Liger Movie: ಪುನೀತ್​ ನಟನೆಯ ‘ಮೌರ್ಯ’ ಚಿತ್ರಕ್ಕೂ ‘ಲೈಗರ್​’ ಸಿನಿಮಾ ಕಥೆಗೂ ಇದೆಯಾ ನಂಟು?

| Updated By: ಮದನ್​ ಕುಮಾರ್​

Updated on: Aug 16, 2022 | 12:04 PM

Liger | Vijay Devarakonda: ‘ಲೈಗರ್​’ ಚಿತ್ರದಲ್ಲಿ ವಿಜಯ್​ ದೇವರಕೊಂಡ ಬಾಕ್ಸರ್​ ಆಗಿ ನಟಿಸಿದ್ದಾರೆ. ವಿಶ್ವ ವಿಖ್ಯಾತ ಬಾಕ್ಸರ್​ ಮೈಕ್​ ಟೈಸನ್​ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

Liger Movie: ಪುನೀತ್​ ನಟನೆಯ ‘ಮೌರ್ಯ’ ಚಿತ್ರಕ್ಕೂ ‘ಲೈಗರ್​’ ಸಿನಿಮಾ ಕಥೆಗೂ ಇದೆಯಾ ನಂಟು?
ಪುನೀತ್​ ರಾಜ್​ಕುಮಾರ್​, ವಿಜಯ್​ ದೇವರಕೊಂಡ
Follow us on

ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​ ಅವರು ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಆ ಮೂಲಕ ಅವರು ದೇಶಾದ್ಯಂತ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅನೇಕ ಸ್ಟಾರ್​ ಕಲಾವಿದರ ಜತೆ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಈಗ ಅವರು ನಿರ್ದೇಶನ ಮಾಡಿರುವ ‘ಲೈಗರ್’ (Liger Movie) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಕಥೆಯ ಬಗ್ಗೆ ಒಂದಷ್ಟು ಅನುಮಾನ ಸೃಷ್ಟಿ ಆಗಿದೆ. 2003ರಲ್ಲಿ ಪುರಿ ಜಗನ್ನಾಥ್​ ಅವರು ‘ಅಮ್ಮ ನಾನಾ ಓ ತಮಿಳ ಅಮ್ಮಾಯಿ’ ಸಿನಿಮಾ ನಿರ್ದೇಶಿಸಿದ್ದರು. ಅದೇ ಸಿನಿಮಾವನ್ನು ಕನ್ನಡದಲ್ಲಿ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರು ‘ಮೌರ್ಯ’ ಶೀರ್ಷಿಕೆಯಲ್ಲಿ ರಿಮೇಕ್​ ಮಾಡಿದ್ದರು. ಆ ಚಿತ್ರದ ಮುಂದುವರಿದ ಭಾಗವಾಗಿ ‘ಲೈಗರ್’​ ಚಿತ್ರ ಮೂಡಿಬಂದಿದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅದಕ್ಕೆ ಈಗ ವಿಜಯ್​ ದೇವರಕೊಂಡ (Vijay Devarakonda) ಉತ್ತರ ನೀಡಿದ್ದಾರೆ.

‘ಅಮ್ಮ ನಾನಾ ಓ ತಮಿಳ ಅಮ್ಮಾಯಿ’ ಚಿತ್ರ ಕನ್ನಡಕ್ಕೆ ರಿಮೇಕ್​ ಆದಾಗ ಪುನೀತ್​ ರಾಜ್​ ಅಭಿಮಾನಿಗಳು ನೋಡಿ ಖುಷಿಪಟ್ಟಿದ್ದರು. ತಾಯಿ-ಮಗನ ಸೆಂಟಿಮೆಂಟ್​ ಹಾಗೂ ಬಾಕ್ಸಿಂಗ್​ ಆ ಚಿತ್ರದಲ್ಲಿ ಹೈಲೈಟ್​ ಆಗಿತ್ತು. ಈಗ ‘ಲೈಗರ್​’ ಸಿನಿಮಾದ ಟ್ರೇಲರ್​ನಲ್ಲಿಯೂ ಆ ಎಲಿಮೆಂಟ್​ ಕಾಣಿಸಿದೆ. ಅಮ್ಮ-ಮಗನ ಪಾತ್ರದಲ್ಲಿ ರಮ್ಯಾ ಕೃಷ್ಣನ್​ ಹಾಗೂ ವಿಜಯ್​ ದೇವರಕೊಂಡ ನಟಿಸಿದ್ದಾರೆ. ಬಾಕ್ಸರ್​ ಗೆಟಪ್​ನಲ್ಲಿ ದೇವರಕೊಂಡ ಮಿಂಚುತ್ತಿದ್ದಾರೆ. ಹಾಗಾಗಿ ‘ಅಮ್ಮ ನಾನಾ ಓ ತಮಿಳ ಅಮ್ಮಾಯಿ’ ಚಿತ್ರದ ಸೀಕ್ವೆಲ್​ ಆಗಿ ‘ಲೈಗರ್​’ ಚಿತ್ರ ಮೂಡಿಬಂದಿರಬಹುದು ಎಂಬುದು ಕೆಲವರ ಗುಮಾನಿ.

