ದುಬೈನಲ್ಲಿ ಅದ್ದೂರಿಯಾಗಿ ರಿಲೀಸ್​ ಆಯ್ತು ‘ಕುದ್ರು’ ಹಾಡು; ಈ ಚಿತ್ರದಲ್ಲಿದೆ ಕೋಲ, ಕಂಬಳ, ಯಕ್ಷಗಾನ

‘ಕುದ್ರು’ ಸಿನಿಮಾದಲ್ಲಿ ದಕ್ಷಿಣ ಕನ್ನಡದ ಸುಂದರ ಲೊಕೇಷನ್​ಗಳನ್ನು ತೋರಿಸಲಾಗುತ್ತಿದೆ. ಅಲ್ಲದೇ ಭೂತಕೋಲ, ಯಕ್ಷಗಾನ, ಕಂಬಳ ಮುಂತಾದ ಕಲೆಗಳನ್ನು ನಿರ್ದೇಶಕ ಭಾಸ್ಕರ್ ನಾಯ್ಕ್ ಅವರು ಪರಿಚಯ ಮಾಡಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಹಾಡುಗಳನ್ನು ದುಬೈಯಲ್ಲಿ ಬಹಳ ಗ್ರ್ಯಾಂಡ್​ ಆಗಿ ಬಿಡುಗಡೆ ಮಾಡಲಾಯಿತು. ಹರ್ಷಿತ್ ಶೆಟ್ಟಿ, ಡೈನಾ ಡಿಸೋಜ, ಪ್ರಿಯಾ ಹೆಗ್ಡೆ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ದುಬೈನಲ್ಲಿ ಅದ್ದೂರಿಯಾಗಿ ರಿಲೀಸ್​ ಆಯ್ತು ‘ಕುದ್ರು’ ಹಾಡು; ಈ ಚಿತ್ರದಲ್ಲಿದೆ ಕೋಲ, ಕಂಬಳ, ಯಕ್ಷಗಾನ
‘ಆಟಿದೊಂಜಿ ದಿನ’ ಸಮಾರಂಭದಲ್ಲಿ ‘ಕುದ್ರು’ ಸಾಂಗ್ಸ್​ ಬಿಡುಗಡೆ

Updated on: Aug 28, 2023 | 10:30 PM

ಕರ್ನಾಟಕದ ಸಿನಿಮಾಗಳು ವಿಶ್ವಾದ್ಯಂತ ಸದ್ದು ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ವಿಶೇಷವಾದ ರೀತಿಯಲ್ಲಿ ಪ್ರಮೋಷನ್​ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಚಿತ್ರತಂಡಗಳು ಬೇರೆ ಬೇರೆ ಪ್ರಯತ್ನ ನಡೆಸಿವೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಎಂದರೆ ‘ಕುದ್ರು’ ಸಿನಿಮಾ (Kudru Movie). ಕೆಲವೇ ದಿನಗಳ ಹಿಂದೆ ದುಬೈಯಲ್ಲಿ ಅದ್ದೂರಿಯಾಗಿ ಆಟಿದೊಂಜಿ ದಿನ (Aatidonji Dina) ಸಮಾರಂಭ ನಡೆಯಿತು. ಈ ವೇಳೆ ‘ಕುದ್ರು’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಈ ಸಿನಿಮಾದ ನಿರ್ದೇಶಕ, ಕಥೆಗಾರ ಮತ್ತು ನಿರ್ಮಾಪಕರಾದ ಭಾಸ್ಕರ್ ನಾಯ್ಕ್, ಚಿತ್ರದ ಹೀರೋ ಹರ್ಷಿತ್ ಶೆಟ್ಟಿ, ನಾಯಕಿರಾದ ಡೈನಾ ಡಿಸೋಜ, ಪ್ರಿಯಾ ಹೆಗ್ಡೆ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸಮಾರಂಭಕ್ಕೆ ಬಂದ ಅತಿಥಿಗಳನ್ನು ಶ್ರೀಮತಿ ಸಂಧ್ಯಾ ಪ್ರಸಾದ್ ಅವರು ಪುಷ್ಪಗುಚ್ಚ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ದಕ್ಷಿಣ ಕನ್ನಡದ ಸಂಸ್ಕೃತಿ ಬಹಳ ವಿಶಿಷ್ಠವಾದದ್ದು. ಅದನ್ನು ಎತ್ತಿ ಹಿಡಿಯುವ ಆಚರಣೆಯೇ ಆಟಿದೊಂಜಿ ದಿನ. ಯುಎಇನಲ್ಲಿ ದಕ್ಷಿಣ ಕನ್ನಡದ ಸಂಸ್ಕೃತಿಯನ್ನು ಪರಿಚಯಿಸುವ ಈ ಹಬ್ಬದಾಚರಣೆ ಎಲ್ಲರ ಮನಸ್ಸು ಗೆದ್ದಿದೆ. ಇದೇ ಸಮಾರಂಭದಲ್ಲಿ ‘ಕುದ್ರು’ ಚಿತ್ರದ ಶೀರ್ಷಿಕೆ ಗೀತೆ ಮತ್ತು ಫೇರ್ವೆಲ್ ಪಾರ್ಟಿ ಹಾಡನ್ನು ರಿಲೀಸ್​ ಮಾಡಿರುವುದು ವಿಶೇಷ. ನಮ್ರಿತಾ ಮಲ್ಲ ಅವರು ಈ ಹಾಡುಗಳಿಗೆ ಡ್ಯಾನ್ಸ್​ ಮಾಡಿದರು.

