AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನ ಪಡೆದ ಒಂದು ವರ್ಷದೊಳಗೆ ಅಕ್ಕಿನೇನಿ ನಾಗಾರ್ಜುನಗೆ ಆಗಿತ್ತು ಲವ್

ಅಮಲಾ ಹಾಗೂ ನಾಗಾರ್ಜುನ ಗೆಳೆತನ ಪ್ರೀತಿಗೆ ತಿರುಗಿತ್ತು. ಇವರನ್ನು ತೆರೆಮೇಲೆ ನೋಡಿ ಫ್ಯಾನ್ಸ್ ಇಷ್ಟಪಟ್ಟಿದ್ದರು. ಅದೇ ರೀತಿ ರಿಯಲ್ ಲೈಫ್​ನಲ್ಲೂ ಇವರು ಒಂದಾಗಲಿ ಎನ್ನುವ ಕೋರಿಕೆ ಅಭಿಮಾನಿಗಳಿಗೆ ಇತ್ತು. 1991ರಲ್ಲಿ ಇಬ್ಬರೂ ಅಮೆರಿಕ ತೆರಳಿದರು. ಅಲ್ಲಿ ಅವರು ಅಮಲಾಗೆ ಪ್ರಪೋಸ್ ಮಾಡಿದ್ದರು.

ವಿಚ್ಛೇದನ ಪಡೆದ ಒಂದು ವರ್ಷದೊಳಗೆ ಅಕ್ಕಿನೇನಿ ನಾಗಾರ್ಜುನಗೆ ಆಗಿತ್ತು ಲವ್
ವಿಚ್ಛೇದನ ಪಡೆದ ಒಂದು ವರ್ಷದೊಳಗೆ ಅಕ್ಕಿನೇನಿ ನಾಗಾರ್ಜುನಗೆ ಆಗಿತ್ತು ಲವ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 13, 2024 | 7:42 AM

Share

ಅಕ್ಕಿನೇನಿ ನಾಗಾರ್ಜುನ ಹಾಗೂ ಅಮಲಾ ಅಕ್ಕಿನೇನಿ 1992ರಿಂದ ಒಟ್ಟಾಗಿ ಸಂಸಾರ ನಡೆಸುತ್ತಿದ್ದಾರೆ. ಈ ಮೊದಲು ನಾಗಾರ್ಜುನ ಅವರು ಲಕ್ಷ್ಮೀ ದಗ್ಗುಬಾಟಿಯನ್ನು ವಿವಾಹ ಆಗಿದ್ದರು. ಇವರ ಸಂಸಾರ ಆರು ವರ್ಷ ಸುಖವಾಗಿ ನಡೆಯಿತು. 1990ರಲ್ಲಿ ಇವರು ಬೇರೆ ಆದರು. ಆ ಬಳಿಕ ನಾಗಾರ್ಜುನ ಅವರಿಗೆ ಸಿಕ್ಕಿದ್ದೇ ಅಮಲಾ. ಇಬ್ಬರ ಲವ್​ಸ್ಟೋರಿ ಸೆಟ್​ನಲ್ಲಿಯೇ ಆರಂಭ ಆಯಿತು. ಇವರ ದಾಂಪತ್ಯಕ್ಕೆ 32 ವರ್ಷ ತುಂಬಿದೆ.

ಮೊದಲ ಮದುವೆ

ಹಿರಿಯ ನಿರ್ಮಾಪಕ ದಗ್ಗುಬಾಟಿ ರಾಮಯ್ಯನಾಯ್ಡು ಅವರ ಮಗಳು ಲಕ್ಷ್ಮೀ ದಗ್ಗುಬಾಟಿಯನ್ನು ಅಕ್ಕಿನೇನಿ ನಾಗಾರ್ಜುನ ಮದುವೆ ಆದರು. 1984ರಲ್ಲಿ ಈ ಮದುವೆ ನಡೆಯಿತು. ಇದು ಅರೇಂಜ್ ಮ್ಯಾರೇಜ್ ಆಗಿತ್ತು. 1986ರಲ್ಲಿ ನಾಗ ಚೈತನ್ಯ ಜನಿಸಿದರು. 1990ರಲ್ಲಿ ನಾಗಾರ್ಜುನ ಹಾಗೂ ಲಕ್ಷ್ಮೀ ಬೇರೆ ಆದರು. ವಿಚ್ಛೇದನದ ಬಳಿಕ ನಾಗಾರ್ಜುನ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದರು. ಅಮಲಾ ಅವರು ಅನೇಕ ಸಿನಿಮಾಗಳಲ್ಲಿ ನಾಗಾರ್ಜುನ ಜೊತೆ ತೆರೆ ಹಂಚಿಕೊಂಡರು. ಅಮಲಾ ಅವರ ಡೆಡಿಕೇಷನ್​ ನೋಡಿ ನಾಗಾರ್ಜುನ ಅವರು ಇಂಪ್ರೆಸ್ ಆಗಿದ್ದರು.

