ಆಫ್ರಿಕಾ ಕ್ರಿಕೆಟ್ ಟೀಂ ಜೊತೆ ಸುದೀಪ್ ಹೋಗಿದ್ದೆಲ್ಲಿಗೆ?
ಪೈಲ್ವಾನ್ ಸಿನಿಮಾ ಫೈರಸಿ, ‘ಕಿಚ್ಚ-ದಚ್ಚು’ ಫ್ಯಾನ್ಸ್ ವಾರ್ ಬಳಿಕ ಸಾಕಷ್ಟು ಸಮಸ್ಯೆಗಳ ನಡುವೆ ಕಿಚ್ಚ ಸುದೀಪ್ ಇದೀಗ ದುಬೈ ಕಡೆ ಹೊರಟಿದ್ದಾರೆ. ಅದೂ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಜೊತೆ ಕಿಚ್ಚ ಸುದೀಪ್ ವಿಮಾನವೇರಿದ್ದಾರೆ. ಕಿಚ್ಚನ ಮುಂದಿನ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾದ ಚಿತ್ರೀಕರಣಕ್ಕೆ ಕಿಚ್ಚ ಸುದೀಪ್ ದುಬೈ ವಿಮಾನ ಹತ್ತಿದ್ದಾರೆ. ಇದೇ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂ ಸಹ ಅದೇ ವಿಮಾನದಲ್ಲಿ ದುಬೈಗೆ ಹೊರಟಿದ್ರು. ಈ ವೇಳೆ ಕಿಚ್ಚ ಸುದೀಪ್, ಕ್ರಿಕೆಟ್ ತಂಡದ ಜೊತೆ ಫೋಟೋ […]
ಪೈಲ್ವಾನ್ ಸಿನಿಮಾ ಫೈರಸಿ, ‘ಕಿಚ್ಚ-ದಚ್ಚು’ ಫ್ಯಾನ್ಸ್ ವಾರ್ ಬಳಿಕ ಸಾಕಷ್ಟು ಸಮಸ್ಯೆಗಳ ನಡುವೆ ಕಿಚ್ಚ ಸುದೀಪ್ ಇದೀಗ ದುಬೈ ಕಡೆ ಹೊರಟಿದ್ದಾರೆ. ಅದೂ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಜೊತೆ ಕಿಚ್ಚ ಸುದೀಪ್ ವಿಮಾನವೇರಿದ್ದಾರೆ.
ಕಿಚ್ಚನ ಮುಂದಿನ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾದ ಚಿತ್ರೀಕರಣಕ್ಕೆ ಕಿಚ್ಚ ಸುದೀಪ್ ದುಬೈ ವಿಮಾನ ಹತ್ತಿದ್ದಾರೆ. ಇದೇ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂ ಸಹ ಅದೇ ವಿಮಾನದಲ್ಲಿ ದುಬೈಗೆ ಹೊರಟಿದ್ರು. ಈ ವೇಳೆ ಕಿಚ್ಚ ಸುದೀಪ್, ಕ್ರಿಕೆಟ್ ತಂಡದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
‘ದುಬೈಗೆ ಹೋಗುತ್ತಿದ್ದ ವಿಮಾನದಲ್ಲಿಯೇ ದ.ಆಫ್ರಿಕಾ ಕ್ರಿಕೆಟ್ ತಂಡವನ್ನು ನೋಡಿ ಖುಷಿಯಾಯ್ತು. ಅವರು ಬೇರೆ ಕಡೆ ಹೊರಟಿದ್ದಾರೆ. ನಾನು ಕೋಟಿಗೊಬ್ಬ-3 ಸಿನಿಮಾದ ಚಿತ್ರೀಕರಣಕ್ಕಾಗಿ ವಾರ್ಸಾಗೆ ಹೊರಟಿರುವೆ. ಈಗಾಗಲೇ ಸಿನಿಮಾದ ಮೊದಲ ಭಾಗ ಬೆಲ್ಗ್ರೇಡ್ನಲ್ಲಿ ಚಿತ್ರೀಕರಣವಾಗಿದೆ’ ಅಂತ ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.
It was nice to see the south African team on the same flt to Dubai… They head elsewhere and me to Warsaw,,, to join K3 team for a chase sequence,, 1st one was shot at Belgrade. pic.twitter.com/NDUMwIbN0c
— Kichcha Sudeepa (@KicchaSudeep) September 23, 2019
Published On - 7:01 pm, Mon, 23 September 19