ಏಪ್ರಿಲ್​ 5ರಂದು ಕಿರಣ್​ ರಾಜ್​ ನಟನೆಯ ಹೊಸ ಸಿನಿಮಾ ‘ಭರ್ಜರಿ ಗಂಡು’ ಬಿಡುಗಡೆ

|

Updated on: Apr 02, 2024 | 2:49 PM

ಫ್ಯಾಮಿಲಿ ಪ್ರೇಕ್ಷಕರು ಕಿರಣ್​ ರಾಜ್​ ಅವರನ್ನು ಇಷ್ಟಪಡುತ್ತಾರೆ. ಹಳ್ಳಿ ಸೊಗಡಿನ ಕಥೆ ಇರುವ ‘ಭರ್ಜರಿ ಗಂಡು’ ಸಿನಿಮಾದಲ್ಲಿ ಕಿರಣ್​ ರಾಜ್​ ನಟಿಸಿದ್ದಾರೆ. ಏಪ್ರಿಲ್​ 5ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಪ್ರಸಿದ್ಧ್​ ನಿರ್ದೇಶನ ಮಾಡಿದ್ದಾರೆ. ಕಿರಣ್​ ರಾಜ್​ ಮತ್ತು ಯಶಾ ಶಿವಕುಮಾರ್​ ಅವರು ಜೋಡಿಯಾಗಿ ನಟಿಸಿದ್ದಾರೆ.

ಏಪ್ರಿಲ್​ 5ರಂದು ಕಿರಣ್​ ರಾಜ್​ ನಟನೆಯ ಹೊಸ ಸಿನಿಮಾ ‘ಭರ್ಜರಿ ಗಂಡು’ ಬಿಡುಗಡೆ
ಕಿರಣ್​ ರಾಜ್​
Follow us on

ನಟ ಕಿರಣ್​ ರಾಜ್​ (Kiran Raj) ಅವರು ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಟಿವಿ ಪ್ರೇಕ್ಷಕರ ಮನದಲ್ಲಿ ಅವರು ಸ್ಥಾನ ಪಡೆದುಕೊಂಡಿದ್ದಾರೆ. ‘ಕನ್ನಡತಿ’ ಸೀರಿಯಲ್​ನಲ್ಲಿ ಹರ್ಷ ಎಂಬ ಪಾತ್ರ ಮಾಡುವ ಮೂಲಕ ಕಿರುತೆರೆ ಲೋಕದಲ್ಲಿ ತಮ್ಮದೇ ರೀತಿಯಲ್ಲಿ ಛಾಪು ಮೂಡಿಸಿದ ನಟ ಅವರು. ಅಷ್ಟೇ ಅಲ್ಲದೇ ಕಿರಣ್ ರಾಜ್ ಅವರು ಸಿನಿಮಾಗಳಲ್ಲೂ ಮುಖ್ಯ ಭೂಮಿಕೆ ನಿಭಾಯಿಸುವ ಮೂಲಕ ತಮ್ಮ ವ್ಯಾಪ್ತಿ ವಿಸ್ತರಿಸಿಕೊಂಡಿದ್ದಾರೆ. ಈಗ ಅವರು ಹೀರೋ ಆಗಿ ನಟಿಸಿರುವ ‘ಭರ್ಜರಿ ಗಂಡು’ ಸಿನಿಮಾ (Bharjari Gandu Movie) ಬಿಡುಗಡೆಗೆ ಸಜ್ಜಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಕಿರಣ್​ ರಾಜ್​ ಅಭಿನಯಿಸಿರುವ ‘ಭರ್ಜರಿ ಗಂಡು’ ಸಿನಿಮಾ ಈಗಾಗಲೇ ಟ್ರೇಲರ್​ ಮೂಲಕ ಗಮನ ಸೆಳೆದಿದೆ. ಈ ವಾರ (ಏಪ್ರಿಲ್​ 5) ರಾಜ್ಯಾದ್ಯಂತ ಈ ಸಿನಿಮಾ ತೆರೆ ಕಾಣಲಿದೆ. ಕಿರುತೆರೆಯಲ್ಲಿ ಕಿರಣ್​ ರಾಜ್​ ಅವರನ್ನು ನೋಡಿ ಮೆಚ್ಚಿಕೊಂಡಿರುವ ಅಭಿಮಾನಿಗಳು ದೊಡ್ಡ ಪರದೆಯಲ್ಲಿ ಕೂಡ ಅಷ್ಟೇ ಪ್ರೋತ್ಸಾಹ ನೀಡುತ್ತಾರೆ ಎಂಬ ಭರವಸೆ ಈ ಚಿತ್ರತಂಡಕ್ಕಿದೆ. ‘ಭರ್ಜರಿ ಗಂಡು’ ಸಿನಿಮಾದಲ್ಲಿ ಕಿರಣ್​ ರಾಜ್​ ಅವರು ಹಳ್ಳಿ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಕಿರಣ್ ರಾಜ್ ಸಿನಿಮಾದಲ್ಲಿ ತನಿಷಾ ಕುಪ್ಪಂಡ ರಗಡ್ ಪೋಲೀಸ್ ಅವತಾರ

‘ಭರ್ಜರಿ ಗಂಡು’ ಸಿನಿಮಾವನ್ನು ಪ್ರಸಿದ್ದ್ ಸಿನಿಮಾಸ್, ಮದನ್ ಗೌಡ ಮತ್ತು ಅನಿಲ್ ಕುಮಾರ್ ಅವರು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಗುಮ್ಮಿನೇನಿ‌ ವಿಜಯ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕಿಟ್ಟಿ ಕೌಶಿಕ್ ಅವರ ಛಾಯಾಗ್ರಹಣ, ವೆಂಕಿ ಯುಡಿವಿ ಅವರ ಸಂಕಲನ ಈ ಸಿನಿಮಾಗೆ ಇದೆ. ಮಳವಳ್ಳಿ ಸಾಯಿಕೃಷ್ಣ ಅವರು ‘ಭರ್ಜರಿ ಗಂಡು’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಟ್ರೇಲರ್​ನಲ್ಲಿ ಡೈಲಾಗ್​ಗಳು ಗಮನ ಸೆಳೆದಿವೆ.

ಇದನ್ನೂ ಓದಿ: ಮುಂದವರೆದ ನಟ ಕಿರಣ್ ರಾಜ್ ಸಾಮಾಜಿಕ ಕಾರ್ಯ: ಆಗ ಶಾಲೆ, ಈಗ ಆಶ್ರಮ

ಈ ಸಿನಿಮಾದಲ್ಲಿ ಕಿರಣ್ ರಾಜ್ ಅವರಿಗೆ ಜೋಡಿಯಾಗಿ ಯಶಾ ಶಿವಕುಮಾರ್ ಅವರು ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್​ ಫ್ರೆಶ್​ ಆಗಿದ್ದು, ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ. ರಾಕೇಶ್ ರಾಜ್, ರಮೇಶ್ ಭಟ್, ಸುರೇಖಾ, ಜಯಶ್ರೀ, ವೀಣಾ ಸುಂದರ್, ನಾಗೇಶ್ ರೋಹಿತ್, ಮಡೆನೂರು ಮನು, ಸೌರಭ್ ಕುಲಕರ್ಣಿ, ಗೋವಿಂದೇ ಗೌಡ ಸೇರಿದಂತೆ ಅನೇಕ ಕಲಾವಿದರು ‘ಭರ್ಜರಿ ಗಂಡು’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.