ಅತ್ಯಾಚಾರದ ಆರೋಪದಲ್ಲಿ ನಟ ಮಡೆನೂರು ಮನು 2 ದಿನ ಪೊಲೀಸ್ ಕಸ್ಟಡಿಗೆ

ಸಹ-ನಟಿ ಮಾಡಿದ ಆರೋಪದಿಂದ ನಟ ಮಡೆನೂರು ಮನು ಅವರಿಗೆ ಸಂಕಷ್ಟ ಹೆಚ್ಚಾಗಿದೆ. ಅತ್ಯಾಚಾರದ ಕೇಸ್​ನಲ್ಲಿ ಹೆಚ್ಚಿನ ವಿಚಾರಣೆಗಾಗಿ ಮನು ಅವರನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಬಿಡುಗಡೆ ದಿನವೇ ಮನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುವಂತಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಅತ್ಯಾಚಾರದ ಆರೋಪದಲ್ಲಿ ನಟ ಮಡೆನೂರು ಮನು 2 ದಿನ ಪೊಲೀಸ್ ಕಸ್ಟಡಿಗೆ
Madenur Manu

Updated on: May 23, 2025 | 5:29 PM

‘ಕಾಮಿಡಿ ಕಿಲಾಡಿಗಳು’ (Comedy Khiladigalu) ಖ್ಯಾತಿಯ ನಟ ಮಡೆನೂರು ಮನು ಅವರು ಪೊಲೀಸರ ಅತಿಥಿ ಆಗಿದ್ದಾರೆ. ಸಹ ನಟಿಯೊಬ್ಬರು ಅತ್ಯಾಚಾರ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ಮನುಗೆ ಸಂಕಷ್ಟ ಎದುರಾಗಿದೆ. ಮೇ 22ರಂದು ಮನು (Madenur Manu) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇಂದು (ಮೇ 23) ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಮಡೆನೂರು ಮನು ಅವರನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ (Police Custody) ನೀಡಲಾಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

‘ನನ್ನ ಮೇಲೆ ಅತ್ಯಾಚಾರ ಆಗಿದೆ. ಮದುವೆ ಆಗುವುದಾಗಿ ನಂಬಿಸಿ ಮನು ಮೋಸ ಮಾಡಿದ್ದಾನೆ. 2 ಬಾರಿ ಗರ್ಭಪಾತ ಆಗಿದೆ. ಬಲವಂತವಾಗಿ ಕುಡಿಸಿ, ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ನನ್ನ ಖಾಸಗಿ ವಿಡಿಯೋ ಮಾಡಿಕೊಂಡಿದ್ದಾನೆ’ ಎಂದು ಸಹ-ನಟಿಯೊಬ್ಬರು ಮಡೆನೂರು ಮನು ಮೇಲೆ ಆರೋಪಗಳ ಮಳೆ ಸುರಿಸಿದ್ದಾರೆ. ಈ ಕೇಸ್​ನಲ್ಲಿ ಮನು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: ‘ನನ್ನ ಗಂಡನ ಪರ ನಿಲ್ಲುತ್ತೇನೆ, ನ್ಯಾಯ ಸಿಗುವವರೆಗೆ ಹೋರಾಡುತ್ತೇನೆ’; ಆರೋಪಿ ಮಡೆನೂರು ಮನು ಪತ್ನಿಯ ದೃಢ ನಿಲುವು

ಇದನ್ನೂ ಓದಿ
ಎರಡು ಬಾರಿ ಪ್ರೆಗ್ನೆಂಟ್ ಆಗಿದ್ದೆ; ‘ಕಾಮಿಡಿ ಕಿಲಾಡಿ’ ಕಲಾವಿದರ ಜಗಳ ಬೀದಿಗೆ
ಕನ್ನಡ ಕಿರುತೆರೆ ನಟಿಯ ಮೇಲೆ ಅತ್ಯಾಚಾರ; ನಟ ಮಡೆನೂರು ಮನು ವಿರುದ್ಧ FIR
ಮೇ 23ಕ್ಕೆ ಕುಲದಲ್ಲಿ ಕೀಳ್ಯಾವುದೋ ರಿಲೀಸ್; ಕಾಮಿಡಿ ಕಿಲಾಡಿ ನಟನ ಹೊಸ ಜರ್ನಿ
‘ಕುಲದಲ್ಲಿ ಕೀಳ್ಯಾವುದೋ’ ಟೈಟಲ್ ಸಿಕ್ಕಿದ್ದು ಅಣ್ಣಾವ್ರ ಆಶೀರ್ವಾದ: ಮಡೆನೂರು

ಮಡೆನೂರು ಮನು ಅವರು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಇಂದು (ಮೇ 23) ಆ ಸಿನಿಮಾ ಬಿಡುಗಡೆ ಆಗಿದೆ. ಆದರೆ ಅತ್ಯಾಚಾರದ ಕೇಸ್​ನಲ್ಲಿ ಮನು ಪೊಲೀಸ್ ಠಾಣೆಯಲ್ಲಿ ಕಾಲ ಕಳೆಯುವಂತಾಗಿದೆ. ಈ ಕೇಸ್​ನಲ್ಲಿ ಹಲವರ ಹೆಸರುಗಳು ಪ್ರಸ್ತಾಪ ಆಗುತ್ತಿವೆ. ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗ ನಟಿ ಆರೋಪ ಮಾಡಿದ್ದರಿಂದ ಕೆಲವು ಅನುಮಾನಗಳು ಮೂಡಿವೆ.

ಮನು ಪರವಾಗಿ ಅವರ ಪತ್ನಿ ಬೆಂಬಲಕ್ಕೆ ನಿಂತಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ ಸಿನಿಮಾಗಾಗಿ ನನ್ನ ಗಂಡ ತುಂಬ ಕಷ್ಟಪಟ್ಟಿದ್ದಾರೆ. ಈಗ ಸಿನಿಮಾ ಬಿಡುಗಡೆ ದಿನವೇ ಕೇಸ್ ಮಾಡಿರುವುದು ಷಡ್ಯಂತ್ರ. ನನ್ನ ಗಂಡ ತಪ್ಪು ಮಾಡಿಲ್ಲ. ಅದನ್ನು ನಾನು ಸಾಕ್ಷಿ ಸಮೇತ ಸಾಬೀತು ಮಾಡುತ್ತೇವೆ. ನನ್ನ ಗಂಡನನ್ನು ನಾನು ಬಿಟ್ಟುಕೊಡಲ್ಲ. ನನ್ನ ಗಂಡನನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ’ ಎಂದು ಮನು ಪತ್ನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:23 pm, Fri, 23 May 25