AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಲಿಯನ್​ ಮುಟ್ಟಿದ ‘ಕೋಲೆ ಕೋಲೆ..’ ಹಾಡು; ‘ರಾನಿ’ ಚಿತ್ರಕ್ಕಾಗಿ ಕಿರಣ್​ ರಾಜ್​ ಸಾಹಸ

‘ನಮ್ಮ ಸಿನಿಮಾದ ಮೊದಲ ಹಾಡು ರಿಲೀಸ್​ ಆಗಿ ಹಿಟ್ ಆಗಿದೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿದ ಬಳಿಕ ಕೆಲಸ ಮಾಡುವ ಜೋಶ್ ಮತ್ತಷ್ಟು ಹೆಚ್ಚಾಗಿದೆ’ ಎಂದು ನಟ ಕಿರಣ್​ ರಾಜ್​ ಹೇಳಿದ್ದಾರೆ. ಈ ಸಿನಿಮಾಗೆ ಗುರುತೇಜ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ‘ಚಿತ್ರದ ಮೊದಲ ಪ್ರತಿ ರೆಡಿಯಾಗಿದೆ. ಸಿನಿಮಾ ಬಿಡುಗಡೆ ದಿನಾಂಕವನ್ನು ಶೀಘ್ರವೇ ತಿಳಿಸಲಿದ್ದೇವೆ’ ಎಂದು ಗುರುತೇಜ್​ ಶೆಟ್ಟಿ ಹೇಳಿದ್ದಾರೆ.

ಮಿಲಿಯನ್​ ಮುಟ್ಟಿದ ‘ಕೋಲೆ ಕೋಲೆ..’ ಹಾಡು; ‘ರಾನಿ’ ಚಿತ್ರಕ್ಕಾಗಿ ಕಿರಣ್​ ರಾಜ್​ ಸಾಹಸ
ಕಿರಣ್​ ರಾಜ್​
ಮದನ್​ ಕುಮಾರ್​
|

Updated on: Mar 13, 2024 | 5:10 PM

Share

ನಟ ಕಿರಣ್​ ರಾಜ್​ (Kiran Raj) ಅವರು ಹಿರಿತೆರೆಯಲ್ಲಿ ಗೆಲುವು ಪಡೆಯುವ ಸಲುವಾಗಿ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಅವರು ಹೀರೋ ಆಗಿ ನಟಿಸಿರುವ ‘ರಾನಿ’ ಸಿನಿಮಾದ (Ronny Movie) ಪೋಸ್ಟರ್​ ಮತ್ತು ಟೀಸರ್​ ಈಗಾಗಲೇ ಅವರ ಅಭಿಮಾನಿಗಳ ಗಮನ ಸೆಳೆದಿದೆ. ಪ್ರತಿ ಅಪ್​ಡೇಟ್​ ನೀಡುವಾಗಲೂ ಕಿರಣ್​ ರಾಜ್​ ಅವರು ಸಾಹಸ ಮೆರೆಯುತ್ತಾರೆ ಎಂಬುದು ವಿಶೇಷ. ಇತ್ತೀಚೆಗೆ ಮಹಾ ಶಿವರಾತ್ರಿಯ ಹಬ್ಬದ ದಿನ ‘ರಾನಿ’ ಸಿನಿಮಾದ ‘ಕೋಲೆ ಕೋಲೆ..’ (Kole Kole) ಎಂಬ ಹೊಸ ಹಾಡು ಬಿಡುಗಡೆ ಆಯಿತು. ಜಾನಪದ ಶೈಲಿಯಲ್ಲಿ ಮೂಡಿಬಂದಿರುವ ಈ ಮಾಸ್​ ಗೀತೆಯು ಟಿ-ಸಿರೀಸ್ ಯೂಟ್ಯೂಬ್ ಚಾನಲ್ ಮೂಲಕ ವೀಕ್ಷಣೆಗೆ ಲಭ್ಯವಾಗಿದೆ. ಯುವ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗಿರುವ ‘ಕೋಲೆ ಕೋಲೆ..’ ಹಾಡು 1 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ. ಕದ್ರಿ ಮಣಿಕಾಂತ್ ಅವರ ಸಂಗೀತ, ಪ್ರಮೋದ್​ ಮರವಂತೆ ಅವರ ಸಾಹಿತ್ಯದಲ್ಲಿ ಹಾಡು ಮೂಡಿಬಂದಿದೆ.

