ಹೊಂಬಾಳೆ ಪ್ರಸ್ತುತ ಪಡಿಸುತ್ತಿರುವ ಸಿನಿಮಾ ಮೇಲೆ ಆಟಿಕೆ ಸಂಸ್ಥೆ ಕಣ್ಣು
Mahavatara Narasimha: ಹೊಂಬಾಳೆ ಫಿಲಮ್ಸ್ ಪ್ರಸ್ತುತ ಪಡಿಸುತ್ತಿರುವ ಮತ್ತು ವಿತರಣೆಯನ್ನೂ ಮಾಡುತ್ತಿರುವ ‘ಮಹಾವತಾರ ನರಸಿಂಹ’ ಅನಿಮೇಷನ್ ಸಿನಿಮಾ ಇದೇ ಜುಲೈ 25 ರಂದು ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಬಿಡುಗಡೆಗೆ ಮುಂಚೆಯೇ ಬೃಹತ್ ಆಟಿಕೆ ನಿರ್ಮಾಣ ಸಂಸ್ಥೆಯೊಂದು ಸಿನಿಮಾದ ಹಕ್ಕು ಖರೀದಿಗೆ ಮುಂದಾಗಿದೆ.
ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿ, ಹೊಂಬಾಳೆ ಫಿಲಮ್ಸ್ (Hombale Films) ಪ್ರೆಸೆಂಟ್ ಮಾಡುತ್ತಿರುವ ‘ಮಹಾವತಾರ ನರಸಿಂಹ’ ಸಿನಿಮಾ ಇದೇ ಶುಕ್ರವಾರ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಅನಿಮೇಷನ್ ಸಿನಿಮಾ ಇದಾಗಿದ್ದು, ನರಸಿಂಹನ ಅವತಾರದ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಟ್ರೈಲರ್ ನಿಂದ ಸಿನಿಮಾದ ಬಗ್ಗೆ ನಿರೀಕ್ಷೆಗಳು ಮೂಡಿವೆ. ಇದೀಗ ದೊಡ್ಡ ಆಟಿಕೆ ಸಂಸ್ಥೆಯೊಂದು ಸಿನಿಮಾದ ಹಕ್ಕುಗಳನ್ನು ಖರೀದಿ ಮಾಡಲು ಮುಂದಾಗಿದೆ.
ಅನಿಮೇಷನ್ ಅಥವಾ ಇನ್ಯಾವುದೇ ಸಿನಿಮಾಗಳು ಭಾರಿ ದೊಡ್ಡ ಯಶಸ್ಸಾದರೆ ಆ ಸಿನಿಮಾಗಳ ಪಾತ್ರಗಳ ಮಾದರಿಯಲ್ಲಿಯೇ ಆಟಿಕೆಗಳನ್ನು ಮಾಡಿ ಮಾರುಕಟ್ಟೆಗೆ ತುರಲಾಗುತ್ತದೆ. ಇದಕ್ಕೆ ಭಾರಿ ಬೇಡಿಕೆ ಇದೆ. ಸ್ಪೈಡರ್ಮ್ಯಾನ್, ಐರನ್ ಮ್ಯಾನ್ ಹೀಗೆ ಅನೇಕ ಪಾತ್ರಗಳ ಬೊಂಬೆಗಳನ್ನು ಮಾಡಿ ಮಾರಾಟ ಮಾಡಲಾಗುತ್ತದೆ. ಮಾತ್ರವಲ್ಲದೆ ಆ ಪಾತ್ರಗಳನ್ನು ಇರಿಸಿಕೊಂಡು ವಿಡಿಯೋ ಗೇಮ್ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ ಸಿನಿಮಾ ನಿರ್ಮಾಣ ಸಂಸ್ಥೆಗಳ ಅನುಮತಿ ಕಡ್ಡಾಯ. ಇದೀಗ ದೊಡ್ಡ ಆಟಿಕೆ ಉತ್ಪಾದನಾ ಸಂಸ್ಥೆಯೊಂದು ‘ಮಹಾವತಾರ ನರಸಿಂಹ’ ಸಿನಿಮಾದ ಹಕ್ಕುಗಳ ಖರೀದಿಗೆ ಮುಂದಾಗಿದ್ದು, ಪಾತ್ರಗಳನ್ನು ಇರಿಸಿಕೊಂಡು ಗೇಮ್ಗಳನ್ನು ನಿರ್ಮಾಣ ಮಾಡುವ ಯೋಜನೆ ಇದ್ದಂತಿದೆ.
