
ಕಿಚ್ಚ ಸುದೀಪ್ (Sudeep) ಅವರಿಗೆ ಇಂದು (ಸೆಪ್ಟೆಂಬರ್ 2) ಜನ್ಮದಿನ. ಅವರಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಾ ಇದ್ದಾರೆ. ಸುದೀಪ್ ಅವರ ಬರ್ತ್ಡೇ ಸೆಲೆಬ್ರೇಷನ್ ಸೆಪ್ಟೆಂಬರ್ 1ರಂದೇ ನಡೆದಿದೆ. ಈ ಮಧ್ಯೆ ಸುದೀಪ್ ಅವರಿಗೆ ಓರ್ವ ನಿರ್ಮಾಪಕ ಸಖತ್ ವಿಶೇಷ ಹಾಗೂ ಫೇವರಿಟ್. ಈ ಬಗ್ಗೆ ಅವರು ಈ ಮೊದಲಿನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಇದೇ ವೇಳೆ ಅವರು ಜೀವನ ಪಾಠ ಕೂಡ ಮಾಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.
ಕೆಲವು ನಿರ್ಮಾಪಕರು ಸಿನಿಮಾ ಸೋತ ಬಳಿಕ ಅದರ ಹೊಣೆಯನ್ನು ನಿರ್ದೇಶಕರು ಹಾಗೂ ಹೀರೋಗಳ ಮೇಲೆ ಹಾಕಿರೋದನ್ನು ಕಾಣಬಹುದು. ಆದರೆ, ರಾಕ್‌ಲೈನ್ ವೆಂಕಟೇಶ್ ಅವರು ಆ ರೀತಿ ಯಾವಾಗಲೂ ಮಾಡಿಲ್ಲ ಎಂಬುದು ಸುದೀಪ್ ಮಾತು. ಈ ಕಾರಣದಿಂದಲೇ ರಾಕ್‌ಲೈನ್ ವೆಂಕಟೇಶ್ ಯಾವಾಗಲೂ ಸುದೀಪ್ಗೆ ಇಷ್ಟ ಆಗುತ್ತಾರೆ. ಈ ಮೊದಲು ಅವರ ಆ ಬಗ್ಗೆ ಹೇಳಿಕೊಂಡಿದ್ದರು.
‘ರಾಕ್‌ಲೈನ್ ಅವರು ಸಿನಿಮಾ ಗೆದ್ದ ಮಾತ್ರಕ್ಕೆ ಹೀರೋನ ತಲೆಯಮೇಲೆ ಕೂರಿಸಿಕೊಂಡಿಲ್ಲ. ಸಿನಿಮಾ ಸೋತರೆ ಅವರು ಯಾರನ್ನೂ ಬೈಯಲ್ಲ. ಕಥೆ ಕೇಳುವಾಗ ನಾವೂ ಇದ್ದೆವಲ್ಲ, ಹೋಗಲಿ ಬಿಡಿ ಅಂತ ಹೇಳ್ತಾರೆ. ಈ ವಿಚಾರವನ್ನು ನಾವು ಕಲಿಯಬೇಕು’ ಎಂದು ಸುದೀಪ್ ಅವರು ಈ ಮೊದಲು ಹೇಳಿದ್ದರು.
‘ಗೆದ್ದವನು ಸೋಲೋಕು ರೆಡಿ ಇರಬೇಕು. ಗೆಲ್ತಾ ಇರ್ತೀನಿ ಅನ್ನೋದು ಭ್ರಮೆ. ಸೋತವನು ಎದ್ದೇಳೆಲ್ಲ ಎಂಬ ನಂಬಿಕೆ ಇದ್ದರೆ ಅಂತಹ ಮುಟ್ಟಾಳತನ ಮತ್ತೊಂದು ಇಲ್ಲ. ಎಣ್ಣೆ, ಬಾಳೆಣ್ಣು ಸಿಪ್ಪೆ ಹಾಕಿದ್ದನ್ನು ನೋಡಿದ ಮೇಲೂ ಹೋಗಿ ಜಾರಿ ಬಿದ್ದಿದ್ದು ನಿನ್ನ ತಪ್ಪು. ಮಲಗಿದ್ಮೇಳೆ ಎದ್ದೇ ಏಳ್ತೀರಾ. ಬೀಳೋದನ್ನು ವಿಶ್ರಾಂತಿ ಎಂದುಕೊಳ್ಳಿ. ನಿಮ್ಮ ಜೀವನ ಚೆನ್ನಾಗಿದ್ದರೆ ಅದೇ ಸಾಕಲ್ವ’ ಎಂದಿದ್ದರು ಸುದೀಪ್.
ಇದನ್ನೂ ಓದಿ: K 47: ‘ಯಾವುದೇ ಸಿನಿಮಾ ಇದ್ರೂ ಸರಿ, ನಮ್ಮ ಚಿತ್ರ ಕ್ರಿಸ್ಮಸ್ಗೆ ಬರೋದು ಪಕ್ಕಾ’; ಸುದೀಪ್
‘ಹಣಕಾಸಿಗೆ ಕೈ ಚಾಚ್ತಾ ಇಲ್ಲ, ದೇವರು ಆರೋಗ್ಯ ಕೊಟ್ಟಿದ್ದಾನೆ. ಸಾಲ ಮಾಡಿಲ್ಲ. ಬ್ಯಾಂಕ್ ಲೋನ್ ತಲೆಯಮೇಲೆ ಇಲ್ಲ. ಅಡುಗೆ ಮಾಡೋಕೆ ಪದಾರ್ಥ ಕಡಿಮೆ ಆಗಿಲ್ಲ ಎಂದಮೇಲೆ ಚಿಂತೆ ಏಕೆ? ಬೇರೆಯವರ ಸ್ಪೀಡ್ನಿಂದ ನಿಮ್ಮ ಜೀವನ ಸ್ಲೋ ಎನಿಸಿರಬಹುದು ಅಷ್ಟೇ. ಎಲ್ಲವೂ ನಮ್ಮ ಮೇಲೆ ಡಿಪೆಂಡ್ ಆಗಬೇಕು’ ಎಂದಿದ್ದರು ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.