AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ ನಾಯಗನ್’ ಸಿನಿಮಾದಲ್ಲಿ ವಿಜಯ್ ರಾಜಕೀಯ ಪ್ರಚಾರದ ಸರಕು

Jana Nayagan movie: ದಳಪತಿ ವಿಜಯ್ ರಾಜಕೀಯ ಪಕ್ಷ ಸ್ಥಾಪಿಸಿ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದಾರೆ. ವಿಜಯ್ ಅವರು ಪ್ರಸ್ತುತ ತಮ್ಮ ಕೊನೆಯ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ‘ಜನ ನಾಯಗನ್’. ಇದು ಕೇವಲ ಸಿನಿಮಾ ಮಾತ್ರವೇ ಅಲ್ಲದೆ, ವಿಜಯ್​ರ ರಾಜಕೀಯ ಪ್ರಚಾರದ ಸರಕು ಎನ್ನಲಾಗುತ್ತಿದೆ. ಉದಾಹರಣೆ ಇಲ್ಲಿದೆ...

‘ಜನ ನಾಯಗನ್’ ಸಿನಿಮಾದಲ್ಲಿ ವಿಜಯ್ ರಾಜಕೀಯ ಪ್ರಚಾರದ ಸರಕು
Jana Nayagan
ಮಂಜುನಾಥ ಸಿ.
|

Updated on: May 06, 2025 | 3:41 PM

Share

ರಜನೀಕಾಂತ್ (Rajinikanth) ಬಳಿಕ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಮಿಳು ನಟ ವಿಜಯ್. ಅಭಿಮಾನಿಗಳಿಂದ ಪ್ರೀತಿಯಿಂದ ದಳಪತಿ ವಿಜಯ್ ಎಂದೇ ಕರೆಸಿಕೊಳ್ಳುವ ವಿಜಯ್, ಸಿನಿಮಾಗಳಿಗೆ ವಿದಾಯ ಹೇಳಿದ್ದಾರೆ. ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡಿರುವ ವಿಜಯ್, ತಾವು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಇದೀಗ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ನಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ‘ಜನ ನಾಯಗನ್’ ಕೇವಲ ಸಿನಿಮಾ ಮಾತ್ರವಲ್ಲ, ಈ ಸಿನಿಮಾ ಒಂದು ರೀತಿ ವಿಜಯ್​ರ ರಾಜಕೀಯ ಪಕ್ಷದ ಪರ ಪ್ರಚಾರದಂತೆಯೇ ಇರಲಿದೆಯಂತೆ.

ಸಿನಿಮಾದ ಹೆಸರು, ಸಿನಿಮಾದಲ್ಲಿ ವಿಜಯ್ ಹೆಸರು, ಸಿನಿಮಾದ ವಿಲನ್​ಗಳು, ಕತೆ ಎಲ್ಲವೂ ವಿಜಯ್ ರಾಜಕೀಯ ಕರಿಯರ್​ಗೆ ಸಹಾಯವಾಗಲೆಂದೇ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ಒಂದು ಉದಾಹರಣೆ ಇಲ್ಲಿದೆ. ಸಿನಿಮಾದಲ್ಲಿ ವಿಜಯ್ ಪಾತ್ರದ ಹೆಸರು ದಳಪತಿ ವೆಟ್ರಿ ಕೊಂಡನ್. ಅದನ್ನು ಶಾರ್ಟ್ ಮಾಡಿ ಟಿವಿಕೆ ಎಂದು ಎಲ್ಲರೂ ವಿಜಯ್ ಅನ್ನು ಕರೆಯುತ್ತಾರಂತೆ. ಟಿವಿಕೆ ಎಂದು ವಿಜಯ್ ಹಚ್ಚೆ ಸಹ ಹಾಕಿಸಿಕೊಂಡಿರಿರುತ್ತಾರಂತೆ ಸಿನಿಮಾನಲ್ಲಿ. ಅಂದಹಾಗೆ ವಿಜಯ್ ಸ್ಥಾಪಿಸಿರುವ ರಾಜಕೀಯ ಪಕ್ಷದ ಹೆಸರು ತಮಿಳಗ ವೆಟ್ರಿ ಕಳಗಂ. ಪಕ್ಷವನ್ನು ಟಿವಿಕೆ ಎಂದೇ ಕರೆಯಲಾಗುತ್ತದೆ.

ಇದು ಮಾತ್ರವೇ ಅಲ್ಲದೆ ಟಿವಿಕೆ ಪಕ್ಷದ ಬಾವುಟದ ಬಳಕೆ ಬಾವುಟದ ಬಣ್ಣದ ಬಳಕೆಗಳನ್ನು ಸಾಕಷ್ಟು ಕಡೆ ಸಿನಿಮಾನಲ್ಲಿ ಮಾಡಲಾಗುತ್ತಿದೆಯಂತೆ. ಸಿನಿಮಾದ ಕತೆಯಲ್ಲಿ ವಿಜಯ್, ಕೆಟ್ಟ ರಾಜಕಾರಣಿಗಳ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಪ್ರಸ್ತುತ ರಾಜಕಾರಣಿಗಳನ್ನು, ಸರ್ಕಾರದ ಪಾಲಿಸಿಗಳನ್ನು ಪ್ರಶ್ನೆ ಮಾಡುವ ಸಾಕಷ್ಟು ಡೈಲಾಗ್​ಗಳು ಈ ಸಿನಿಮಾನಲ್ಲಿ ಇರಲಿವೆ.

ಇದನ್ನೂ ಓದಿ:ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ‘ಜನ ನಾಯಗನ್’ ಶೀರ್ಷಿಕೆ; ರಾಜಕೀಯದ ಕಥೆ  

ಈ ಹಿಂದೆ ವಿಜಯ್ ನಟನೆಯ ‘ಮರ್ಸೆಲ್’ ಸಿನಿಮಾನಲ್ಲಿ ಕೇಂದ್ರ ಸರ್ಕಾರದ ಕೆಲ ನೀತಿಗಳನ್ನು ವಿಜಯ್ ಟೀಕೆ ಮಾಡಿದ್ದರು. ಇದರ ಬಗ್ಗೆ ಭಾರಿ ಆಕ್ರೋಶವನ್ನು ಬಿಜೆಪಿ ಹೊರಹಾಕಿತ್ತು. ಈಗ ‘ಜನ ನಾಯಗನ್’ ಸಿನಿಮಾನಲ್ಲಿ ತುಸು ಹೆಚ್ಚಾಗಿಯೇ ಅವರು ಬಿಜೆಪಿ ಮತ್ತು ತಮಿಳುನಾಡಿನ ಕೆಲ ರಾಜಕೀಯ ಪಕ್ಷಗಳನ್ನು ಟೀಕೆ ಮಾಡಲಿದ್ದಾರೆ.

‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣ ಕೊಡೆಕ್ಕೆನೈಲ್ ನಲ್ಲಿ ನಡೆಯುತ್ತಿದೆ. ಸಿನಿಮಾ ಅನ್ನು ಕೆವಿಎನ್ ಪ್ರೊಡಕ್ಷನ್​ ನಿರ್ಮಾಣ ಮಾಡುತ್ತಿದೆ. ಇದು ವಿಜಯ್ ಅವರ ಕೊನೆಯ ಸಿನಿಮಾ ಅಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