K 47: ‘ಯಾವುದೇ ಸಿನಿಮಾ ಇದ್ರೂ ಸರಿ, ನಮ್ಮ ಚಿತ್ರ ಕ್ರಿಸ್‌ಮಸ್‌ಗೆ ಬರೋದು ಪಕ್ಕಾ’; ಸುದೀಪ್
ಕಿಚ್ಚ ಸುದೀಪ್ ಅವರ 'K47' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಿನಿಮಾ ಶೂಟ್ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನವೆಂಬರ್ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ ಮತ್ತು ಚಿತ್ರವು ಕ್ರಿಸ್‌ಮಸ್‌ಗೆ ಬಿಡುಗಡೆಯಾಗಲಿದೆ. ಈ ಚಿತ್ರದ ಬಿಡುಗಡೆ ದಿನಾಂಕವು 'ಡೆವಿಲ್' ಮತ್ತು '45' ಚಿತ್ರದ ಜೊತೆ ಕ್ಲ್ಯಾಶ್ ಆಗಲಿದೆ.

ಕಿಚ್ಚ ಸುದೀಪ್ ನಟನೆಯ ‘K 47’ ಸಿನಿಮಾದ ಶೂಟ್ ಜುಲೈನಲ್ಲಿ ಆರಂಭ ಆಗಿದೆ. ಈ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಕೇವಲ ಆರು ತಿಂಗಳಲ್ಲಿ ಸಿನಿಮಾ ಕೆಲಸ ಮುಗಿಸಿ ಜನರ ಎದುರು ತಂದಿಡೋ ಪ್ಲ್ಯಾನ್ ಇದೆ ಎಂದು ಸುದೀಪ್ (Sudeep) ಅವರು ಸಿನಿಮಾ ಘೋಷಿಸೋ ಸಮಯದಲ್ಲಿ ಹೇಳಿದ್ದರು. ಈಗಲೂ ತಮ್ಮ ಮಾತಿಗೆ ಬದ್ಧರಾಗಿರೋದಾಗಿ ಅವರು ಹೇಳಿದ್ದಾರೆ. ಹಾಗಾದಲ್ಲಿ, ‘ಡೆವಿಲ್’ ಹಾಗೂ ‘45’ ಚಿತ್ರದ ಜೊತೆ ಈ ಸಿನಿಮಾ ಕ್ಲ್ಯಾಶ್ ಆಗಲಿದೆ.
ಸೆಪ್ಟೆಂಬರ್ 2ರಂದು ಸುದೀಪ್ ಬರ್ತ್ಡೇ ಇದೆ. ಅದಕ್ಕೂ ಒಂದು ದಿನ ಮೊದಲು (ಸೆಪ್ಟೆಂಬರ್ 1) ಸೆಲೆಬ್ರೇಷನ್ ಮಾಡಲು ಸುದೀಪ್ ನಿರ್ಧರಿಸಿದ್ದಾರೆ. ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ರಾತ್ರಿ ಸೆಲೆಬ್ರೇಷನ್ ಇರಲಿದೆ. ಮಧ್ಯಾಹ್ನ ಸುದೀಪ್ ಅವರು ಬರ್ತ್ಡೇ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು. ‘ಕೆ 47’ ಬಗ್ಗೆಯೂ ಅಪ್ಡೇಟ್ ಕೊಟ್ಟರು.
‘ನಾವು ವೇಗವಾಗಿ ಶೂಟಿಂಗ್ ಮಾಡುತ್ತಿದ್ದೇವೆ. ಈಗಾಗಲೇ ಸಿನಿಮಾದ 60ರಷ್ಟು ಶೂಟ್ ಪೂರ್ಣಗೊಂಡಿದೆ. ಅಕ್ಟೋಬರ್ ವೇಳೆಗೆ ಸಿನಿಮಾದ ಶೂಟ್ ಪೂರ್ಣಗೊಳ್ಳಲಿದೆ. ನವೆಂಬರ್ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯಲಿದೆ. ಇದಾದ ಬಳಿಕ ನಾನು ಬಿಲ್ಲ ರಂಗ ಬಾಷ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದೇನೆ. ಕ್ರಿಸ್‌ಮಸ್‌ಗೆ ಕೆ 47 ಬಂದೇ ಬರುತ್ತದೆ’ ಎಂದಿದ್ದಾರೆ ಸುದೀಪ್.
‘ಡೆವಿಲ್’ ಹಾಗೂ ‘45’ ಕೂಡ ಇದೇ ಸಂದರ್ಭದಲ್ಲಿ ರಿಲೀಸ್ ಆಗಲಿದೆ. ಇದು ಸೆಲೆಬ್ರೇಷನ್ನೋ ಅಥವಾ ಕಾಂಪಿಟೇಷನ್ನೋ ಎಂದು ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ. ‘ನೀವು ಇದನ್ನು ಕಾಂಪಿಟೇಷನ್ ಎಂದಾದರೂ ತೆಗೆದುಕೊಳ್ಳಬಹುದು, ಸೆಲೆಬ್ರೇಷನ್ ಎಂದಾದರೂ ತೆಗೆದುಕೊಳ್ಳಬಹುದು. ನಾವು ಸಿನಿಮಾ ಮಾತ್ರ ಮಾಡುತ್ತಿದ್ದೇವೆ. ನನ್ನ ನಿರ್ಮಾಪಕರಿಗೆ, ನನ್ನ ಥಿಯೇಟರ್ಗೆ, ನನ್ನ ಅಭಿಮಾನಿಗಳಿಗಾಗಿ ಸಿನಿಮಾ ಮಾಡುತ್ತಿದ್ದೇನೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಬರ್ತ್ಡೇಗೂ ಮೊದಲು ಪ್ರೆಸ್ಮೀಟ್ ಮಾಡಿದ ಸುದೀಪ್; ಇಲ್ಲಿದೆ ಲೈವ್
‘ನಾನು ಜುಲೈ 5ರಂದೇ ನನ್ನ ಸಿನಿಮಾ ರಿಲೀಸ್ ಘೋಷಣೆ ಮಾಡಿದ್ದೆ. ಹೀಗಿರುವಾಗ, ಆ ಸಮಯದಲ್ಲಿ ಯಾವೆಲ್ಲ ಸಿನಿಮಾಗಳು ಘೋಷಣೆ ಆಗಿದ್ದವು ಎಂಬುದನ್ನು ನೋಡಿದರೆ ಗೊತ್ತಾಗಿ ಬಿಡುತ್ತದೆ. ನಾನು ಆ ಬಗ್ಗೆ ಹೆಚ್ಚು ಯೋಚಿಸಲ್ಲ’ ಎಂದು ಸುದೀಪ್ ಹೇಳಿದ್ದಾರೆ. ಈ ಮೂಲಕ ಆ ಸಮಯಕ್ಕೆ ಸಿನಿಮಾ ರಿಲೀಸ್ ಮಾಡೋದು ಖಚಿತ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








