ಶಿವಣ್ಣ ಫ್ಯಾನ್ಸ್ ಕ್ರೇಜ್ ಯಾವತ್ತೂ ಕಡಿಮೆ ಆಗಲ್ಲ: ಸಾಕ್ಷಿ ತೋರಿಸಿದ ಕೆ.ಪಿ. ಶ್ರೀಕಾಂತ್

ಅರ್ಜುನ್ ಜನ್ಯ ಅವರು ಆ್ಯಕ್ಷನ್-ಕಟ್ ಹೇಳಿರುವ ‘45’ ಸಿನಿಮಾದ ಪ್ರೀಮಿಯರ್ ಶೋ ಯಶಸ್ವಿ ಆಗಿದೆ. ಈ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಅವರ ಅಭಿನಯ ನೋಡಿ ಅವರ ಅಭಿಮಾನಿಗಳಿಗೆ ಬಹಳ ಖುಷಿಯಾಗಿದೆ. ಸಿನಿಮಾ ನೋಡಲು ಬಂದ ಕೆ.ಪಿ. ಶ್ರೀಕಾಂತ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

ಶಿವಣ್ಣ ಫ್ಯಾನ್ಸ್ ಕ್ರೇಜ್ ಯಾವತ್ತೂ ಕಡಿಮೆ ಆಗಲ್ಲ: ಸಾಕ್ಷಿ ತೋರಿಸಿದ ಕೆ.ಪಿ. ಶ್ರೀಕಾಂತ್
Kp Srikanth, Shivarajkumar
Edited By:

Updated on: Dec 24, 2025 | 10:55 PM

‘ಹ್ಯಾಟ್ರಿಕ್ ಹೀರೋ’ ಶಿವರಾಜ್​​ಕುಮಾರ್ ನಟನೆಯ ‘45’ ಸಿನಿಮಾ (45 Kannada Movie) ಡಿಸೆಂಬರ್ 25ಕ್ಕೆ ಎಲ್ಲೆಡೆ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಮತ್​ತು ಉಪೇಂದ್ರ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಡಿಸೆಂಬರ್ 24ರಂದು ಈ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಬೆಂಗಳೂರಿನ ‘ಪ್ರಸನ್ನ’ ಚಿತ್ರಮಂದಿರದಲ್ಲಿ 2 ಪ್ರೀಮಿಯರ್ ಶೋ ಹೌಸ್​ಫುಲ್ ಆಗಿದೆ. ಶಿವರಾಜ್​​ಕುಮಾರ್ (Shivarajkumar) ಅವರ ಆಪ್ತರಾದ ಕೆ.ಪಿ. ಶ್ರೀಕಾಂತ್ ಕೂಡ ಸಿನಿಮಾ ನೋಡಲು ಬಂದಿದ್ದಾರೆ. ‘45’ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ. ಜನರ ಕ್ರೇಜ್ ಯಾವ ರೀತಿ ಇದೆ ಎಂಬುದನ್ನು ಕೆ.ಪಿ. ಶ್ರೀಕಾಂತ್ (KP Srikanth) ಅವರು ವಿವರಿಸಿದ್ದಾರೆ.

‘ಜನರ ರೆಸ್ಪಾನ್ಸ್ ನೋಡಿ ತುಂಬಾ ಖುಷಿ ಆಗುತ್ತಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಧನ್ಯವಾದಗಳು. ತುಂಬಾ ಖರ್ಚು ಮಾಡಿ ಬಹಳ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನಿರ್ದೇಶಕ ಅರ್ಜುನ್ ಜನ್ಯ ಅವರು ಮೊದಲ ನಿರ್ದೇಶನದಲ್ಲೇ ಉತ್ತಮವಾದ ಸಿನಿಮಾ ಮಾಡಿದ್ದಾರೆ. ಶಿವ ತಾಂಡವ ನೋಡಲು ಶಿವನ ಅಭಿಮಾನಿಗಳೆಲ್ಲ ಕಾಯುತ್ತಿದ್ದೇನೆ’ ಎಂದಿದ್ದಾರೆ ಕೆ.ಪಿ. ಶ್ರೀಕಾಂತ್.

