ಭಾವಿ ಸೊಸೆಯನ್ನು ‘ಹಾಟ್ ಗರ್ಲ್’ ಎಂದು ಕರೆದಿದ್ದ ಅಕ್ಕಿನೇನಿ ನಾಗಾರ್ಜುನ
ನಾಗ ಚೈತನ್ಯ ಹಾಗೂ ಸಮಂತಾ ಅವರದ್ದು ಮುಗಿದು ಹೋದ ಕಥೆ. ಇಬ್ಬರೂ ದೂರ ಆಗಿ ಕೆಲವು ವರ್ಷಗಳು ಕಳೆದಿವೆ. ಹೀಗಿರುವಾಗಲೇ ನಾಗ ಚೈತನ್ಯ ಅವರು ಶೋಭಿತಾ ಅವರನ್ನು ವರಿಸಲು ಸಿದ್ಧರಾಗಿದ್ದಾರೆ ಎಂದು ವರದಿ ಆಗಿತ್ತು. ಇದು ಈಗ ನಿಜವಾಗಿದೆ.
ಚಿತ್ರರಂಗದಲ್ಲಿ ಯಾರ ಮೇಲೆ ಯಾವಾಗ ಪ್ರೀತಿ ಮೂಡುತ್ತದೆ ಎಂದು ಗೊತ್ತಾಗುವುದಿಲ್ಲ. ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ‘ಕಜ್ರಾ ರೇ..’ ಹಾಡಿಗೆ ಒಟ್ಟಾಗಿ ಡ್ಯಾನ್ಸ್ ಮಾಡಿದ್ದರು. ಐಶ್ವರ್ಯಾ ತಮ್ಮ ಸೊಸೆ ಆಗಿ ಬರುತ್ತಾರೆ ಎಂದು ಅಮಿತಾಭ್ಗೆ ಆ ಸಂದರ್ಭದಲ್ಲಿ ಗೊತ್ತಿರಲಿಲ್ಲ. ಈಗ ಅಕ್ಕಿನೇನಿ ನಾಗಾರ್ಜುನ ಅವರ ವಿಚಾರದಲ್ಲೂ ಹಾಗೆಯೇ ಆಗಿದೆ. ಅವರು ಶೋಭಿತಾ ಬಗ್ಗೆ ನೀಡಿದ್ದ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ನಾಗಾರ್ಜುನ ಅವರ ಮಗ ನಾಗ ಚೈತನ್ಯ ಅವರು ನಟಿ ಶೋಭಿತಾ ಧುಲಿಪಾಲ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರ ಎಂಗೇಜ್ಮೆಂಟ್ ಫೋಟೋಗಳನ್ನು ಸ್ವತಃ ನಾಗಾರ್ಜುನ ಅವರು ಶೇರ್ ಮಾಡಿ ನವಜೋಡಿಗೆ ಶುಭಕೋರಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ. ಈ ಮಧ್ಯೆ ಸಮಂತಾ ಫ್ಯಾನ್ಸ್ ನಾಗ ಚೈತನ್ಯ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಇವರು ಮಾಡಿದ್ದು ಸರಿ ಅಲ್ಲ ಎನ್ನುತ್ತಿದ್ದಾರೆ. ಕೆಲವರು ನಾಗಾರ್ಜುನ ಅವರ ಹಳೆಯ ವಿಡಿಯೋನ ವೈರಲ್ ಮಾಡಿದ್ದಾರೆ.
‘ಶೋಭಿತಾ ಧುಲಿಪಾಲ್ ಅವರು ಚೆನ್ನಾಗಿದ್ದಾರೆ. ನಾನು ಈ ರೀತಿ ಹೇಳಬಾರದು. ಅವರು ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಸಿನಿಮಾದಲ್ಲಿ ಅಟ್ರ್ಯಾಕ್ಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ’ ಎಂದು ಅಕ್ಕಿನೇನಿ ನಾಗಾರ್ಜುನ ಹೇಳಿದ್ದರು. ಈ ವಿಡಿಯೋನ ಈಗ ವೈರಲ್ ಆಗುತ್ತಿದೆ.
View this post on Instagram
ಇದನ್ನೂ ಓದಿ: ಮಾಜಿ ಗಂಡನ 2ನೇ ನಿಶ್ಚಿತಾರ್ಥದ ದಿನವೇ ಒಡೆದ ಹೃದಯದ ಎಮೋಜಿ ಹಾಕಿದ ಸಮಂತಾ; ಆದರೆ..
ಸಮಂತಾ ಹಾಗೂ ನಾಗ ಚೈತನ್ಯ 2021ರಲ್ಲಿ ವಿಚ್ಛೇದನ ಪಡೆದರು. ಆ ಬಳಿಕ ನಾಗ ಚೈತನ್ಯ ಅವರು ಸಿಂಗಲ್ ಆಗಿದ್ದರು. ಆ ಬಳಿಕೆ ಅವರಿಗೆ ಶೋಭಿತಾ ಜೊತೆ ಪ್ರೀತಿ ಮೂಡಿತು. ಈಗ ಶೋಭಿತಾ ಹಾಗೂ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಹೊಸ ಬಾಳಿಗೆ ಕಾಲಿಡಲು ರೆಡಿ ಆಗಿದ್ದಾರೆ. ಇವರ ಮದುವೆ ಯಾವಾಗ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.