ಮತ್ತೆ ಬಂತು 99 ರೂಪಾಯಿ ಟಿಕೆಟ್ ಬೆಲೆ; ಆದರೆ, ಸಿನಿಮಾಗಳೇ ಇಲ್ಲ
ಪಿವಿಆರ್ ಹಾಗೂ ಐನಾಕ್ಸ್ ‘ಸಿನಿಮಾ ಲವರ್ಸ್ ಡೇ’ ಆಚರಣೆ ಮಾಡುತ್ತಿದೆ. ಇದರ ಅಡಿಯಲ್ಲಿ ಸಿನಿಮಾ ಪ್ರಿಯರು 3 ದಿನ ಸಿನಿಮಾನ ಎಂಜಾಯ್ ಮಾಡಬಹುದಾಗಿದೆ. ಶುಕ್ರವಾರ ಹಾಗೂ ಶನಿವಾರ-ಭಾನುವಾರ ಒಂದೊಂದು ಟಿಕೆಟ್ ಬೆಲೆ ನಿಗದಿ ಮಾಡಲಾಗಿದೆ.
ಭಾರತದ ಮಲ್ಟಿಪ್ಲೆಕ್ಸ್ ಚೈನ್ಗಳು ಆಗಾಗ ಸಿನಿಮಾ ಟಿಕೆಟ್ಗಳ ಮೇಲೆ ಆಫರ್ಗಳನ್ನು ನೀಡುತ್ತಾರೆ. ಈಗ ‘ಸಿನಿಮಾ ಲವರ್ಸ್ ವೀಕೆಂಡ್’ ಆಫರ್ ಬಂದಿದೆ. ಆಗಸ್ಟ್ 9ರಿಂದ ಆಗಸ್ಟ್ 11ರವರೆಗೆ ಈ ಆಫರ್ ಇರಲಿದೆ. 9ನೇ ತಾರೀಕು ಟಿಕೆಟ್ ಬೆಲೆ 99 ರೂಪಾಯಿ ಇದೆ. 10 ಹಾಗೂ 11ರಂದು 199 ರೂಪಾಯಿ ಇರಲಿದೆ. ಆದರೆ, ನೋಡಲು ಯಾವುದೇ ಸಿನಿಮಾಗಳು ಇಲ್ಲ ಎಂದು ಸಿನಿಪ್ರಿಯರು ಬೇಸರ ಮಾಡಿಕೊಳ್ಳುತ್ತಿದ್ದಾರೆ.
ಪಿವಿಆರ್ ಹಾಗೂ ಐನಾಕ್ಸ್ ‘ಸಿನಿಮಾ ಲವರ್ಸ್ ಡೇ’ ಆಚರಣೆ ಮಾಡುತ್ತಿದೆ. ಇದರ ಅಡಿಯಲ್ಲಿ ಸಿನಿಮಾ ಪ್ರಿಯರು ಮೂರು ದಿನ ಸಿನಿಮಾನ ಎಂಜಾಯ್ ಮಾಡಬಹುದಾಗಿದೆ. ಇನ್ನು, ಐಮ್ಯಾಕ್ಸ್, 4ಡಿಎಕ್ಸ್, ಎಂಎಕ್ಸ್4ಡಿ ಸ್ಕ್ರೀನ್ಗಳಲ್ಲಿ ಆಗಸ್ಟ್ 9ರಂದು 199 ರೂಪಾಯಿ ಹಾಗೂ 10-11ರಂದು 299 ರೂಪಾಯಿ ಟಿಕೆಟ್ ಬೆಲೆ ಇರಲಿದೆ. ಇನ್ನು ಗೋಲ್ಡ್, ಲಕ್ಸ್, ಡೈರೆಕ್ಟರ್ಸ್ ಕಟ್, ಇನ್ಸಿಗ್ನಿಯಾ ಥಿಯೇಟರ್ಗಳಲ್ಲಿ 9ರಂದು 299 ರೂಪಾಯಿ ಹಾಗೂ 10-11ರಂದು 499 ರೂಪಾಯಿ ಟಿಕೆಟ್ ಬೆಲೆ ಇರಲಿದೆ.
ಕೆಲವರಿಗೆ ಗೋಲ್ಡ್, ಲಕ್ಸ್, ಡೈರೆಕ್ಟರ್ಸ್ ಕಟ್ ಥಿಯೇಟರ್ಗಳನ್ನು ಎಕ್ಸ್ಪೀರಿಯನ್ಸ್ ಮಾಡಬೇಕು ಎಂದಿರುತ್ತದೆ. ಆದರೆ, ದುಬಾರಿ ಟಿಕೆಟ್ ದರದಿಂದ ಅದು ಸಾಧ್ಯವಾಗಿರುವುದಿಲ್ಲ. ಆದರೆ, ಈಗ ಆಫರ್ ಇರುವುದರಿಂದ ಕಡಿಮೆ ಬೆಲೆಯಲ್ಲಿಯೇ ಇಲ್ಲಿ ಸಿನಿಮಾ ನೋಡಬಹುದು.
Brace yourself for an amazing weekend! 🎬Dive into epic films at unbeatable prices from August 9-11 at PVR INOX. Score tickets for just ₹99 on Friday and ₹199 on Saturday and Sunday. Don’t miss out! . . .
*T&Cs Apply#CinemaLoversWeekend #Ulajh #Kalki2898AD #Bornpink… pic.twitter.com/2YjsOaCuVD
— P V R C i n e m a s (@_PVRCinemas) August 8, 2024
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಶೋ ವೇಳೆ ಪಿವಿಆರ್ ಒಳಗೆ ಸುರಿಯಿತು ಮಳೆ ನೀರು; ವಿಡಿಯೋ ವೈರಲ್
‘ಉಲಜ್’, ‘ಕಲ್ಕಿ 2898 ಎಡಿ’, ‘ಬ್ಯಾಡ್ ನ್ಯೂಸ್’, ‘ಕಿಲ್’ ಮೊದಲಾದ ಹಿಂದಿ ಸಿನಿಮಾಗಳು ವೀಕ್ಷಣೆಗೆ ಲಭ್ಯವಿದೆ. ಇಂದು (ಆಗಸ್ಟ್ 9) ‘ಭೀಮ’ ಸಿನಿಮಾ ರಿಲೀಸ್ ಆಗುತ್ತಿದೆ. ಇದಕ್ಕೆ ಟಿಕೆಟ್ ಆಫರ್ ಇರುತ್ತದೆಯೋ ಅಥವಾ ಇಲ್ಲವೋ ಅನ್ನೋದು ಸ್ಪಷ್ಟವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:01 am, Fri, 9 August 24