AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ವೋಟ್​ಗಾಗಿ ತಮಿಳು ನಿರ್ದೇಶಕನ ಆಯ್ಕೆ ಮಾಡಿಕೊಂಡ ದಳಪತಿ ವಿಜಯ್; ಶಾಕಿಂಗ್ ವಿಚಾರ ರಿವೀಲ್

ದಳಪತಿ ವಿಜಯ್ ಅವರ ಕೊನೆಯ ಚಿತ್ರ ಎಂದು ಹೇಳಲಾಗುತ್ತಿರುವ 'ಜನ ನಾಯಗನ್' ಸಿನಿಮಾ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿದೆ. ತೆಲುಗು ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು ಚಿತ್ರದ ಆಯ್ಕೆ ಪ್ರಕ್ರಿಯೆಯಲ್ಲಿ ಉಂಟಾದ ವಿವಾದವನ್ನು ಬಹಿರಂಗಪಡಿಸಿದ್ದಾರೆ. ವಿಜಯ್ ಅವರ ಸುತ್ತಮುತ್ತಲಿನವರು ತಮಿಳು ನಿರ್ದೇಶಕರನ್ನು ಆಯ್ಕೆ ಮಾಡಲು ಒತ್ತಾಯಿಸಿದ್ದರು ಎಂದು ಅವರು ಹೇಳಿದ್ದಾರೆ.

 ವೋಟ್​ಗಾಗಿ ತಮಿಳು ನಿರ್ದೇಶಕನ ಆಯ್ಕೆ ಮಾಡಿಕೊಂಡ ದಳಪತಿ ವಿಜಯ್; ಶಾಕಿಂಗ್ ವಿಚಾರ ರಿವೀಲ್
ವಿಜಯ್
ರಾಜೇಶ್ ದುಗ್ಗುಮನೆ
|

Updated on: May 07, 2025 | 2:35 PM

Share

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಸೂಚನೆ ಇದೆ. ಇದಕ್ಕೆ ಕಾರಣ ಇದು ವಿಜಯ್ ಅವರ ಕೊನೆಯ ಚಿತ್ರವಾಗಲಿದೆ ಎಂಬುದು. ಆ ಬಳಿಕ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ. ಈಗ ಅವರು ಪ್ರತಿ ವಿಚಾರವನ್ನು ವೋಟ್​ ರೀತಿಯಲ್ಲೇ ನೋಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಅವರು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರವೇ ಕಾರಣ.

‘ಜಾಟ್’ ಸಿನಿಮಾ ಮಾಡಿ ಫೇಮಸ್ ಆದ ತೆಲುಗಿನ ಗೋಪಿಚಂದ್ ಮಲಿನೇನಿ ಅವರು ಇತ್ತೀಚೆಗೆ ಸಂದರ್ಶನ ಒಂದನ್ನು ನೀಡಿದ್ದಾರೆ. ಈ ವೇಳೆ ಅವರು ದಳಪತಿ ವಿಜಯ್ ಬಗ್ಗೆ ಹಾಗೂ ಅವರ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಕೊನೆಯ ಸಿನಿಮಾಗೆ ಅವರಿಗೆ ತಮಿಳು ನಿರ್ದೇಶಕರನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬ ಒತ್ತಡ ಇತ್ತು ಎಂದಿದ್ದಾರೆ.

ಗೋಪಿಚಂದ್ ಅವರು ವಿಜಯ್​ನ ಭೇಟಿ ಮಾಡಿ ಸ್ಕ್ರಿಪ್ಟ್ ವಿವರಣೆ ಕೊಟ್ಟರು. ವಿಜಯ್​ಗೆ ಕಥೆ ಇಷ್ಟ ಕೂಡ ಆಗಿತ್ತು. ಅದೇ ರೀತಿ ಸಿನಿಮಾ ಘೋಷಣೆ ಮಾಡಲು ಕೂಡ ರೆಡಿ ಆಗಿದ್ದರು.  ಆದರೆ, ವಿಜಯ್ ಸುತ್ತ ಇರುವವರು ಇದಕ್ಕೆ ಅವಕಾಶ ಕೊಡಲಿಲ್ಲ ಎಂಬುದು ಗೋಪಿಚಂದ್ ಆರೋಪ.

