Kantara Movie: ‘ಕಾಂತಾರ’ ಸಿನಿಮಾ ನೋಡಿ ಮೂಕವಿಸ್ಮಿತನಾದೆ’; ರಿಷಬ್ ಶೆಟ್ಟಿ ಕೆಲಸಕ್ಕೆ ಕಿಚ್ಚನ ಚಪ್ಪಾಳೆ

Kichcha Sudeep: ಕಿಚ್ಚ ಸುದೀಪ್ ಅವರು ಸ್ಯಾಂಡಲ್​ವುಡ್​ನ ಅನೇಕ ಸಿನಿಮಾ ತಂಡಕ್ಕೆ ಬೆಂಬಲ ನೀಡಿದ್ದಾರೆ. ಹಲವು ಚಿತ್ರಗಳನ್ನು ನೋಡಿ ಅವರು ಹಾಡಿ ಹೊಗಳಿದ್ದಿದೆ. ಅದೇ ರೀತಿ ‘ಕಾಂತಾರ’ ಸಿನಿಮಾ ನೋಡಿರುವ ಅವರು ಮೆಚ್ಚುಗೆಯ ಮಾತನ್ನು ಆಡಿದ್ದಾರೆ.

Kantara Movie: ‘ಕಾಂತಾರ’ ಸಿನಿಮಾ ನೋಡಿ ಮೂಕವಿಸ್ಮಿತನಾದೆ’; ರಿಷಬ್ ಶೆಟ್ಟಿ ಕೆಲಸಕ್ಕೆ ಕಿಚ್ಚನ ಚಪ್ಪಾಳೆ
ಸುದೀಪ್​-ರಿಷಬ್
Edited By:

Updated on: Oct 08, 2022 | 3:08 PM

ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ತೆರೆಗೆ ಬಂದು 10 ದಿನ ಕಳೆಯುತ್ತಾ ಬಂದಿದೆ. ಆದಾಗ್ಯೂ ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ವೀಕೆಂಡ್​ನಲ್ಲಿ ಬಹುತೇಕ ಶೋಗಳು ಸೋಲ್ಡ್​​ಔಟ್ ಆಗಿವೆ. ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಚಿತ್ರತಂಡದ ಖುಷಿ ಹೆಚ್ಚಿದೆ. ‘ಕಾಂತಾರ’ ಚಿತ್ರದಿಂದ (Kantara Movie) ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಮತ್ತೊಂದು ಗೆಲುವು ಕಂಡಿದೆ. ಈಗ ಕಿಚ್ಚ ಸುದೀಪ್ ಅವರು ಕಾಂತಾರ ಚಿತ್ರವನ್ನು ಮನಸಾರೆ ಹೊಗಳಿದ್ದಾರೆ.

ಕಿಚ್ಚ ಸುದೀಪ್ ಅವರು ಸ್ಯಾಂಡಲ್​ವುಡ್​ನ ಅನೇಕ ಸಿನಿಮಾ ತಂಡಕ್ಕೆ ಬೆಂಬಲ ನೀಡಿದ್ದಾರೆ. ಹಲವು ಚಿತ್ರಗಳನ್ನು ನೋಡಿ ಅವರು ಹಾಡಿ ಹೊಗಳಿದ್ದಿದೆ. ಅದೇ ರೀತಿ ‘ಕಾಂತಾರ’ ಸಿನಿಮಾ ನೋಡಿರುವ ಅವರು ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಈ ಸಿನಿಮಾ ಹೇಗಿತ್ತು ಎಂಬ ವಿಚಾರವನ್ನು ತಮ್ಮದೇ ಶಬ್ದಗಳಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ
Kantara Movie: ‘ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತ’; ರಿಷಬ್ ಸಿನಿಮಾಗೆ ಪ್ರಭಾಸ್​ ಹೊಗಳಿಕೆ
Sapthami Gowda: ಜನರ ಮಧ್ಯೆ ‘ಕಾಂತಾರ’ ನಾಯಕಿ ಸಪ್ತಮಿ ಗೌಡ ಬಿಂದಾಸ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?

