ದೀವಟಿಗೆಯ ಬೆಳಕಿನಲ್ಲಿ ಭೂತಕೋಲ ಆಚರಣೆ, ಕುಣಿದು ಕುಪ್ಪಳಿಸಿ ಭಕ್ತರನ್ನು ಹರಸಿದ ದೈವಗಳು

Bhoota Kola Aradhane | ಕರುನಾಡಿನ ಕರಾವಳಿ ಸಂಪ್ರದಾಯಕ್ಕೆ ಹೆಸರುವಾಸಿ. ಇಲ್ಲಿ ದೈವಗಳನ್ನ ನಂಬುತ್ತಾ, ಅವುಗಳಿಗೆ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿದೆ. ಹಾಗೇ ದೈವಗಳನ್ನು ಭೂತಕೋಲದ ಮೂಲಕ ಸಂತುಷ್ಟಗೊಳಿಸಲು ಕರಾವಳಿಯ ಸಂಪ್ರದಾಯ. ಹಾಗೇ ಅಲ್ಲಿ ನಡೆದ ಸಾಂಪ್ರದಾಯಿಕ ದೈವ ಕೋಲ ಎಲ್ಲರ ಗಮನ ಸೆಳೆಯಿತು.

  • TV9 Web Team
  • Published On - 17:41 PM, 22 Feb 2021
ದೀವಟಿಗೆಯ ಬೆಳಕಿನಲ್ಲಿ ಭೂತಕೋಲ ಆಚರಣೆ, ಕುಣಿದು ಕುಪ್ಪಳಿಸಿ ಭಕ್ತರನ್ನು ಹರಸಿದ ದೈವಗಳು
ದೀವಟಿಗೆಯ ಬೆಳಕಿನಲ್ಲಿ ಭೂತಕೋಲ ಆಚರಣೆ

ಉಡುಪಿ: ಭಕ್ತಿ ಭಾವ ಮೂಡಿಸೋ ವೇಷ.. ಲಯಕ್ಕೆ ತಕ್ಕಂತೆ ವಾದ್ಯ ಘೋಷ.. ಚಂಡೆ ಮದ್ದಳೆಯ ನಾದ… ತಾಳಕ್ಕೆ ತಕ್ಕಂತೆ ಹೆಜ್ಜೆ. ದೈವದ ಸಿರಿ ಸಿಂಗಾರ. ನಂಬಿ ಬಂದ ಭಕ್ತರಿಗೆ ಅಭಯ.. ಅಲಂಕಾರಗೊಂಡ ನೇಮದ ಚಪ್ಪರ. ಭಯಭಕ್ತಿಯಲ್ಲಿ ಕುಳಿತ ಜನ.. ಧಗಧಗನೇ ಉರಿಯುತ್ತಿರುವ ದೊಂದಿ ಬೆಳಕು..

ಕುಟುಂಬದ ದೈವ ಮತ್ತು ಊರ ದೈವಗಳನ್ನು ಜೀವನದ ಒಂದು ಭಾಗವೇ ಆಗಿ ಆರಾಧಿಸೋದು ಕರಾವಳಿಗರ ಪದ್ಧತಿ. ಗ್ರಾಮದ ಏಳಿಗೆಗಾಗಿ ಭೂತಕೋಲ ನಡೆಸುವ ಸಂಪ್ರದಾಯ ಶತಮಾನಗಳಿಂದ ಇಲ್ಲಿ ನಡೆದುಬಂದಿದೆ. ಇಡೀರಾತ್ರಿ ನಡೆಯುವ ಈ ಭೂತಕೋಲ, ಹಲವು ನಿಗೂಢತೆಗಳ ಒಂದು ವಿಶಿಷ್ಟ ಆಚರಣೆ. ಹಾಗೇ ಉಡುಪಿಯ ಕೊಡವೂರು ಕಂಗೊಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ವಿಶಿಷ್ಟವಾದ ದೈವಾರಾಧನೆ ನಡೆಯಿತು. ಕ್ಷೇತ್ರದಲ್ಲಿ ನಡೆದ ಜೀರ್ಣೋದ್ಧಾರದ ಸಲುವಾಗಿ ನಡೆದ ಈ ಭೂತಕೋಲದಲ್ಲಿ ಯಾವುದೇ ಆಧುನಿಕ ಬೆಳಕು-ಅಲಂಕಾರಗಳ ವ್ಯವಸ್ಥೆ ಇರಲಿಲ್ಲ. ಬದಲಿಗೆ ಪೂರ್ವಿಕರು ನಡೆಸಿದಂತೆ ಕೇವಲ ದೀವಟಿಗೆಯ ಬೆಳಕಿನೊಳಗೆ ದೈವಗಳು ಬಂದು ಕುಣಿದು, ಖುಷಿಪಟ್ಟು ಭಕ್ತರನ್ನು ಹರಸಿದವು.

Bhoota kola

ನಂಬಿ ಬಂದ ಭಕ್ತರಿಗೆ ಅಭಯ ನೀಡಿದ ದೈವ

ದೈವಸ್ಥಾನದ ಆವರಣದ ಸುತ್ತಲೂ ನೂರಕ್ಕೂ ಅಧಿಕ ದೀವಟಿಗೆಯನ್ನು ಇರಿಸಲಾಗಿತ್ತು. ಅಡಿಕೆ, ತೆಂಗು, ಸಿರಿ ಹೀಗೆ ಅಲಂಕಾರಕ್ಕೂ ಪ್ರಾಕೃತಿಕ ವಸ್ತುಗಳನ್ನು ಮಾತ್ರ ಬಳಸಲಾಗಿತ್ತು. ಶತಮಾನದ ಹಿಂದೆ ಪಂಜಿನ ಬೆಳಕಲ್ಲೇ ದೈವಕೋಲ ನಡೆಯುತ್ತಿತ್ತು. ಆದರೆ ಈ ತಲೆಮಾರಿನವರು ಈ ಮಾದರಿಯ ದೈವ ನರ್ತನವನ್ನು ನೋಡಿರಲು ಸಾಧ್ಯವಿಲ್ಲ. ಹಾಗಾಗಿ ಮೂಲ ಸ್ವರೂಪದಲ್ಲೇ ಮತ್ತೆ ದೈವಾರಾಧನೆ ನಡೆದದ್ದು ವಿಶೇಷ. ಒಟ್ನಲ್ಲಿ ಮಂದ ಬೆಳಕಿನ ‘ದೊಂದಿಕೋಲ’ದಿಂದ ಜನರ ಜೊತೆಗೆ ದೈವಗಳೂ ಖುಷಿ ಪಟ್ಟದ್ದು ಮಾತ್ರ ಸುಳ್ಳಲ್ಲ.

Bhoota kola

ನಂಬಿ ಬಂದ ಭಕ್ತರಿಗೆ ಅಭಯ ನೀಡಿದ ದೈವ

Bhoota kola

ದೀವಟಿಗೆಯ ಬೆಳಕಿನಲ್ಲಿ ಭೂತಕೋಲ ಆಚರಣೆ

Bhoota kola

ಭೂತ ಕುಣಿತ

Bhoota kola

ಭೂತ ಕುಣಿತ

ಇದನ್ನೂ ಓದಿ: ತುಳುನಾಡಿನ ಆಚರಣೆಗೆ ಕೊರೊನಾ ಕಂಟಕ, ಸೇವೆ ತಪ್ಪಿಸಿದ್ರೆ ತೊಂದರೆಯಾಗುತ್ತಾ?