ಅಮಲಾ ಹಾಗೂ ನಾಗಾರ್ಜುನ ಒಟ್ಟಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಒಂದು ದೃಶ್ಯದ ಶೂಟ್ ವೇಳೆ ಲಕ್ಷ್ಮೀ ಅವರಿಗೆ ನೀಡಿದ ಬಟ್ಟೆ ಬಗ್ಗೆ ಕಂಪ್ಲೇಟ್ ಇತ್ತು. ಇದನ್ನು ಧರಿಸಲು ಅವರಿಗೆ ಇಷ್ಟ ಇರಲಿಲ್ಲ. ಇದನ್ನು ಅರ್ಥ ಮಾಡಿಕೊಂಡ ನಾಗಾರ್ಜುನ ಅವರು ನಿರ್ದೇಶಕನ ಜೊತೆ ನಾನು ಮಾತನಾಡುತ್ತೇನೆ, ಈ ರೀತಿಯ ಡ್ರೆಸ್ ಕೊಡದಂತೆ ಸೂಚಿಸುತ್ತೇನೆ ಎಂದಿದ್ದರು. ಈ ಮಾತಿನಿಂದ ಅಮಲಾ ಅವರ ಮನ ಗೆದ್ದರು. ನಾಗಾರ್ಜುನ ಅವರು ಇದನ್ನು ಸಾಮಾನ್ಯ ರೀತಿಯಲ್ಲೇ ಹೇಳಿದ್ದರೂ ಕೂಡ, ಅಮಲಾಗೆ ನಾಗಾರ್ಜುನ ಸಖತ್ ಇಷ್ಟ ಆದರು. ಇಬ್ಬರೂ ಬೆಸ್ಟ್ ಫ್ರೆಂಡ್ ಆದರು.

ಗೆಳೆತನ ಪ್ರೀತಿಗೆ ತಿರುಗಿದೆ ಎಂಬ ಭಾವನೆ ಇವರಿಗೆ ಬಂದಿತ್ತು. ಇವರನ್ನು ತೆರೆಮೇಲೆ ನೋಡಿ ಫ್ಯಾನ್ಸ್ ಇಷ್ಟಪಟ್ಟಿದ್ದರು. ಅದೇ ರೀತಿ ರಿಯಲ್ ಲೈಫ್​ನಲ್ಲೂ ಇವರು ಒಂದಾಗಲಿ ಎನ್ನುವ ಕೋರಿಕೆ ಅಭಿಮಾನಿಗಳಿಗೆ ಇತ್ತು. 1991ರಲ್ಲಿ ಇಬ್ಬರೂ ಅಮೆರಿಕ ತೆರಳಿದರು. ಅಲ್ಲಿ ಅವರು ಅಮಲಾಗೆ ಪ್ರಪೋಸ್ ಮಾಡಿದ್ದರು. ವಿಚ್ಛೇದನ ಪಡೆದ ಒಂದೇ ವರ್ಷಕ್ಕೆ ಅಕ್ಕಿನೇನಿ ಮತ್ತೊಂದು ಬಂಧಕ್ಕೆ ಒಳಗಾದರು.

ಇದನ್ನೂ ಓದಿ: ಭಾವಿ ಸೊಸೆಯನ್ನು ‘ಹಾಟ್ ಗರ್ಲ್​’ ಎಂದು ಕರೆದಿದ್ದ ಅಕ್ಕಿನೇನಿ ನಾಗಾರ್ಜುನ

‘ಸಿನಿಮಾ ರೀತಿಯೇ ಪ್ರೀತಿ ಹಾಗು ಮದುವೆ ಎರಡೂ ಆಯಿತು. ನಾಗ್ ಅವರು ನನಗೆ ಪ್ರಪೋಸ್ ಮಾಡಿ ಅಚ್ಚರಿ ಮೂಡಿಸಿದರು. ಮದುವೆ ಆದ ಬಳಿಕ ನಿನಗೆ ಹೇಗೆ ಇರಬೇಕು ಅನಿಸುತ್ತದೆಯೋ ಹಾಗೇ ಇರು ಎಂದು ಹೇಳಿದ್ದರು’ ಎಂಬುದಾಗಿ ಅಮಲಾ ಹೇಳಿಕೊಂಡಿದ್ದರು. ನಾಗಾರ್ಜುನ ಅಕ್ಕಿನೇನಿ ಅವರು ಎವರ್​ಗ್ರೀನ್ ಹೀರೋಗಳಲ್ಲಿ ಒಬ್ಬರು. ನಾಗಾರ್ಜುನ ಅವರು ಬೇಡಿಕೆಯ ಹೀರೋ ಆಗಿದ್ದಾರೆ. ಸದ್ಯ ಬಿಗ್ ಬಾಸ್​ನಲ್ಲಿ ಅವರು ಬ್ಯುಸಿ ಇದ್ದಾರೆ. ಅಮಲಾ-ನಾಗಾರ್ಜುನ ದಂಪತಿಗೆ ಅಖಿಲ್ ಹೆಸರಿನ ಮಗ ಇದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