‘ಕೊತ್ತಲವಾಡಿ’ ಟ್ರೈಲರ್ ಬಿಡುಗಡೆ: ಸಿನಿಮಾ ಬಗ್ಗೆ ಮೂಡಿಸಿದೆ ಭರವಸೆ

Kothalavadi movie: ಯಶ್ ಅವರ ತಾಯಿ ಪುಷ್ಪ ನಿರ್ಮಾಣ ಮಾಡಿ‘ಕೊತ್ತಲವಾಡಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾದ ಕತೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಚೀರಿ ಹೇಳುತ್ತಿದೆ ಟ್ರೈಲರ್. ‘ಕೊತ್ತಲವಾಡಿ’ ಹೆಸರೇ ಸೂಚಿಸುತ್ತಿರುವಂತೆ ಒಂದು ಹಳ್ಳಿಯ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದ್ದು, ಈಗ ಬಿಡುಗಡೆ ಆಗಿರುವ 2:24 ನಿಮಿಷದ ಟ್ರೈಲರ್ ಸಿನಿಮಾದ ರೀತಿಯೇ ಥ್ರಿಲ್ಲಿಂಗ್ ಆಗಿದೆ.

‘ಕೊತ್ತಲವಾಡಿ’ ಟ್ರೈಲರ್ ಬಿಡುಗಡೆ: ಸಿನಿಮಾ ಬಗ್ಗೆ ಮೂಡಿಸಿದೆ ಭರವಸೆ
Kothalavadi

Updated on: Jul 23, 2025 | 3:57 PM

ಸ್ಟಾರ್ ನಟ ಯಶ್ (Yash) ಅವರ ತಾಯಿ ಪುಷ್ಪ ಅವರು ನಿರ್ಮಾಣ ಮಾಡಿದ್ದಾರೆ ಎಂಬ ಕಾರಣಕ್ಕೆ ಇಷ್ಟು ದಿನ ಗಮನ ಸೆಳೆದಿತ್ತು ‘ಕೊತ್ತಲವಾಡಿ’ ಸಿನಿಮಾ. ಈಗ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾದ ಕತೆಯ ಬಗ್ಗೆಯೂ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಚೀರಿ ಹೇಳುತ್ತಿದೆ ಟ್ರೈಲರ್. ‘ಕೊತ್ತಲವಾಡಿ’ ಹೆಸರೇ ಸೂಚಿಸುತ್ತಿರುವಂತೆ ಒಂದು ಹಳ್ಳಿಯ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದ್ದು, ಈಗ ಬಿಡುಗಡೆ ಆಗಿರುವ 2:24 ನಿಮಿಷದ ಟ್ರೈಲರ್ ಸಿನಿಮಾದ ರೀತಿಯೇ ಥ್ರಿಲ್ಲಿಂಗ್ ಆಗಿದೆ.

ಟ್ರೈಲರ್​ನ ಆರಂಭದಲ್ಲಿ ಹಾಸ್ಯ, ಪ್ರೇಮ, ಬಂಧ, ಅನುಬಂಧಗಳ ಕತೆ ಇದಾಗಿರಬಹುದು ಎಂಬ ಅನುಮಾನ ಮೂಡಿಸುವಂತೆ ಮಾಡುವ ಟ್ರೈಲರ್ ಆ ನಂತರ ಸಿನಿಮಾದ ನಿಜವಾದ ಕತೆ ಅದಲ್ಲ ಎಂದು ಹೇಳುತ್ತದೆ. ಹಳ್ಳಿಯೊಂದರಲ್ಲಿ ಇಬ್ಬರು ಆತ್ಮೀಯರ ಮಧ್ಯೆ ನಡೆಯುವ ಅಧಿಕಾರಕ್ಕಾಗಿ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿರುವ ಸುಳಿವನ್ನು ‘ಕೊತ್ತಲವಾಡಿ’ ಟ್ರೈಲರ್ ನೀಡುತ್ತಿದೆ. ರಾಜಕೀಯ, ಚುನಾವಣೆ, ಪೊಲೀಸರ ಅವಕಾಶವಾದಿತನ, ನಾಯಕನ ಹೋರಾಟ, ಛಲ ಎಲ್ಲ ಅಂಶಗಳನ್ನು ಈಗ ಬಿಡುಗಡೆ ಆಗಿರುವ ಟ್ರೈಲರ್ ಒಳಗೊಂಡಿದೆ.

ಇದನ್ನೂ ಓದಿ:‘ಕೊತ್ತಲವಾಡಿ’ ಹೀರೋ ಪೃಥ್ವಿ ಅಂಬಾರ್ ವರ್ಕೌಟ್ ವಿಡಿಯೋ

ಟ್ರೈಲರ್​​ನಲ್ಲಿ ನಾಯಕ ಪೃಥ್ವಿ ಅಂಬರ್ ಅವರ ಆಕ್ಷನ್ ಗಮನ ಸೆಳೆಯುತ್ತಿದೆ. ಈ ಹಿಂದಿನ ಸಿನಿಮಾಗಳಲ್ಲಿ ಚಾಕಲೇಟ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಪೃಥ್ವಿ ಅಂಬರ್ ಈ ಸಿನಿಮಾನಲ್ಲಿ ಆಕ್ಷನ್ ಹಿರೋ ಆಗಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್​​ನಲ್ಲಿ ಪೃಥ್ವಿ ಅವರಷ್ಟೆ ಗಮನ ಸೆಳೆಯುವುದು ನಟ ಗೋಪಾಲ ದೇಶಪಾಂಡೆ. ಅದ್ಭುತ ನಟರಾದ ಗೋಪಾಲ ದೇಶಪಾಂಡೆ ಅವರಿಗೆ ಕೊತ್ತಲವಾಡಿಯಲ್ಲಿಯೂ ಸವಾಲಿನ ಪಾತ್ರವೇ ದೊರೆತಂತಿದೆ. ರಾಜೇಶ್ ನಟರಂಗ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಕತೆಯಲ್ಲಿ ಅವರ ಪಾತ್ರಕ್ಕೂ ಪ್ರಧಾನ ಸ್ಥಾನ ಇದ್ದಂತಿದೆ.

‘ಕೊತ್ತಲವಾಡಿ’ ಸಿನಿಮಾವನ್ನು ಯಶ್ ಅವರ ತಾಯಿ ಪುಷ್ಪ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಶ್ರೀರಾಜ್. ಸಿನಿಮಾನಲ್ಲಿ ನಾಯಕಿಯಾಗಿ ಕಾವ್ಯಾ ಶೈವ ನಟಿಸಿದ್ದಾರೆ. ಅವಿನಾಶ್, ಮಾನಸಿ ಸುಧೀರ್, ರಘು ರಾಮನಕೊಪ್ಪ ಇನ್ನಿತರೆ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ವಿಕಾಸ್ ವಸಿಷ್ಠ, ಸಿನಿಮಾ ವಿತರಣೆ ಮಾಡಲಿರುವುದು ಕೆಆರ್​ಜಿ ಸ್ಟುಡಿಯೋಸ್. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Wed, 23 July 25