AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡಿ ಬಾಸ್ ಹುಡುಕಾಟದಲ್ಲಿ ಚಾಲೆಂಜಿಂಗ್ ಸ್ಟಾರ್​ನ ಕಳೆದುಕೊಂಡೆವು’; ದರ್ಶನ್ ಅಭಿಮಾನಿಗಳ ಬೇಸರ

ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರ ಬಿರುದು ಬಳಕೆಯಲ್ಲಿ ಬದಲಾವಣೆ ಕಂಡುಬಂದಿದೆ. ಮೊದಲು ‘ಚಾಲೆಂಜಿಂಗ್ ಸ್ಟಾರ್’ ಎಂದು ಪ್ರಖ್ಯಾತರಾಗಿದ್ದ ಅವರನ್ನು ಈಗ ‘ಡಿ ಬಾಸ್’ ಎಂದು ಹೆಚ್ಚಾಗಿ ಕರೆಯಲಾಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅವರ ಬಂಧನದಿಂದಾಗಿ ಅಭಿಮಾನಿಗಳು ‘ಇನ್ ಸರ್ಚ್ ಆಫ್ ಡಿ ಬಾಸ್, ವಿ ಲಾಸ್ಟ್ ಚಾಲೆಂಜಿಂಗ್ ಸ್ಟಾರ್’ ಎಂಬ ಟ್ರೆಂಡ್ ಅನ್ನು ಪ್ರಾರಂಭಿಸಿದ್ದಾರೆ.

‘ಡಿ ಬಾಸ್ ಹುಡುಕಾಟದಲ್ಲಿ ಚಾಲೆಂಜಿಂಗ್ ಸ್ಟಾರ್​ನ ಕಳೆದುಕೊಂಡೆವು’; ದರ್ಶನ್ ಅಭಿಮಾನಿಗಳ ಬೇಸರ
ದರ್ಶನ್
ರಾಜೇಶ್ ದುಗ್ಗುಮನೆ
|

Updated on:Aug 18, 2025 | 8:55 AM

Share

ಇತ್ತೀಚೆಗೆ ಒಂದು ಟ್ರೆಂಡ್ ಆರಂಭ ಆಗಿತ್ತು. ‘ಇನ್ ಸರ್ಚ್​ ಆಫ್ ಗೋಲ್ಡ್, ವಿ ಲಾಸ್ಟ್ ಡೈಮಂಡ್’ ಎಂಬುದು ಟ್ರೆಂಡ್​ನ ಲೈನ್. ಅಂದರೆ ಚಿನ್ನದ ಹುಡುಕಾಟದಲ್ಲಿ ಅದಕ್ಕಿಂತ ಅತ್ಯಮೂಲ್ಯವಾದ ಡೈಮಂಡ್ ಕಳೆದು ಹೋಯಿತು ಎಂಬುದು ಇದರ ಅರ್ಥ. ಈ ಲೈನ್​ಗಳನ್ನು ತಮಗೆ ಬೇಕಂತೆ ಬದಲಾಯಿಸಿಕೊಂಡು ಅನೇಕರು ಟ್ರೆಂಡ್ ಮಾಡಿದ ಉದಾಹರಣೆ ಇದೆ. ಇದಕ್ಕೆ ಕೆಲ ಪಕ್ಕಾ ದರ್ಶನ್ ಅಭಿಮಾನಿಗಳು ಕೂಡ ಸೇರುತ್ತಾರೆ. ಅವರು ಕೂಡ ದರ್ಶನ್​ (Darshan) ವಿಚಾರದಲ್ಲಿ ಈ ಲೈನ್​ ಬಳಕೆ ಮಾಡಿದ್ದಾರೆ. ‘ಡಿ ಬಾಸ್ ಹುಡುಕಾಟದಲ್ಲಿ ನಾವು ಚಾಲೆಂಜಿಂಗ್ ಸ್ಟಾರ್​ನ ಕಳೆದುಕೊಂಡೆವು’ ಎಂದು ಹೇಳಿದ್ದಾರೆ.