ಇದನ್ನೂ ಓದಿ
Image
ಆ ಒಂದು ಘಟನೆಯಿಂದ ಅಂಬಿಗೆ ಅಣ್ಣಾವ್ರ ಮೇಲಿನ ಗೌರವ ಹೆಚ್ಚಿತ್ತು
Image
‘ಎಲ್ಲರಿಗೂ ಒಂದೇ ರೀತಿಯ ಸಂಭಾವನೆ’; ಸಮಂತಾ ಹೊಸ ನಿಯಮ
Image
ಪಾಕ್ ಉಗ್ರ ನೆಲೆಗಳ ಮೇಲೆ ಭಾರತದ ಸರ್ಜಿಕಲ್ ಸ್ಟ್ರೈಕ್; ಉಘೇ ಎಂದ ಬಾಲಿವುಡ್
Image
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ

‘ವಿಜಯ್ ಸಿನಿಮಾ ಅನೌನ್ಸ್ ಮಾಡಲು ರೆಡಿ ಆಗಿದ್ದರು. ಇದು ಅವರ ಕೊನೆಯ ಸಿನಿಮಾ. ಆ ಬಳಿಕ ರಾಜಕೀಯದಲ್ಲಿ ಬ್ಯುಸಿ ಆಗಲಿದ್ದಾರೆ. ಹೀಗಾಗಿ, ಅವರ ಸುತ್ತಲು ಇರುವವರು ತಮಿಳು ಸಿನಿಮಾನ ಆಯ್ಕೆ ಮಾಡಿಕೊಳ್ಳುವಂತೆ ಮನ ಒಲಿಸಿದ್ದರು’ ಎಂದಿದ್ದಾರೆ ಗೋಪಿಚಂದ್ ಅವರು.

ಎಚ್​. ವಿನೋದ್ ಅವರು ವಿಜಯ್ ಅವರ ಕೊನೆಯ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ. ರಾಜಕೀಯದ ಕಥೆ ಹಿಡಿದು ವಿನೋದ್ ಹೋಗಿದ್ದರು. ಇದು ಅವರಿಗೆ ಇಷ್ಟ ಆಗಿದೆ. ಅವರು ಸುತ್ತಲು ಇರುವವರು ಕೂಡ ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ ಮಾಡಲು ಸೂಚಿಸಿದ್ದರು. ಈ ಮೊದಲು ಕಾರ್ತಿಕ್ ಸುಬ್ಬರಾಜ್ ಕೂಡ ವಿಜಯ್​ಗೆ ಕಥೆ ಹೇಳಿದ್ದಾಗಿ ಹೇಳಿಕೊಂಡಿದ್ದರು. ಆದರೆ, ವಿಜಯ್ ಅವರು ಈ ಕಥೆಯನ್ನು ಆಯ್ಕೆ ಮಾಡಲಿಲ್ಲ.

ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾದಲ್ಲಿ ವಿಜಯ್ ರಾಜಕೀಯ ಪ್ರಚಾರದ ಸರಕು

‘ಜನ ನಾಯಗನ್’ ಸಿನಿಮಾ ವಿಚಾರಕ್ಕೆ ಬರೋದಾದರೆ, ಈ ಚಿತ್ರದ ಶೂಟ್ ಕೊಡೈಕೆನಲ್​​ನಲ್ಲಿ ನಡೆಯುತ್ತಿದೆ. ವಿಜಯ್ ಅವರು ಅಲ್ಲಿ ಇದ್ದಾರೆ. 2026ರ ಜನವರಿ 9ರಂದು ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?