಿಲ್ಲ. ಆದರೂ ಹೊರಗೆ ನನ್ನ ಬಗ್ಗೆ ಈ ರೀತಿ ಮಾತನಾಡಿದ್ದು ಕೇಳಿ ಬೇಜಾರಾಯಿತು ಎಂದು ಮಂಜು ಮತ್ತು ಅರವಿಂದ್ ಬಳಿ ಬೇಸರ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada Finale: ಬಿಗ್ ಬಾಸ್ ಫಿನಾಲೆ ಎಪಿಸೋಡ್​ನಲ್ಲಾದ ತಪ್ಪಿನ ಕಾರಣ ಬಿಚ್ಚಿಟ್ಟ ಕಿಚ್ಚ ಸುದೀಪ್

Bigg Boss Kannada 8 Finale: ಬಿಗ್​ ಬಾಸ್​ ಸೀಸನ್​ 8 ವಿನ್ನರ್​​ ಇವರೇನಾ? ಇಲ್ಲಿದೆ ಲೆಕ್ಕಾಚಾರ

(Bigg Boss Kannada 8 Finale Divya Uruduga Upset for Playing Puneeth Rajkumar Song in Bigg Boss House)

Published On - 8:14 pm, Sun, 8 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್