‘ಕೆಲವು ಸಿನಿಮಾಗಳು ಚೆನ್ನಾಗಿರುತ್ತವೆ. ಇನ್ನೂ ಕೆಲವು ಅದ್ಭುತವಾಗಿರುತ್ತವೆ. ಬಹಳ ಅಪರೂಪಕ್ಕೆ ಕೆಲವು ಚಿತ್ರಗಳನ್ನು ನೋಡಿ ನಮ್ಮ ಬಾಯಿಂದ ಮಾತೇ ಹೊರಡದಂತೆ ಆಗುತ್ತವೆ. ನಮ್ಮನ್ನು ಆ ಚಿತ್ರಗಳು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಕಾಂತಾರ ಅಂಥದ್ದೊಂದು ಚಿತ್ರ. ಒಂದು ಸರಳವಾದ ಕಥೆ, ಒಳ್ಳೆಯ ಚಿತ್ರಕಥೆ ಮತ್ತು ಅದ್ಭುತವಾದ ನಿರೂಪಣೆ ಈ ಚಿತ್ರದ ಜೀವಾಳ’ ಎಂದು ಕಿಚ್ಚ ಸುದೀಪ್ ಅವರು ಪತ್ರ ಆರಂಭಿಸಿದ್ದಾರೆ.

‘ರಿಷಬ್ ಶೆಟ್ಟಿ ತಮ್ಮ ಅದ್ಭುತ ಅಭಿನಯದಿಂದ ನಮ್ಮ ಮನಸ್ಸಿಗೆ ಹತ್ತಿರವಾಗುತ್ತಾರೆ. ಚಿತ್ರ ನೋಡಿ ನನಗನಿಸಿದ್ದೆಂದರೆ, ಇಂಥದ್ದೊಂದು ಚಿತ್ರ ಮಾಡಲು ಹೇಗೆ ಸಾಧ್ಯವಾಯಿತು ಎಂದು. ಕಾಗದದ ಮೇಲೆ ನೋಡಿದಾಗ, ಇದನ್ನು ಓದಿದಾಗ, ಏನೂ ವಿಶೇಷ ಅಂಥನಿಸದಿರಬಹುದು. ಆದರೆ, ಅಂತಿಮವಾಗಿ ತೆರೆಯ ಮೇಲೆ ಮೂಡಿಬಂದಿರುವ ರೀತಿ ಇದೆಯಲ್ಲ, ಅದು ಒಬ್ಬ ನಿರ್ದೇಶಕನ ವಿಷನ್ ಎಂದರೆ ತಪ್ಪಿಲ್ಲ’ ಎಂದು ರಿಷಬ್ ಶೆಟ್ಟಿ ಕೆಲಸವನ್ನು ಸುದೀಪ್ ಹೊಗಳಿದ್ದಾರೆ.

ಇದನ್ನೂ ಓದಿ: Rishab Shetty: ಐಎಂಡಿಬಿಯಲ್ಲಿ ಗಮ್ಮತ್​ ರೇಟಿಂಗ್​ ಪಡೆದ ‘ಕಾಂತಾರ’; ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ರಿಷಬ್​ ಸಿನಿಮಾ

‘ಇಂಥದ್ದೊಂದು ಅಸಾಧಾರಣ ಚಿತ್ರವನ್ನು ಕಟ್ಟಿಕೊಟ್ಟಿದ್ದಕ್ಕೆ ರಿಷಬ್ ಶೆಟ್ಟಿಗೆ ನನ್ನ ಮೊದಲ ಮೆಚ್ಚುಗೆ. ಅವರ ಮೇಲೆ ನಂಬಿಕೆ ಇಟ್ಟು, ಇಂಥದ್ದೊಂದು ಚಿತ್ರವನ್ನು ರೂಪಿಸುವುದಕ್ಕೆ ಕಾರಣರಾದ ಚಿತ್ರತಂಡದವರೆಲ್ಲರಿಗೂ ನನ್ನ ನಮನ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನಿಜಕ್ಕೂ ಒಬ್ಬ ಅಪ್ರತಿಮ ಸಂಗೀತ ನಿರ್ದೇಶಕ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಈ ಚಿತ್ರದ ಮೇಲೆ ನಂಬಿಕೆ ಇಟ್ಟು, ಇದನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಗೂ ನನ್ನ ಕೃತಜ್ಞತೆಗಳು. ಚಿತ್ರ ನೋಡಿದವರು ನೀಡಿದ ಪ್ರತಿಕ್ರಿಯೆಗೆ ತಕ್ಕ ಹಾಗೆ ಚಿತ್ರ ಮೂಡಿಬಂದಿದೆಯಾ ಎಂಬ ಕುತೂಹಲದಿಂದ ಚಿತ್ರ ನೋಡಿದೆ. ಚಿತ್ರ ಚೆನ್ನಾಗಿ ಮೂಡಿಬಂದಿರುವುದಷ್ಟೇ ಅಲ್ಲ, ನಮ್ಮ ನಿರೀಕ್ಷೆಗಳನ್ನೂ ಮೀರಿ ಅದ್ಭುತವಾಗಿದೆ’ ಎಂದು ಸುದೀಪ್ ಬರೆದುಕೊಂಡಿದ್ದಾರೆ.

 

Published On - 2:37 pm, Sat, 8 October 22