‘ಮಹಾವತಾರ ನರಸಿಂಹ’ ಸಿನಿಮಾದ ಹಕ್ಕು ಖರೀದಿಗೆ ಮುಂದಾಗಿರುವ ಆ ಆಟಿಕೆ ಸಂಸ್ಥೆ ಯಾವುದು ಎಂಬ ಗುಟ್ಟು ಇನ್ನೂ ರಟ್ಟಾಗಿಲ್ಲ. ಆದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ಹೀಗೊಂದು ಆಫರ್ ಬಂದಿರುವುದು ನಿರ್ಮಾಣ ಸಂಸ್ಥೆ ಹಾಗೂ ಸಿನಿಮಾ ಪ್ರೆಸೆಂಟ್ ಮಾಡುತ್ತಿರುವ ಹೊಂಬಾಳೆ ಸಂಸ್ಥೆಯ ಪಾಲಿಗೆ ಒಳ್ಳೆಯ ಬೆಳವಣಿಗೆ.
ಇದನ್ನೂ ಓದಿ:ಬಹುಭಾಷೆಯಲ್ಲಿ ಜುಲೈ 25ಕ್ಕೆ ತೆರೆಕಾಣಲಿದೆ ‘ಮಹಾವತಾರ ನರಸಿಂಹ’ ಆನಿಮೇಷನ್ ಸಿನಿಮಾ
ಜುಲೈ 25 ರಂದು ಬಿಡುಗಡೆ ಆಗಲಿರುವ ‘ಮಹಾವತಾರ ನರಸಿಂಹ’ ಸಿನಿಮಾವು, ವಿಷ್ಣುವಿನ ನರಸಿಂಹ ಅವತಾರದ ಕತೆಯನ್ನು ಒಳಗೊಂಡಿದ್ದು, ಸಿನಿಮಾ ಸಂಪೂರ್ಣ ಅನಿಮೇಟೆಡ್ ಆಗಿರಲಿದೆ. ಈ ಸಿನಿಮಾವನ್ನು ಕ್ಲೀಮ್ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಸಿನಿಮಾವನ್ನು ಅಶ್ವಿಕ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಾಣ ಮಾಡಿದ್ದಾರೆ.
ಮಹಾವತಾರ ಯೂನಿವರ್ಸ್
“ಮಹಾವತಾರ್ ನರಸಿಂಹ” ಸಿನಿಮಾ ಭಗವಾನ್ ವಿಷ್ಣುವಿನ ದಶಾವತಾರಗಳ ಆಧಾರದ ಮೇಲೆ ಬರಲಿರುವ ಸಿನಿಮಾ ಆಗಿರಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ‘ಮಹಾವತಾರ್’ ಯೂನಿವರ್ಸ್ನ ಏಳು ಸಿನಿಮಾಗಳು ತೆರೆಗೆ ಬರಲಿದೆ. ಸಿನಿಮಾಗಳ ಟೈಂಲೈನ್ ಹೀಗಿದೆ. “ಮಹಾವತಾರ್ ನರಸಿಂಹ” (2025), “ಮಹಾವತಾರ್ ಪರಶುರಾಮ” (2027), “ಮಹಾವತಾರ್ ರಘುನಂದನ” (2029), “ಮಹಾವತಾರ್ ಧ್ವಾಕಾಧೀಶ್” (2031), “ಮಹಾವತಾರ್ ಗೋಕುಲನಂದ” (2033), “ಮಹಾವತಾರ್ ಕಲ್ಕಿ ಭಾಗ 1” (2035), “ಮಹಾವತಾರ್ ಕಲ್ಕಿ ಭಾಗ 2” (2037) ಮೂಡಿಬರಲಿವೆ. ಜುಲೈ 25ರಂದು “ಮಹಾವತಾರ್ ನರಸಿಂಹ” ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