‘ಆ ಚಿತ್ರಕ್ಕೂ ಲೈಗರ್​ ಸಿನಿಮಾಗೂ ಸಂಬಂಧ ಇಲ್ಲ. ಇದು ಬೇರಯದೇ ಕಥೆ. ರಿಮೇಕ್​ ಅಥವಾ ಫ್ರೀಮೇಕ್​ ಮಾಡಲು ನಾನು ಇಷ್ಟಪಡುವುದಿಲ್ಲ’ ಎಂದು ವಿಜಯ್​ ದೇವರಕೊಂಡ ಹೇಳಿದ್ದಾರೆ. ಆಗಸ್ಟ್​ 25ರಂದು ‘ಲೈಗರ್​’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ತೆರೆಕಾಣಲಿದೆ.

ಇದನ್ನೂ ಓದಿ
Liger: ‘ಲೈಗರ್ ಸಿನಿಮಾ ಬ್ಲಾಕ್​ ಬಸ್ಟರ್​’: ರಿಲೀಸ್​ಗೂ ಮುನ್ನ ಘೋಷಿಸಿದ ವಿಜಯ್​ ದೇವರಕೊಂಡ
Liger: ವಡೋದರದಲ್ಲಿ ವಿಜಯ್​ ದೇವರಕೊಂಡ, ಅನನ್ಯಾ ಪಾಂಡೆಗೆ ಅದ್ದೂರಿ ಸ್ವಾಗತ
Liger Movie: ಅಹಮದಾಬಾದ್​ನಲ್ಲಿ ವಿಜಯ್​ ದೇವರಕೊಂಡ ನೋಡಲು ಜನಸಾಗರ; ಜೋರಾಗಿದೆ ‘ಲೈಗರ್​’ ಹವಾ
Sini Shetty: ಮಿಸ್​ ಇಂಡಿಯಾ ಸಿನಿ ಶೆಟ್ಟಿಗೂ ಇಷ್ಟ ವಿಜಯ್​ ದೇವರಕೊಂಡ; ಮನದ ಮಾತು ತೆರೆದಿಟ್ಟ ಸುಂದರಿ

‘ಲೈಗರ್​’ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ದೇಶದ ವಿವಿಧ ನಗರಗಳಿಗೆ ತೆರಳಿ ಇವರಿಬ್ಬರೂ ಪ್ರಮೋಷನ್​ ಮಾಡುತ್ತಿದ್ದಾರೆ. ಹೋದಲ್ಲೆಲ್ಲ ಅವರಿಗೆ ಭರ್ಜರಿ ಸ್ವಾಗತ ಸಿಗುತ್ತಿದೆ. ಸಿನಿಮಾ ರಿಲೀಸ್​ಗೂ ಮುನ್ನವೇ ಇದನ್ನು ಬ್ಲಾಕ್​ ಬಸ್ಟರ್​ ಹಿಟ್​ ಎಂದು ವಿಜಯ್​ ದೇವರಕೊಂಡ ಘೋಷಿಸಿದ್ದಾರೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್​, ಚಾರ್ಮಿ ಕೌರ್​, ಕರಣ್​ ಜೋಹರ್​ ಜೊತೆಯಾಗಿ ಬಂಡವಾಳ ಹೂಡಿದ್ದಾರೆ. ವಿಶ್ವ ವಿಖ್ಯಾತ ಬಾಕ್ಸರ್​ ಮೈಕ್​ ಟೈಸನ್​ ಅವರು ಈ ಸಿನಿಮಾದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:04 pm, Tue, 16 August 22