ಇದನ್ನೂ ಓದಿ: ದೀವಟಿಗೆಯ ಬೆಳಕಿನಲ್ಲಿ ಭೂತಕೋಲ ಆಚರಣೆ, ಕುಣಿದು ಕುಪ್ಪಳಿಸಿ ಭಕ್ತರನ್ನು ಹರಸಿದ ದೈವಗಳು

ವಿಶೇಷ ಏನೆಂದರೆ, ‘ಕುದ್ರು’ ಸಿನಿಮಾದಲ್ಲಿ ದಕ್ಷಿಣ ಕನ್ನಡದ ಸುಂದರ ಲೊಕೇಷನ್​ಗಳನ್ನು ತೋರಿಸಲಾಗುತ್ತಿದೆ. ಅಲ್ಲದೇ ಭೂತಕೋಲ, ಯಕ್ಷಗಾನ, ಕಂಬಳ ಮುಂತಾದ ಕಲೆಗಳನ್ನು ನಿರ್ದೇಶಕ ಭಾಸ್ಕರ್ ನಾಯ್ಕ್ ಅವರು ಪರಿಚಯ ಮಾಡಿಸಿದ್ದಾರೆ. ಪ್ರವೀಣ್ ಶೆಟ್ಟಿ, ಡಾ. ಡೇವಿಡ್ ಫ್ರಾಂಕ್ ಫರ್ನಾಂಡಿಸ್, ಜೋಸೆಫ್ ಮತಾಯಸ್ ಅವರು ‘ಕುದ್ರು’ ಸಿನಿಮಾದ ಗೀತೆಗಳನ್ನು ರಿಲೀಸ್​ ಮಾಡಿದರು. ಸುಹೈಲ್ ಕುದ್ರೋಳಿ, ಗುರೂಜಿ ಹರೀಶ್, ಶೋಧನ್ ಪ್ರಸಾದ್ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದನ್ನೂ ಓದಿ: ‘ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರುತ್ತೆ ಅಂತ ರಿಷಬ್ ಶೆಟ್ಟಿ ಹೇಳಿದ್ದು ನಿಜವಲ್ಲ’: ನಟ ಚೇತನ್​ ತಕರಾರು

‘ಕುದ್ರು’ ಸಿನಿಮಾ ಬಗ್ಗೆ ನಿರ್ದೇಶಕ ಭಾಸ್ಕರ್ ನಾಯ್ಕ್ ಮಾಹಿತಿ ನೀಡಿದ್ದಾರೆ. ‘ಇದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಒಂದು ಸಿನಿಮಾ. ಆಯಿಲ್ ರಿಗ್​ನಲ್ಲಿ ಚಿತ್ರೀಕರಣ ಮಾಡಿದ ಭಾರತದ ಮೊದಲ ಸಿನಿಮಾ ನಮ್ಮದು’ ಎಂದು ಹೇಳುವ ಮೂಲಕ UAE ಪ್ರೇಕ್ಷಕರಲ್ಲೂ ಸಿನಿಮಾ ಬಗ್ಗೆ ಅವರು ಕುತೂಹಲ ಮೂಡಿಸಿದ್ದಾರೆ. ಸಿನಿಮಾದಲ್ಲಿ ನಟಿಸಿರುವ ಪ್ರಿಯ ಹೆಗ್ಡೆ, ಹರ್ಷಿತ್ ಶೆಟ್ಟಿ ಮತ್ತು ಡೈನಾ ಡಿಸೋಜಾ ಅವರು ತಮ್ಮ ಪಾತ್ರದ ಮಾಹಿತಿ ನೀಡಿದರು. ಅಲ್ಲದೇ ಸಿನಿಮಾ ಕರಿತು ಅನುಭವ ತಿಳಿಸಿದರು. ರೊನಾಲ್ಡ್ ಒಲಿವೆರಾ ಅವರು ಈ ಸಮಾರಂಭದ ನಿರ್ವಹಣೆ ಮಾಡಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us