ಹೆಚ್ಚಿತು ‘ಲವ್ ಮಾಕ್ಟೇಲ್ 3’ ಶೋ; ಒಟ್ಟಾರೆ ಕಲೆಕ್ಷನ್ ಎಷ್ಟು?

ಲವ್ ಮಾಕ್ಟೇಲ್ 3 ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಮೊದಲ ಎರಡು ದಿನಗಳಲ್ಲಿ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಜನರಿಗೆ ಭಾವನಾತ್ಮಕವಾಗಿ ಇಷ್ಟವಾಗಿರುವ ಈ ಚಿತ್ರ, ಡಾರ್ಲಿಂಗ್ ಕೃಷ್ಣ ಅವರ ಅನಿರೀಕ್ಷಿತ ಕಥೆ ಮತ್ತು ಮಿಲನಾ ನಾಗರಾಜ್ ಅವರ ಹಾಸ್ಯದಿಂದ ಪ್ರಶಂಸೆಗೆ ಪಾತ್ರವಾಗಿದೆ. ಇದು ಸರಣಿಯ ಕೊನೆಯ ಚಿತ್ರ ಎನ್ನಲಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಹೆಚ್ಚಿತು ‘ಲವ್ ಮಾಕ್ಟೇಲ್ 3’ ಶೋ; ಒಟ್ಟಾರೆ ಕಲೆಕ್ಷನ್ ಎಷ್ಟು?
ಲವ್ ಮಾಕ್ಟೇಲ್ 3

Updated on: Mar 21, 2026 | 7:31 AM

‘ಲವ್ ಮಾಕ್ಟೇಲ್’ (Love Mocktail) ಸರಣಿಗೆ ಅದರದ್ದೇ ಆದ ಅಭಿಮಾನಿ ಬಳಗ ಇದೆ. ಈ ಚಿತ್ರದ ಮೊದಲ ಭಾಗ ರಿಲೀಸ್ ಆಗಿದ್ದು 2020ರಲ್ಲಿ. ಆ ಬಳಿಕ ಇದಕ್ಕೆ ಪಾರ್ಟ್ 2 ಬಂತು. ಈಗ ಮೂರನೇ ಭಾಗ ತೆರೆಗೆ ಬಂದಿದೆ. ಈ ಚಿತ್ರವನ್ನು ಜನರು ಬಹುವಾಗಿ ಇಷ್ಟಪಟ್ಟಿದ್ದಾರೆ. ಸಿನಿಮಾನ ಕೊಂಡಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಭಾವನಾತ್ಮಕವಾಗಿ ಸಿನಿಮಾ ಇಷ್ಟ ಆಗುತ್ತಿದೆ. ಹಾಗಾದರೆ, ಈ ಚಿತ್ರ ಮಾಡಿದ ಒಟ್ಟಾರೆ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ? ಆ ಬಗ್ಗೆ ಇಲ್ಲಿದೆ ವಿವರ.

‘ಲವ್ ಮಾಕ್ಟೇಲ್’ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಿರ್ದೇಶನ ಇದೆ. ಈ ಸರಣಿಯ ಕೊನೆಯ ಸಿನಿಮಾ ಇದಾಗಲಿದೆ ಎಂದು ಕೃಷ್ಣ ಹೇಳಿದ್ದರು.ಚಿತ್ರದ ಕ್ಲೈಮ್ಯಾಕ್ಸ್ ನೋಡಿದ್ರೆ ಸಿನಿಮಾ ಸರಣಿ ಇಲ್ಲಿಗೆ ಕೊನೆ ಆಗಲಿದೆ ಎಂಬುದು ಸ್ಪಷ್ಟವಾಗಿದೆ. ಈ ಚಿತ್ರ ಹಾಸ್ಯ ಹಾಗೂ ಗಂಭೀರ ವಿಷಯವನ್ನು ಹೇಳುತ್ತದೆ. ಈ ಚಿತ್ರವು ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಗಳಿಕೆಯನ್ನು ಮುಂದುವರಿಸಿದೆ.

‘ಲವ್ ಮಾಕ್ಟೇಲ್ 3’ ಚಿತ್ರ ಮೊದಲ ದಿನ 1.36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಮಾಡಿದೆ. ಎರಡನೇ ದಿನವಾದ ಶುಕ್ರವಾರ 1.15 ಕೋಟಿ ರೂಪಾಯಿ ಗಳಿಸಿದೆ. ಚಿತ್ರದ ಒಟ್ಟಾರೆ ಗಳಿಕೆ ಎರಡೂವರೆ ಕೋಟಿ ರೂಪಾಯಿ ಆಗಿದೆ. ವಿಶೇಷ ಎಂದರೆ ಚಿತ್ರಕ್ಕೆ ಗುರುವಾರ 397 ಶೋಗಳನ್ನು ನೀಡಲಾಗಿತ್ತು. ಶುಕ್ರವಾರ ಅದನ್ನು 407ಕ್ಕೆ ಏರಿಸಲಾಗಿದೆ. ಇದು ಚಿತ್ರದ ಹೆಚ್ಚುಗಾರಿಕೆ.

‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಬ್ರೇಕಪ್​​ಗಳು ಹೈಲೈಟ್ ಆಗಿದ್ದವು. ಎರಡನೇ ಭಾಗದಲ್ಲಿಯೂ ಇದೇ ವಿಷಯ ಇತ್ತು. ಆದರೆ, ಮೂರನೇ ಭಾಗದಲ್ಲಿ ಯಾರೂ ಊಹಿಸದ ರೀತಿಯ ಕಥೆಯೊಂದಿಗೆ ಡಾರ್ಲಿಂಗ್ ಕೃಷ್ಣ ಸಿನಿಮಾ ಮಾಡಿದರು. ಚಿತ್ರ ನೋಡಿದ ಅನೇಕರು ಹೊಗಳುತ್ತಿದ್ದಾರೆ. ‘ಸಿನಿಮಾ ಈ ರೀತಿ ಇರುತ್ತದೆ ಎಂದು ಊಹಿಸಿರಲಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಧುರಂದರ್ 2’ ಚಿತ್ರದ ಎದುರು ರಿಲೀಸ್ ಆದ ‘ಲವ್ ಮಾಕ್ಟೇಲ್ 3’ ಗಳಿಸಿದ್ದೆಷ್ಟು?

ಮಿಲನಾ ನಾಗರಾಜ್ ಅವರು ಮೊದಲ ಭಾಗ, ಎರಡನೇ ಭಾಗದಲ್ಲಿ ಇದ್ದರು. ಮೂರನೇ ಭಾಗದಲ್ಲೂ ಅವರನ್ನು ಕರೆತರಲಾಗಿದೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಮೂರನೇ ಭಾಗದಲ್ಲಿಯೂ ಹಾಸ್ಯ ಹೈಲೈಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us