AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fahadh Faasil: ಫಹಾದ್ ಫಾಸಿಲ್ ಹುಟ್ಟುಹಬ್ಬಕ್ಕೆ ಪುಷ್ಪ ಚಿತ್ರತಂಡದಿಂದ ಭರ್ಜರಿ ಗಿಫ್ಟ್; ಹೊಸ ಪೋಸ್ಟರ್ ಬಿಡುಗಡೆ

Pushpa The Rise: ಕನ್ನಡವೂ ಸೇರಿದಂತೆ ಪಂಚಭಾಷೆಗಳಲ್ಲಿ ತಯಾರಾಗುತ್ತಿರುವ ಬಹು ನಿರೀಕ್ಷಿತ ‘ಪುಷ್ಪ: ದಿ ರೈಸ್’ ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಫಹಾದ್ ಫಾಸಿಲ್ ಜನ್ಮದಿನದ ಪ್ರಯುಕ್ತ ಅವರ ಲುಕ್​ ಅನ್ನು ಚಿತ್ರತಂಡ ಹಂಚಿಕೊಂಡಿದೆ.

Fahadh Faasil: ಫಹಾದ್ ಫಾಸಿಲ್ ಹುಟ್ಟುಹಬ್ಬಕ್ಕೆ ಪುಷ್ಪ ಚಿತ್ರತಂಡದಿಂದ ಭರ್ಜರಿ ಗಿಫ್ಟ್; ಹೊಸ ಪೋಸ್ಟರ್ ಬಿಡುಗಡೆ
ಚಿತ್ರತಂಡ ಬಿಡುಗಡೆಗೊಳಿಸಿರುವ ಪುಷ್ಪ ಚಿತ್ರದ ಫಹಾದ್ ಫಾಸಿಲ್ ಲುಕ್
TV9 Web
| Updated By: shivaprasad.hs|

Updated on: Aug 08, 2021 | 6:03 PM

Share

ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ, ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಮಲಯಾಳಂ ನಟ ಫಹಾದ್ ಫಾಸಿಲ್ ಅವರ ಲುಕ್​ನ ಸಣ್ಣ ತುಣುಕೊಂದರ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ. ಅದರ ಮೂಲಕ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟ ಫಹಾದ್ ಫಾಸಿಲ್ ಅವರಿಗೆ ಶುಭಾಶಯಗಳನ್ನು ಕೋರಲಾಗಿದೆ. ‘ಖಳನಾಯಕ ಇದುವರೆಗೆ ಇಷ್ಟು ಅಪಾಯಕಾರಿಯಾಗಿರಲಿಲ್ಲ’(‘Evil was never so dangerous’)- ಎಂಬರ್ಥದ ಅಡಿಬರಹವನ್ನು ಚಿತ್ರಕ್ಕೆ ನೀಡಲಾಗಿದೆ.

ಚಿತ್ರತಂಡ ಬಿಡುಗಡೆಗೊಳಿಸಿರುವ ಪೋಸ್ಟರ್:

ಸುಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಪುಷ್ಪ’ ಚಿತ್ರದಲ್ಲಿ ಫಹಾದ್ ಪ್ರತಿನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದು, ಕನ್ನಡದ ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದ್ದು, ಮೊದಲ ಭಾಗಕ್ಕೆ ‘ಪುಷ್ಪ: ದಿ ರೈಸ್’ ಎಂದು ಹೆಸರಿಡಲಾಗಿದೆ. ಪುಷ್ಪ ಚಿತ್ರದ ಮೊದಲ ಹಾಡನ್ನು ಆಗಸ್ಟ್ 13ರಂದು ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ತಿಳಿಸಿದೆ. ಚಿತ್ರವು ಡಿಸೆಂಬರ್ 25ರ ಕ್ರಿಸ್​ಮಸ್​ ದಿನದಂದು ತೆರೆಗೆ ಬರಲಿದ್ದು, ಅದೇ ದಿನ ಹಿಂದಿಯ ಅಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಲಾಲ್ ಸಿಂಗ್ ಛಡ್ಡಾ’ ಚಿತ್ರವೂ ಬಿಡುಗಡೆಯಾಗಲಿದೆ.

ಆಸ್ಕರ್ ಪ್ರಶಸ್ತಿ ಪುರಸ್ಕೃತ ರೆಸೂಲ್ ಪೂಲ್ಕುಟ್ಟಿ(Resul Pookutty) ಪುಷ್ಪಕ್ಕೆ ಹಿನ್ನೆಲೆ ಸಂಗೀತವನ್ನು ನೀಡುತ್ತಿದ್ದು, ದೇವಿ ಶ್ರೀ ಪ್ರಸಾದ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ರಕ್ತಚಂದನದ ಕಳ್ಳಸಾಗಣೆಯ ಕುರಿತ ಚಿತ್ರ ಇದಾಗಿರಲಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಪಾತ್ರವರ್ಗದ ಕಾರಣದಿಂದಲೂ ‘ಪುಷ್ಪ’ ಚಿತ್ರ ಹೈಪ್​ ಸೃಷ್ಟಿಮಾಡಿದ್ದು, ಪ್ರಕಾಶ್​ ರೈ, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದಾರೆ. ಸನ್ನಿ ಲಿಯೋನ್​ ಕೂಡ ಈ ಚಿತ್ರದಲ್ಲಿ ಒಂದು ಐಟಂ ಡ್ಯಾನ್ಸ್​ ಮಾಡಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಇದನ್ನೂ ಓದಿ: Pushpa: ‘ಪುಷ್ಪ’ ರಿಲೀಸ್​ ಡೇಟ್​ ಜೊತೆಗೆ ಮತ್ತೊಂದು ಮುಖ್ಯ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅಲ್ಲು ಅರ್ಜುನ್​

ಮಗಳ ಸಿನಿಮಾ ಶೂಟಿಂಗ್​ ನೋಡಲು ಸೆಟ್​ಗೆ ಬಂದ ಅಲ್ಲು ಅರ್ಜುನ್​ಗೆ ಖುಷಿಯೋ ಖುಷಿ

(Allu Arjun and Rashmika Mandanna staring Pushpa Movie team releases Fahadh Faasil poster on his birthday)