ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಸರ್ಜಾ ಅವರ ಪುತ್ರನಿಗೆ ‘ರಾಯನ್ ರಾಜ್ ಸರ್ಜಾ’ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಾಮಕರಣ ಸಮಾರಂಭ ನಡೆದಿದ್ದು, ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬ ಹಾಗೂ ಆಪ್ತರು ಭಾಗಿಯಾಗಿದ್ದರು. 10 ತಿಂಗಳ ಚಿರು- ಮೇಘನಾ ಪುತ್ರನನ್ನು ಇದುವರೆಗೆ ಜೂನಿಯರ್ ಚಿರು ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು. ನಾಮಕರಣದ ಕುರಿತು ಮೇಘನಾ ಇತ್ತೀಚೆಗಷ್ಟೇ ಘೋಷಿಸಿದ್ದರು.
‘ರಾಯನ್ ರಾಜ್ ಸರ್ಜಾ’ ಹೆಸರನ್ನು ವಿಡಿಯೊ ಮುಖಾಂತರ ಘೋಷಿಸಿದ ಮೇಘನಾ ರಾಜ್:
ಇಷ್ಟು ದಿನ ಜ್ಯೂ. ಚಿರುಗೆ ಹಲವು ಹೆಸರುಗಳಿಂದ ಕರೆಯಲಾಗುತ್ತಿತ್ತು. ಮೇಘನಾ ತಂದೆ ಸುಂದರ್ ರಾಜ್ ಅವರು ಚಿಂಟು ಎಂದು ಕರೆಯುತ್ತಿದ್ದರು. ಅಷ್ಟೇ ಅಲ್ಲದೇ ಚಿರು ಬಚ್ಚ, ಚಿರು ಬೇಬಿ, ಶಿಷ್ಯ, ಮಿನಿಮಮ್, ಬರ್ಫಿ, ಕುಟ್ಟಿ ಪಾಪ, ಮಂಚೆ, ಮರಿ ಸಿಂಗ, ಲಿಟ್ಲ್ ಚಿರು, ಸಿಂಬಾ, ದಿಷ್ಟೋ ಎಂಬಿತ್ಯಾದಿ ಹೆಸರುಗಳ ಮೂಲಕ ಆಪ್ತರು ಈ ಮಗುವನ್ನು ಮುದ್ದಾಗಿ ಕರೆಯುತ್ತಿದ್ದರು. ಈಗ ಚಿರು-ಮೇಘನಾ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.
ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಮೇಘನಾ ಹಂಚಿಕೊಂಡಿದ್ದ ಚಿತ್ರ:
ಕಳೆದ ವರ್ಷ ಜೂನ್ 7ರಂದು ಚಿರು ನಿಧನರಾದ ಬಳಿಕ ದುಃಖದಲ್ಲಿದ್ದ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದಲ್ಲಿ ಜ್ಯೂ. ಚಿರು ಆಗಮನದಿಂದ ಮತ್ತೆ ನಗು ಅರಳಿತ್ತು. ಸೋಶಿಯಲ್ ಮೀಡಿಯಾದಲ್ಲಿ ಮಗನ ಫೋಟೋ ಮತ್ತು ವಿಡಿಯೋಗಳನ್ನು ಮೇಘನಾ ರಾಜ್ ಆಗಾಗ ಹಂಚಿಕೊಳ್ಳುತ್ತ ಇರುತ್ತಾರೆ.
ಇದನ್ನೂ ಓದಿ:
ಮೇಘನಾ ರಾಜ್-ಚಿರಂಜೀವಿ ಸರ್ಜಾ ಪುತ್ರನ ನಾಮಕರಣ; ಹೆಸರೇನು ಎಂದು ಕೇಳಿದವರಿಗೆ ಇಲ್ಲಿದೆ ಅಪ್ಡೇಟ್
(Late actor Chiranjeevi Sarja and actress Meghana Raj son named as Raayan Raj Sarja)
Published On - 11:12 am, Fri, 3 September 21