ಚಂದನವನದಲ್ಲಿ (Sandalwood) ಕ್ರಿಯಾಶೀಲ ಯುವಕರು ಆಗಾಗ ಹೊಸ ಪ್ರಯತ್ನಗಳ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಏಕತಾನತೆಯನ್ನು ಮುರಿಯಲೆಂದೇ ಬಂದಂತೆ ಕಾಣುವ ಹೊಸಬರಿಗೆ ಸ್ಯಾಂಡಲ್ವುಡ್ನ ಹಿರಿಯರು ಸಹ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಸದ್ಯ ತಮ್ಮ ವಿಭಿನ್ನ ಆಲೋಚನೆ ಮತ್ತು ಪ್ರಮೋಶನಲ್ ಟೀಸರ್ (Promotional Teaser) ಮೂಲಕ ಗಮನ ಸೆಳೆದಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ತಂಡಕ್ಕೆ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬುರ್ಜ್ ಖಲೀಫಾದಲ್ಲಿ ಬಿಡುಗಡೆಯಾಗಿದ್ದರೆ, ನಾವು ಅಂತರಿಕ್ಷದಲ್ಲಿ ಬಿಡುಗಡೆ ಮಾಡ್ತೀವಿ ಎಂಬಂತೆ ಕ್ರಿಯಾತ್ಮಕ ಮತ್ತು ನವಿರು ಹಾಸ್ಯದ ವಿಡಿಯೋ ತಯಾರಿಸಿದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡದ ಪ್ರಯತ್ನ ನೋಡಿ ಕಿಚ್ಚ ಸುದೀಪ್ ಖುಷಿಯಾಗಿದ್ದಾರೆ. ಇಂತಹ ಪ್ರಯತ್ನದ ಮೂಲಕವೇ ಹೊಸತನ ಮೂಡುವುದು ಎಂದು ಬೆನ್ನು ತಟ್ಟಿದ್ದಾರೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಚಿತ್ರಕಥೆ ಮತ್ತು ನಿರ್ದೇಶನವನ್ನು ನಿತಿನ್ ಕೃಷ್ಣಮೂರ್ತಿ ಮಾಡಿದ್ದು, ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬಂದಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಸಿನಿಮಾಕ್ಕೆ ಇರುವುದು ಮತ್ತಷ್ಟು ನಿರೀಕ್ಷೆಯನ್ನೂ ಮೂಡಿಸಿದೆ. ಈ ಚಿತ್ರದ ಟೀಸರ್ 50 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ವೀಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ 8 ಆರಂಭಕ್ಕೆ ಕಿಚ್ಚ ಜೋಯಿಸರು ಕೊನೆಗೂ ನೀಡಿದ್ರು ಮುಹೂರ್ತ!
Bst wshs to the team…
Creative promotions at its best ??https://t.co/mn1BQXiXsr— Kichcha Sudeepa (@KicchaSudeep) February 16, 2021