ದರ್ಶನ್ ಅವರಿಗೆ ಹಲವು ಬಿರುದುಗಳು ಇವೆ. ದಾಸ, ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಹೀಗೆ ವಿವಿಧ ನಾಮಾಂಕಿತಗಳಿಂದ ಅವರು ಫೇಮಸ್ ಆಗಿದ್ದಾರೆ. ಈ ಮೊದಲು ಅವರನ್ನು ಬಹುತೇಕರು ಚಾಲೆಂಜಿಂಗ್ ಸ್ಟಾರ್ ಎಂದೇ ಕರೆಯುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರನ್ನು ಡಿ ಬಾಸ್ ಎಂದು ಕರೆಯಲಾಗುತ್ತಿದೆ. ಇದರಿಂದ ಚಾಲೆಂಜಿಂಗ್ ಸ್ಟಾರ್ ಬಿರುದು ಅಷ್ಟಾಗಿ ಬಳಕೆಯಲ್ಲಿ ಇಲ್ಲ.

ಇದನ್ನೂ ಓದಿ
Image
ಬಿಗ್ ಬಾಸ್​ಗೆ ಎಂಟ್ರಿ ಕೊಡಲಿದೆ ಸೆನ್ಸೇಷನ್ ಸೃಷ್ಟಿಸಿದ ಜೋಡಿ
Image
ಬಜೆಟ್​ಗಿಂತ 21 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’
Image
ಮಿಶ್ರ ಪ್ರತಿಕ್ರಿಯೆ ನಡುವೆಯೂ ದಾಖಲೆಯ ಕಲೆಕ್ಷನ್ ಮಾಡಿದ ಕೂಲಿ, ವಾರ್ 2
Image
ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ

ಇಲ್ಲಿ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ಹಾಗೂ ಡಿ ಬಾಸ್​ನ ಬಿರುದನ್ನು ದರ್ಶನ್ ಸಿನಿಮಾ ಕಾಲಘಟ್ಟಕ್ಕೆ ತಕ್ಕಂತೆ ಬಳಸಿದ್ದಾರೆ. ಈ ಮೊದಲು ದರ್ಶನ್ ಅವರು ಆ್ಯಕ್ಷನ್ ಜೊತೆ ರೊಮ್ಯಾಂಟಿಕ್ ಹಿರೋ ಆಗಿ ಹೆಚ್ಚು ಇಷ್ಟ ಆಗುತ್ತಿದ್ದರು. ಆ ರೀತಿಯ ಹಲವು ಸಿನಿಮಾಗಳನ್ನು ಅವರು ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಮಾಸ್ ಸಿನಿಮಾಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ದರ್ಶನ್ ಫ್ಯಾನ್ಸ್ ಪೋಸ್ಟ್

ಇನ್ನು, ದರ್ಶನ್ ಅವರು ಇತ್ತೀಚೆಗೆ ಬೇಡದ ಕಾರಣಗಳಿಂದಲೇ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಈ ಕಾರಣಕ್ಕೆ ಅನೇಕರು, ‘ಇನ್ ಸರ್ಚ್ ಆಫ್ ಡಿ ಬಾಸ್, ವಿ ಲಾಸ್ಟ್ ಚಾಲೆಂಜಿಂಗ್ ಸ್ಟಾರ್’ ಎಂದು ಹಾಕಿದ್ದಾರೆ. ದರ್ಶನ್ ಹಳೆಯ ಚಾರ್ಮ್ ಈಗ ಇಲ್ಲ ಎಂದು ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ದರ್ಶನ್ ಕೇಸಲ್ಲಿ ನೀನು ತಲೆ ತೂರಿಸಬೇಡ’: ಧನ್ವೀರ್ ಗೌಡಗೆ ಪೊಲೀಸ್ ವಾರ್ನಿಂಗ್

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಅವರು ಈ ಮೊದಲು ಜಾಮೀನು ಪಡೆದು ಹೊರಗಿದ್ದರು. ಈಗ ಜಾಮೀನು ರದ್ದಾಗಿರುವುದರಿಂದ ಮತ್ತೆ ಜೈಲು ಸೇರಿದ್ದಾರೆ. ಇದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:52 am, Mon, 18 August 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್