ಹೊಸಬರ ಭಿನ್ನ ಪ್ರಯತ್ನ ‘ಗ್ರೀನ್ ಗರ್ಲ್​’ಗೆ ಕೆಆರ್​ಜಿ ಸಾಥ್

Green Girl movie: ಕನ್ನಡದಲ್ಲಿ ಭಿನ್ನ ಧ್ವನಿ ಇರುವ ಸಿನಿಮಾಗಳಿಗೆ ಬೆಂಬಲ ದೊರೆತಿದೆ. ‘ಡೇರ್ ಡೆವಿಲ್ ಮುಸ್ತಫಾ’, ‘ಶಾಖಾಹಾರಿ’ ಈಗ ‘ಸು ಫ್ರಂ ಸೋ’ ಇನ್ನೂ ಕೆಲವು ಸಿನಿಮಾಗಳನ್ನು ಕನ್ನಡದ ಪ್ರೇಕ್ಷಕರು ನೋಡಿ ಮೆಚ್ಚಿದ್ದಾರೆ. ಇದೀಗ ಇವೆಲ್ಲವಕ್ಕಿಂತಲೂ ಭಿನ್ನ ಧ್ವನಿ ಇರುವ ಸಿನಿಮಾ ಒಂದು ಬಿಡುಗಡೆಗೆ ಸಜ್ಜಾಗಿದ್ದು, ಸಿನಿಮಾಕ್ಕೆ ಪ್ರತಿಷ್ಢಿತ ಕೆಆರ್​ಜಿ ಸಂಸ್ಥೆ ಕೈ ಜೋಡಿಸಿದೆ. ಯಾವುದು ಆ ಸಿನಿಮಾ?

ಹೊಸಬರ ಭಿನ್ನ ಪ್ರಯತ್ನ ‘ಗ್ರೀನ್ ಗರ್ಲ್​’ಗೆ ಕೆಆರ್​ಜಿ ಸಾಥ್
Green Girl

Updated on: Aug 17, 2025 | 10:23 PM

ಹೊಸ ಪ್ರಯತ್ನಗಳು ಕನ್ನಡದಲ್ಲಿ ಮೆಚ್ಚುಗೆ ಪಡೆಯುತ್ತಿವೆ. ಇತ್ತೀಚಿನ ಕೆಲ ತಿಂಗಳುಗಳಲ್ಲಿ ಬಿಡುಗಡೆ ಆದ ‘ಅಜ್ಞಾತವಾಸಿ’, ‘ಸು ಫ್ರಂ ಸೋ’, ‘ಶಾಖಾಹಾರಿ’ ಇನ್ನೂ ಕೆಲವು ಸಿನಿಮಾಗಳು ಮೆಚ್ಚುಗೆ ಗಳಿಸಿವೆ. ‘ಸು ಫ್ರಂ ಸೋ’ ಸಿನಿಮಾ ಅಂತೂ ಬ್ಲಾಕ್ ಬಸ್ಟರ್ ಆಗಿದೆ. ಇದೀಗ ಇವೆಲ್ಲವುಕ್ಕಿಂತಲೂ ಬಹಳ ಭಿನ್ನ ಪ್ರಯತ್ನ ಮಾಡಿರುವ ಒಂದು ಹೊಸಬರ ಪ್ರತಿಭಾವಂತ ತಂಡಕ್ಕೆ ಕೆಆರ್​​ಜಿ ನಿರ್ಮಾಣ ಮತ್ತು ಸಿನಿಮಾ ವಿತರಣೆ ಸಂಸ್ಥೆ ಬೆಂಬಲ ನೀಡಿದೆ. ಇತ್ತೀಚೆಗಷ್ಟೆ ‘ಎಕ್ಕ’ ಸಿನಿಮಾ ನಿರ್ಮಿಸಿದ್ದ ಈ ಸಿನಿಮಾ ಈಗ ಹೊಸ ಹುಡುಗರ ಸಿನಿಮಾಕ್ಕೆ ಸಾಥ್ ನೀಡಿದೆ.

ಸಾರ್ಥಕ್ ಹೆಗ್ಡೆ ನಿರ್ದೇಶನ ಮಾಡಿರುವ ‘ಗ್ರೀನ್ ಗರ್ಲ್’ ಸಿನಿಮಾ ಅನ್ನು ಕೆಆರ್‌ಜಿ ಸಂಸ್ಥೆ ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದೆ. ‘ಗ್ರೀನ್ ಗರ್ಲ್’ ಈಗಾಗಲೇ ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ಸುದ್ದು ಮಾಡಿರುವ ಸಿನಿಮಾ. ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಗ್ರೀನ್ ಗರ್ಲ್ ಇದೀಗ ಚಿತ್ರಂದಿರಕ್ಕೆ ಬರತ್ತಿದೆ. ಸಿನಿಮಾ ಬಿಡುಗಡೆಗೆ ಕೆಆರ್‌ಜಿ ಅಂತ ದೊಡ್ಡ ನಿರ್ಮಾಣ ಸಂಸ್ಥೆಯ ಸಾಥ್ ಸಿಕ್ಕಿರುವುದು ಯುವ ಚಿತ್ರತಂಡಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಜೊತೆಗೆ ಸಿನಿಮಾ ಹೆಚ್ಚು ಜನರಿಗೆ ತಲುಪಲು ಸಹಾಕವಾಗಲಿದೆ.

