‘ಮಚ್ಚಿಲ್ಲ-ಕೊಚ್ಚಲ್ಲ, ಲವ್ ಇಲ್ಲ-ಗೋಳಲ್ಲ‘: ಇದು ಸುದೀಪ್-ಪ್ರೇಮ್ ಹೊಸ ಸಿನಿಮಾ

ಸುದೀಪ್ ಹಾಗೂ ಪ್ರೇಮ್ ಅವರ ಈ ಸಿನಿಮಾಕ್ಕೆ ‘ದಾದಾ ಆನ್ ಹಾಲಿಡೇ’ ಎಂದು ಹೆಸರಿಡಲಾಗಿದೆ. ಟೈಟಲ್​​ ಪೋಸ್ಟರ್​​ನಲ್ಲಿ ಸುದೀಪ್ ಅವರು ಲುಂಗಿ ಕಟ್ಟಿ, ಅದಕ್ಕೊಂದು ದಪ್ಪ ಬೆಲ್ಟು ಕಟ್ಟಿ, ಬಣ್ಣ ಬಣ್ಣದ ಶರ್ಟು ಧರಿಸಿ, ಬಾಯಲ್ಲಿ ಕಡ್ಡಿ ಸಿಕ್ಕಿಸಿಕೊಂಡು ಥೇಟ್ ಹಳೆಯ ಕಾಲದ ರೌಡಿ ರೀತಿ ಕಾಣುತ್ತಿದ್ದಾರೆ. ಪೋಸ್ಟರ್​​ನಲ್ಲಿ ನಾಯಿ ಸಹ ಒಂದಿದೆ. ಜೊತೆಗೆ ಒಂದು ಬೋರ್ಡ್​​ ಸಹ ಇದ್ದು, ಬೋರ್ಡ್​​ ಮೇಲೆ ದಾದನಿಗೆ ಕೆಲವು ನಿಯಮಗಳನ್ನು ಸಹ ಬರೆಯಲಾಗಿದೆ.

‘ಮಚ್ಚಿಲ್ಲ-ಕೊಚ್ಚಲ್ಲ, ಲವ್ ಇಲ್ಲ-ಗೋಳಲ್ಲ‘: ಇದು ಸುದೀಪ್-ಪ್ರೇಮ್ ಹೊಸ ಸಿನಿಮಾ
Dada On Holiday

Updated on: Nov 27, 2026 | 8:47 PM

ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ನಟನೆ ಮಾಡುತ್ತಿರುವ ವಿಷಯ ಹಳೆಯದ್ದೆ. ಕಳೆದ ಕೆಲವಾರು ದಿನಗಳಿಂದಲೂ ಸಿನಿಮಾದ ಟೈಟಲ್ ಘೋಷಣೆ ಬಗ್ಗೆ ಪ್ರಚಾರ ಮಾಡಲಾಗುತ್ತಿತ್ತು. ನವೆಂಬರ್ 27ಕ್ಕೆ ಅಂತಿಮ ದಿನಾಂಕ ನಿಗದಿ ಆಗಿತ್ತು. ಅಂತೆಯೇ ಇಂದು ಒರಾಯನ್ ಮಾಲ್​​ನಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಸಿನಿಮಾದ ಟೈಟಲ್ ಟೀಸರ್ ಲಾಂಚ್ ಮಾಡಲಿದ್ದಾರೆ. ಇದರ ನಡುವೆ ಆನಂದ್ ಆಡಿಯೋನಲ್ಲಿ ಸಿನಿಮಾದ ಟೈಟಲ್ ಅನ್ನು ಮುಂಚಿತವಾಗಿ ಪ್ರಕಟಿಸಲಾಗಿದ್ದು, ಪ್ರೇಮ್ ಅವರ ಈ ಹಿಂದಿನ ಸಿನಿಮಾಗಳಿಗಿಂತಲೂ ಭಿನ್ನವಾಗಿ ಈ ಸಿನಿಮಾ ಇರಲಿದೆ ಎಂಬ ಸುಳಿವನ್ನು ಟೀಸರ್ ನೀಡುತ್ತಿದೆ.

ಅಂದಹಾಗೆ, ಸುದೀಪ್ ಹಾಗೂ ಪ್ರೇಮ್ ಅವರ ಈ ಸಿನಿಮಾಕ್ಕೆ ‘ದಾದಾ ಆನ್ ಹಾಲಿಡೇ’ ಎಂದು ಹೆಸರಿಡಲಾಗಿದೆ. ಟೈಟಲ್​​ ಪೋಸ್ಟರ್​​ನಲ್ಲಿ ಸುದೀಪ್ ಅವರು ಲುಂಗಿ ಕಟ್ಟಿ, ಅದಕ್ಕೊಂದು ದಪ್ಪ ಬೆಲ್ಟು ಕಟ್ಟಿ, ಬಣ್ಣ ಬಣ್ಣದ ಶರ್ಟು ಧರಿಸಿ, ಬಾಯಲ್ಲಿ ಕಡ್ಡಿ ಸಿಕ್ಕಿಸಿಕೊಂಡು ಥೇಟ್ ಹಳೆಯ ಕಾಲದ ರೌಡಿ ರೀತಿ ಕಾಣುತ್ತಿದ್ದಾರೆ. ಪೋಸ್ಟರ್​​ನಲ್ಲಿ ನಾಯಿ ಸಹ ಒಂದಿದೆ. ಜೊತೆಗೆ ಒಂದು ಬೋರ್ಡ್​​ ಸಹ ಇದ್ದು, ಬೋರ್ಡ್​​ ಮೇಲೆ ದಾದಾನಿಗೆ ಕೆಲವು ನಿಯಮಗಳನ್ನು ಸಹ ಬರೆಯಲಾಗಿದೆ.