‘ರಾನಿ’ ಸಿನಿಮಾದ ಬಗ್ಗೆ ಪ್ರಚಾರ ಮಾಡಲು ನಟ ಕಿರಣ್​ ರಾಜ್​ ಅವರು ಭಿನ್ನ ವಿಭಿನ್ನ ಸಾಹಸಗಳನ್ನು ಪ್ರಯತ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಆರಂಭದಿಂದಲೂ ಆಸಕ್ತಿ ತೋರಿಸುತ್ತಿದ್ದಾರೆ. ಈ ವರ್ಷದ ಶಿವರಾತ್ರಿ ಪ್ರಯುಕ್ತ ಕಿರಣ್ ರಾಜ್ ಅವರು ಪ್ರಪಂಚದ ಅತೀ ಎತ್ತರದಲ್ಲಿರುವ ಶಿವನ ಮಂದಿರವಾದ ಉತ್ತರಕಾಂಡದ ತುಂಗ್ ನಾಥ್ ದೇವಾಲಯಕ್ಕೆ ತೆರಳಿ ಅಭಿಮಾನಿಗಳಿಗೆ ಶುಭಕೋರಿದ್ದಾರೆ.

ಇದನ್ನೂ ಓದಿ: ಕಿರಣ್ ರಾಜ್​ ಹೊಸ ಸಿನಿಮಾ ‘ಮೇಘಾ’; ಟೀಸರ್​ ಬಿಡುಗಡೆ ಮಾಡಿದ ನಾಗೇಂದ್ರ ಪ್ರಸಾದ್​

ಯಾವಾಗಲೂ ಒಂದಲ್ಲಾ ಒಂದು ಸಾಹಸದಲ್ಲಿ ತೊಡಗುವ ಕಿರಣ್ ರಾಜ್ ಅವರು ಈಗಾಗಲೇ ‘ರಾನಿ’ ಸಿನಿಮಾದ ಸಲುವಾಗಿ ಸ್ಕೈಡೈವಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ಮಾಡಿದ್ದು ಸಖತ್​ ಸುದ್ದಿ ಆಗಿತ್ತು. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ನಿರ್ದೇಶಕರ ನಟ ಆಗಬೇಕು. ಡೈರೆಕ್ಟರ್​ ಬರೆಯುವ ಪಾತ್ರಕ್ಕೆ ನ್ಯಾಯ ನೀಡುವುದು ಎಲ್ಲ ಕಲಾವಿದರ ಕರ್ತವ್ಯ. ಹಾಗಾಗಿ ನಾನು ಯಾವಾಗಲೂ ಕಲಿಯುತ್ತಿರುತ್ತೇನೆ. ರಾನಿ ಚಿತ್ರವನ್ನು ಫ್ಯಾಮಿಲಿ ಆ್ಯಕ್ಷನ್ ಸಿನಿಮಾ ಎಂದರೆ ತಪ್ಪಾಗುವುದಿಲ್ಲ. ಕಾಮಿಡಿ, ಆ್ಯಕ್ಷನ್, ಲವ್, ಫ್ಯಾಮಿಲಿ ಡ್ರಾಮಾ ಮುಂತಾದ ಅಂಶಗಳು ಒಂದೇ ಚಿತ್ರದಲ್ಲಿ ಸಿಕ್ಕಿರುವುದು ನನ್ನ ಅದೃಷ್ಟ’ ಎಂದು ಕಿರಣ್​ ರಾಜ್​ ಹೇಳಿದ್ದಾರೆ.

ಸಚಿನ್ ಬಸ್ರೂರ್ ಅವರ ಹಿನ್ನೆಲೆ ಸಂಗೀತ, ರಾಘವೇಂದ್ರ ಬಿ. ಕೋಲಾರ ಅವರ ಛಾಯಾಗ್ರಾಹಣ, ಉಮೇಶ ಆರ್.ಬಿ. ಅವರ ಸಂಕಲನ, ಸತೀಶ್ ಅವರ ಕಲಾ ನಿರ್ದೇಶನ ‘ರಾನಿ’ ಚಿತ್ರಕ್ಕಿದೆ. ಉಮೇಶ ಹೆಗ್ಡೆ ಮತ್ತು ಚಂದ್ರಕಾಂತ್ ಪೂಜಾರಿ ಅವರು ‘ಸ್ಟಾರ್ ಕ್ರಿಯೇಷನ್’ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಕಿರಣ್​ ರಾಜ್​ ಜೊತೆ ಸಮಿಕ್ಷಾ, ಅಪೂರ್ವಾ ಮತ್ತು ರಾಧ್ಯ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ರವಿ ಶಂಕರ್​, ಗಿರೀಶ್ ಹೆಗ್ಡೆ, ಮೈಕೋ ನಾಗರಾಜ್, ಸೂರ್ಯ ಕುಂದಾಪುರ, ಧರ್ಮೇಂದ್ರ ಆರಸ್, ಧರ್ಮಣ್ಣ ಕಡೂರ್, ಪ್ರಥ್ವಿ ರಾಜ್, ಉಗ್ರಂ ಮಂಜು, ಅರ್ಜುನ್ ಪಾಳೇಗಾರ, ಯಶ್ ಶೆಟ್ಟಿ, ಅನಿಲ್ ಯಾದವ್, ಶ್ರೀಧರ್, ಚೇತನ್ ದುರ್ಗ, ಮಠ ಗುರುಪ್ರಸಾದ್, ಸುಜಯ್ ಶಾಸ್ತ್ರೀ ಮಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್