‘ಕೆಲವು ಕಥೆಗಳನ್ನು ಜೋರಾಗಿ ಮತ್ತು ಸ್ಟ್ರಾಂಗ್ ಆಗಿ ಹೇಳಬೇಕು. ಕೆಆರ್‌ಜಿ ಸಂಸ್ಥೆ ಯಾವಾಗಲೂ ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತಿರುತ್ತೆ. ಸಾರ್ಥಕ್ ಹೆಗ್ಡೆ ಅವರ ದಿಟ್ಟ, ನಿರ್ಭೀತ ಚಿತ್ರ ಗ್ರೀನ್ ಗರ್ಲ್ ಸಿನಿಮಾವನ್ನು ಪ್ರಸ್ತುತಪಡಿಸಲು ತುಂಬಾ ಉತ್ಸುಕರಾಗಿದ್ದೇವೆ. ಗ್ರೀನ್ ಗರ್ಲ್ ಅಂತರ್ಧರ್ಮೀಯ ಪ್ರೀತಿ ಮತ್ತು ನೈತಿಕ ಪೊಲೀಸ್‌ಗಿರಿಯ ಬಗ್ಗೆ ಇದೆ. ಸಾರ್ಥಕ್ ಹೆಗ್ಡೆ ಖಂಡಿತವಾಗಿಯೂ ಕನ್ನಡದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾಗಲಿದ್ದಾರೆ’ ಎಂದು ಕೆಆರ್​ಜಿ ಚಿತ್ರಸಂಸ್ಥೆ ಹೇಳಿದೆ.

ನಿರ್ದೇಶಕ ಸಾರ್ಥಕ್ ಮಾತನಾಡಿ, ‘ಕೆಆರ್‌ಜಿ ಸ್ಟುಡಿಯೋಸ್ ಗ್ರೀನ್ ಗರ್ಲ್ ಸಿನಿಮಾವನ್ನು ಪ್ರಸ್ತುತಪಡಿಸುತ್ತಿರುವುದು ಖುುಷಿಯ ವಿಚಾರ. ಪ್ರೀತಿ, ಧರ್ಮ ಮತ್ತು ದಂಗೆಯ ಬಗ್ಗೆ ಧೈರ್ಯ ಮಾಡಿ ಸಿನಿಮಾ ಮಾಡುವುದು ತುಂಬಾ ಕಡಿಮೆ. ಆದರೆ ಗ್ರೀನ್ ಗರ್ಲ್ ಸಿನಿಮಾ ಕೂಡ ಒಂದು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ವಿಚ್ಛೇದನ ಪಡೆದ ಒಂದು ವರ್ಷದೊಳಗೆ ಅಕ್ಕಿನೇನಿ ನಾಗಾರ್ಜುನಗೆ ಆಗಿತ್ತು ಲವ್

ಕನ್ನಡದಲ್ಲಿ ಜಾತಿ, ಧರ್ಮದಂತಹ ಸೂಕ್ಷ್ಮ ಸಂಗತಿಗಳನ್ನು ಆಧರಿಸಿ ಸಿನಿಮಾ ಮಾಡುವುದು ತುಂಬಾ ಕಮ್ಮಿ. ಆದರೆ ನಿರ್ದೇಶಕ ಸಾರ್ಥಕ್ ಹೆಗ್ಡೆ ‘ಗ್ರೀನ್‌ ಗರ್ಲ್’ ಚಿತ್ರದಲ್ಲಿ ಅಂತಾದೊಂದು ಧೈರ್ಯ ಮಾಡಲಾಗಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಹಾಗಾಗಿ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಮಯೂರ್ ಗೌಡ, ಸುಚರಿತ, ಸುದರ್ಶನ ಆಚಾರ್ಯ ಯೆಕ್ಕಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗ್ರೀನ್ ಗರ್ಲ್’ ಸೆಪ್ಟೆಂಬರ್ 12ಕ್ಕೆ ರಿಲೀಸ್ ಆಗುತ್ತಿದೆ. ಹೊಸಬರ ಗ್ರೀನ್ ಗರ್ಲ್ ಹೇಗಿರಲಿದೆ, ಟ್ರೈಲರ್ ನಲ್ಲಿದ್ದ ಕುತೂಹಲ, ಕಾತರತೆ ಸಿನಿಮಾದಲ್ಲೂ ಇರಲಿದೆಯಾ ಎನ್ನುವುದು ಸೆಪ್ಟಂಬರ್ 12ಕ್ಕೆ ಗೊತ್ತಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