Loading...

‘ಅಜ್ಜಿಯನ್ನು ಗೌರವಿಸಬೇಕು’, ‘ಯಾವುದೇ ಅಪರಾಧ ಮಾಡುವಂತಿಲ್ಲ’, ‘ಸಂಜೆ 7 ಗಂಟೆಗೆ ಮನೆಗೆ ಬರಬೇಕು’ ಮತ್ತು ‘ಕುಟುಂಬವೇ ಮೊದಲು’ ಎಂಬ ನಿಯಮಗಳು ಆ ಬೋರ್ಡ್​​ನಲ್ಲಿವೆ. ಒಟ್ಟಾರೆ ಈ ಪೋಸ್ಟರ್ ನೋಡಿದರೆ ಇದೊಂದು ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ರೀತಿ ಕಾಣುತ್ತಿದೆ. ಹಳೆಯ ರೌಡಿಯೊಬ್ಬ ಎಲ್ಲವನ್ನೂ ಬಿಟ್ಟು ಒಳ್ಳೆಯತನಕ್ಕೆ ಒಗ್ಗಿಕೊಳ್ಳುವ ಪ್ರಯತ್ನದಲ್ಲಿರುವ ಕತೆ ಇದರಲ್ಲಿರುವಂತೆ ಕಾಣುತ್ತಿದೆ.

ಇದನ್ನೂ ಓದಿ:ರೇಸಿಂಗ್ ಟ್ರ್ಯಾಕ್‌ನಲ್ಲಿ ಸುದೀಪ್ ಮಿಂಚು; ಹರ್ಷ ವ್ಯಕ್ತಪಡಿಸಿದ ಕಿಚ್ಚ

ಟೈಟಲ್​ ಟೀಸರ್ ಸಹ ರಿಲೀಸ್ ಆಗಿದ್ದು, ಟೀಸರ್​​ನ ಆರಂಭದಲ್ಲಿ ಪೊಲೀಸರು ನಿರ್ದೇಶಕ ಪ್ರೇಮ್ ಅನ್ನು ಎತ್ತಿಕೊಂಡು ಬಂದಿರುತ್ತಾರೆ. ಅಲ್ಲಿ ಪ್ರೇಮ್ ತಮ್ಮ ಹೊಸ ಸಿನಿಮಾ ಮತ್ತು ಹೀರೋ ಬಗ್ಗೆ ಇಂಟ್ರೊಡಕ್ಷನ್ ಕೊಡುತ್ತಾರೆ. ಅದಾದ ಬಳಿಕ ಸುದೀಪ್ ಅವರು ಪೊಲೀಸ್ ಠಾಣೆಗೆ ಅದೇ ತಮ್ಮ ರೌಡಿ ವೇಷದಲ್ಲಿ ಬಂದು ಪಾಸ್​​ಪೋರ್ಟ್ ಪಡೆದುಕೊಳ್ಳುತ್ತಾರೆ. ಜೊತೆಗೆ ಒಂದು ಸೂಟ್​​​ಕೇಸ್ ಮೇಲೆ ಕೂತು ಖುಷಿಯಾಗಿ ಹೊರಡುತ್ತಾರೆ. ಟೀಸರ್ ಸಹ ಟೈಟಲ್ ಪೋಸ್ಟರ್ ರೀತಿಯೇ ಮಜವಾಗಿದೆ.

‘ದಾದಾ ಆನ್ ಹಾಲಿಡೇ’ ಸಿನಿಮಾ ಟೈಟಲ್ ಟೀಸರ್

DADA On Holiday Official Title Teaser | King Kichcha | Showman Prem's | Arjun Janya @AnandAudio

ವಿದೇಶಕ್ಕೆ ಹೋಗುವ ಆಸೆಯಿಂದ ರೌಡಿಸಂಗೆ ವಿದಾಯ ಹೇಳುವ ರೌಡಿಯ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆಯೇ ಎಂಬ ಅನುಮಾನ ಈ ಟೀಸರ್​​ನ ಮತ್ತು ಸಿನಿಮಾದ ಟೈಟಲ್​​ನಿಂದ ಬರುತ್ತಿದೆ. ಆದರೆ ಸುದೀಪ್ ವಿದೇಶಕ್ಕೆ ಹೋಗುವ ಅನಿವಾರ್ಯತೆ ಏನಿದೆ? ವಿದೇಶದಲ್ಲಿ ಯಾರಿದ್ದಾರೆ? ಯಾರಿಗಾಗಿ ಸುದೀಪ್ ವಿದೇಶಕ್ಕೆ ಹೋಗಬೇಕಿದೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:27 pm, Fri, 27 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us