‘ಡಾ. ರಾಜ್​​ಕುಮಾರ್ ಅವರು ಅನ್ನದಾತರು ಅಂತ ಕರೆಯುತ್ತಿದ್ದರು. ಇಂದು ಅವರ ಅಭಿಮಾನಿಗಳು ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ‘ಯುವರಾಜ’ ಸಿನಿಮಾವನ್ನು 25 ವರ್ಷಗಳ ಹಿಂದೆ ಇದೇ ಚಿತ್ರಮಂದಿರದಲ್ಲಿ ನಾವೇ ರಿಲೀಸ್ ಮಾಡಿದ್ದೆವು. ನಾನು ನೋಡಿದ ಹಾಗೆ ಆ ಸಿನಿಮಾಗೆ ಎಷ್ಟು ಕ್ರೇಜ್ ಇತ್ತೋ ಈಗಲೂ ಅದೇ ಕ್ರೇಜ್ ಇದೆ. ಶಿವರಾಜ್​​ಕುಮಾರ್ ಮೇಲೆ ಅಭಿಮಾನಿಗಳಿಗೆ ಇರುವ ಕ್ರೇಜ್ ಎಂದಿಗೂ ಕಡಿಮೆ ಆಗಲ್ಲ’ ಎಂದು ಕೆ.ಪಿ. ಶ್ರೀಕಾಂತ್ ಅವರು ಹೇಳಿದ್ದಾರೆ.

‘ನಾಳೆ ರಿಲೀಸ್ ಇದ್ದರೂ ಕೂಡ ಒಂದು ದಿನ ಮೊದಲೇ 2 ಪ್ರೀಮಿಯರ್ ಶೋಗಳು ಪ್ರಸನ್ನ ಚಿತ್ರಮಂದಿರದಲ್ಲಿ ಫುಲ್ ಆಗಿವೆ. ಅದ್ಭುತವಾದ ಪ್ರತಿಕ್ರಿಯೆ ಜನರಿಂದ ಸಿಗುತ್ತಿದೆ. ಅಭಿಮಾನಿಗಳೆಲ್ಲರೂ ಸಂಭ್ರಮಿಸುತ್ತಿದ್ದಾರೆ. ಇಡೀ ಕರ್ನಾಟಕದಲ್ಲಿ ಇದೇ ಸಂಭ್ರಮ ಇದೆ. ಶಿವಣ್ಣ ನಟಿಸಿದ ಟಗರು, ಮಫ್ತಿ ಸಿನಿಮಾಗಳ ರೀತಿಯೇ ‘45’ ಸಿನಿಮಾಗೆ ಕೂಡ ಕ್ರೇಜ್ ಇದೆ’ ಎಂದಿದ್ದಾರೆ ಕೆ.ಪಿ. ಶ್ರೀಕಾಂತ್.

ಇದನ್ನೂ ಓದಿ: ‘45’ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ..

ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಕೂಡ ಡಿಸೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಸ್ಟಾರ್ ಸಿನಿಮಾಗಳು ಹೀಗೆ ಒಂದೇ ದಿನ ಬಿಡುಗಡೆ ಆಗಿದ್ದರಿಂದ ಪೈಪೋಟಿ ಜೋರಾಗಿದೆ. ಎರಡೂ ಸಿನಿಮಾಗಳನ್ನು ಪ್ರೇಕ್ಷಕರು ನೋಡುತ್ತಿದ್ದಾರೆ. ‘ಮಾರ್ಕ್’ ಸಿನಿಮಾದ ಶೋಗಳು ಡಿ.25ರ ಬೆಳಗ್ಗೆ 6 ಗಂಟೆಯಿಂದ ಆರಂಭ ಆಗುತ್ತಿದೆ. ಕ್ರಿಸ್ಮಸ್ ರಜೆ ಇರುವ ಕಾರಣ ಎರಡೂ ಸಿನಿಮಾಗಳಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.