AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಶ್ರ ಪ್ರತಿಕ್ರಿಯೆ ನಡುವೆಯೂ ನಾಲ್ಕೇ ದಿನಕ್ಕೆ ದಾಖಲೆಯ ಕಲೆಕ್ಷನ್ ಮಾಡಿದ ‘ಕೂಲಿ’ ಹಾಗೂ ‘ವಾರ್ 2’

‘ಕೂಲಿ’ ಮತ್ತು ‘ವಾರ್ 2’ ಚಿತ್ರಗಳು ಮಿಶ್ರ ವಿಮರ್ಶೆಗಳನ್ನು ಪಡೆದಿವೆ. ಆದರೂ, ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಗಳಿಕೆ ಮಾಡುತ್ತಿವೆ. ರಜನಿಕಾಂತ್ ಅಭಿನಯದ ಕೂಲಿ ಮತ್ತು ಜೂನಿಯರ್ ಎನ್​ಟಿಆರ್ ಮತ್ತು ಹೃತಿಕ್ ರೋಷನ್ ಅಭಿನಯದ ವಾರ್ 2 ಚಿತ್ರಗಳು 200 ಕೋಟಿ ರೂಪಾಯಿ ಕ್ಲಬ್ ಸೇರುವ ಸನಿಹದಲ್ಲಿ ಇದೆ.

ಮಿಶ್ರ ಪ್ರತಿಕ್ರಿಯೆ ನಡುವೆಯೂ ನಾಲ್ಕೇ ದಿನಕ್ಕೆ ದಾಖಲೆಯ ಕಲೆಕ್ಷನ್ ಮಾಡಿದ ‘ಕೂಲಿ’ ಹಾಗೂ ‘ವಾರ್ 2’
ರಜನಿ-ಹೃತಿಕ್
ರಾಜೇಶ್ ದುಗ್ಗುಮನೆ
|

Updated on:Aug 18, 2025 | 7:22 AM

Share

ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತು ಎಂದರೆ ಸಾಮಾನ್ಯವಾಗಿ ಗಳಿಕೆ ಕಡಿಮೆ ಆಗುತ್ತವೆ. ಸಿನಿಮಾ ನೂರು ಕೋಟಿ ರೂಪಾಯಿ ಕ್ಲಬ್ ಸೇರೋದು ಕೂಡ ಕಷ್ಟ ಆಗುತ್ತದೆ. ಆದರೆ, ‘ಕೂಲಿ’ (Coolie) ಹಾಗೂ ‘ವಾರ್ 2’ ಸಿನಿಮಾಗಳು ಮಾತ್ರ ಇದಕ್ಕೆ ಭಿನ್ನ. ಎರಡೂ ಚಿತ್ರಗಳಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿವೆ. ಇದು ರಜನಿಕಾಂತ್ ಹಾಗೂ ಜೂನಿಯರ್ ಎನ್​ಟಿಆರ್ ಚಿತ್ರಗಳ ಸ್ಪೆಷಾಲಿಟಿ ಎಂದೇ ಹೇಳಬಹುದು.

‘ವಾರ್ 2’ ಹಾಗೂ ‘ಕೂಲಿ’ ಸಿನಿಮಾಗಳು ಆಗಸ್ಟ್​ 14ರಂದು ರಿಲೀಸ್ ಆದವು. ಎರಡೂ ಸಿನಿಮಾಗಳು ಆಗಸ್ಟ್ 15ರ ರಜೆಯ ಲಾಭವನ್ನು ಪಡೆಯಲು ಪ್ಲ್ಯಾನ್ ಮಾಡಿಕೊಂಡಿದ್ದವು. ಈ ಪ್ಲ್ಯಾನ್ ಸಫಲವಾಗಿದೆ. ಸಿನಿಮಾ ಅಬ್ಬರದ ಗಳಿಕೆ ಮಾಡುತ್ತಿದೆ. ಮೂರು ದಿನಕ್ಕೆ ಎರಡೂ ಚಿತ್ರಗಳ ದೇಶಿಯ ಕಲೆಕ್ಷನ್ 200 ಕೋಟಿ ರೂಪಾಯಿ ಸಮೀಪಿಸಿದೆ.

‘ಕೂಲಿ’ ಸಿನಿಮಾ ಗಳಿಕೆ

‘ಕೂಲಿ’ ಸಿನಿಮಾ ಮೊದಲ ದಿನ ಭಾರತದಲ್ಲಿ ಬರೋಬ್ಬರಿ 65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಅನುಕ್ರಮವಾಗಿ, 54.75 ಕೋಟಿ ರೂಪಾಯಿ, 39.5 ಕೋಟಿ ರೂಪಾಯಿ ಹಾಗೂ 35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 194 ಕೋಟಿ ರೂಪಾಯಿ ಆಗಿದೆ. ‘ಕೂಲಿ’ ಚಿತ್ರಕ್ಕೆ ತಮಿಳಿನ ಜೊತೆ ಹಿಂದಿ ಹಾಗೂ ತೆಲುಗಿನಲ್ಲೂ ಒಳ್ಳೆಯ ಕಲೆಕ್ಷನ್ ಆಗುತ್ತಿದೆ. ಈ ಚಿತ್ರದಲ್ಲಿ ರಜನಿಕಾಂತ್ ಹೀರೋ. ಶ್ರುತಿ ಹಾಸನ್, ಶೌಬಿನ್ ಶಾಹಿರ್, ಉಪೇಂದ್ರ ಮೊದಲಾದವರು ನಟಿಸಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನ ಚಿತ್ರಕ್ಕಿದೆ.

ಇದನ್ನೂ ಓದಿ
Image
ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ
Image
ಸೈಫ್ ಅಲಿ ಖಾನ್ ಜನ್ಮದಿನ; ನಟನ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ
Image
ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್
Image
‘ಕೂಲಿ’, ‘ವಾರ್ 2’ 2ನೇ ದಿನದ ಗಳಿಕೆ ಇಷ್ಟೊಂದಾ? ಅಬ್ಬಬ್ಬಾ ಊಹಿಸಲೂ ಅಸಾಧ್ಯ

ಇದನ್ನೂ ಓದಿ: ಮೂರೇ ದಿನಕ್ಕೆ 200 ಕೋಟಿ ಕಲೆಕ್ಷನ್ ದಾಟಿದ ‘ವಾರ್ 2’, ‘ಕೂಲಿ’ ಎಷ್ಟು?

ವಾರ್ 2 ಕಲೆಕ್ಷನ್

ಜೂನಿಯರ್ ಎನ್​​ಟಿಆರ್ ಹಾಗೂ ಹೃತಿಕ್ ರೋಷನ್ ಅಭಿನಯದ ‘ವಾರ್ 2’ ಸಿನಿಮಾ ಆಗಸ್ಟ್ 14ರಂದು ಬಿಡುಡಗೆ ಆಗಿದೆ. ಈ ಚಿತ್ರಕ್ಕೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದಾಗ್ಯೂ ಆ್ಯಕ್ಷನ್ ಪ್ರಿಯರಿಗೆ ಸಿನಿಮಾ ಇಷ್ಟ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 173.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಚಿತ್ರದ ಹೆಚ್ಚುಗಾರಿಕೆ. ಸಿನಿಮಾಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:00 am, Mon, 18 August 25