Mafia Movie: ‘ಮಾಫಿಯಾ’ ಚಿತ್ರತಂಡದಿಂದ ಪ್ರಜ್ವಲ್​ ದೇವರಾಜ್​ ಜನ್ಮದಿನಕ್ಕೆ ಹೊಸ ಪೋಸ್ಟರ್​ ರಿಲೀಸ್​

|

Updated on: Jul 04, 2023 | 7:09 PM

Prajwal Devaraj Birthday: ಆಗಸ್ಟ್​ನಲ್ಲಿ ‘ಮಾಫಿಯಾ’ ಬಿಡುಗಡೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ. ಪ್ರಜ್ವಲ್​ ದೇವರಾಜ್​ ಅವರ ಬರ್ತ್​ಡೇ ಪ್ರಯುಕ್ತ ಹೊಸ ಪೋಸ್ಟರ್​ ರಿಲೀಸ್​ ಮಾಡಲಾಗಿದೆ.

Mafia Movie: ‘ಮಾಫಿಯಾ’ ಚಿತ್ರತಂಡದಿಂದ ಪ್ರಜ್ವಲ್​ ದೇವರಾಜ್​ ಜನ್ಮದಿನಕ್ಕೆ ಹೊಸ ಪೋಸ್ಟರ್​ ರಿಲೀಸ್​
‘ಮಾಫಿಯಾ’ ತಂಡದಿಂದ ಪ್ರಜ್ವಲ್​ ದೇವರಾಜ್​ ಹುಟ್ಟುಹಬ್ಬ ಆಚರಣೆ
Follow us on

ನಟ ಪ್ರಜ್ವಲ್​ ದೇವರಾಜ್​ (Prajwal Devaraj) ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಆ ಎಲ್ಲ ಸಿನಿಮಾಗಳ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರಜ್ವಲ್​ ದೇವರಾಜ್​ ನಟನೆಯ ‘ಮಾಫಿಯಾ’ ಸಿನಿಮಾ (Mafia movie) ಬಗ್ಗೆ ಒಂದಷ್ಟು ಕುತೂಹಲ ಮನೆ ಮಾಡಿದೆ. ಈ ಮೊದಲೇ ಬಿಡುಗಡೆ ಆಗಿದ್ದ ಪೋಸ್ಟರ್​ ಗಮನ ಸೆಳೆದಿತ್ತು. ಈಗ ಪ್ರಜ್ವಲ್​ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಪೋಸ್ಟರ್​ ಹಂಚಿಕೊಳ್ಳಲಾಗಿದೆ. ‘ಬೆಂಗಳೂರು ಕುಮಾರ್ ಫಿಲ್ಮ್ಸ್​’ ಬ್ಯಾನರ್​ ಮೂಲಕ ಕುಮಾರ್ ಬಿ. ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಲೋಹಿತ್ ಹೆಚ್. (Lohith H) ಅವರು ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ.

‘ಮಮ್ಮಿ’, ‘ದೇವಕಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಲೋಹಿತ್​ ಅವರು ‘ಮಾಫಿಯಾ’ ಸಿನಿಮಾದಲ್ಲಿ ಒಂದು ಮಾಸ್​ ಕಥೆಯನ್ನು ಹೇಳಲಿದ್ದಾರೆ. ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಅವರಿಗೆ ಈ ಚಿತ್ರದಲ್ಲಿ ಭಿನ್ನವಾದ ಪಾತ್ರ ಇದೆ. ಶೀರ್ಷಿಕೆಯಿಂದಲೇ ‘ಮಾಫಿಯಾ’ ಸಿನಿಮಾ ಗಮನ ಸೆಳೆಯುತ್ತಿದೆ. ಇಂದು (ಜುಲೈ 4) ಪ್ರಜ್ವಲ್​ ದೇವರಾಜ್​ ಅವರ ಜನ್ಮದಿನ. ಆ ಪ್ರಯುಕ್ತ ಹಲವು ಚಿತ್ರತಂಡಗಳು ಶುಭ ಕೋರಿವೆ. ‘ಮಾಫಿಯಾ’ ಟೀಮ್ ಕೂಡ ವಿಶೇಷ ಪೋಸ್ಟರ್​ ಹಂಚಿಕೊಂಡು ಹುಟ್ಟುಹಬ್ಬಕ್ಕೆ ವಿಶ್​ ಮಾಡಿದೆ.

ಪ್ರಜ್ವಲ್​ ದೇವರಾಜ್​ ಅವರು ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಫ್ಯಾನ್ಸ್​ ಜೊತೆ ಸೇರಿ ಜನ್ಮದಿನ ಆಚರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಖುಷಿಯಿಂದ ಎಲ್ಲರ ಜೊತೆ ಸೇರಿ ಅವರು ಕೇಕ್​ ಕತ್ತರಿಸಿದ್ದಾರೆ. ‘ಮಾಫಿಯಾ’ ಸಿನಿಮಾ ತಂಡ ಕೂಡ ಪ್ರಜ್ವಲ್​ ದೇವರಾಜ್​ ಅವರ ಬರ್ತ್​ಡೇ ಸೆಲೆಬ್ರೇಟ್​ ಮಾಡಿದೆ. ಈ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯಕ್ಕೆ ಪೋಸ್ಟ್​ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ: Prajwal Devaraj: ಪ್ಯಾನ್​ ಇಂಡಿಯಾ ಸಿನಿಮಾ ಮಾಡಲು ಹೊರಟ ಪ್ರಜ್ವಲ್​ ದೇವರಾಜ್​; ಈ ಚಿತ್ರದ ಹೆಸರು ‘ಜಾತರೆ’

ಆಗಸ್ಟ್​ನಲ್ಲಿ ‘ಮಾಫಿಯಾ’ ಬಿಡುಗಡೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ. ಆ್ಯಕ್ಷನ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ಆ್ಯಕ್ಷನ್​ ಸಿನಿಮಾವನ್ನು ಇಷ್ಟಪಡುವವರಿಗೆ ಈ ಚಿತ್ರ ಸಖತ್​ ಮನರಂಜನೆ ನೀಡಲಿದೆ. ಈ ಸಿನಿಮಾಗಾಗಿ ಪ್ರಜ್ವಲ್ ಅವರು ತುಂಬ ಶ್ರಮ ವಹಿಸಿದ್ದಾರೆ. ವಿಭಿನ್ನ ಗೆಟಪ್​ನಲ್ಲಿ ಅವರು ಅವರು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Prajwal Devaraj: ಟೈಮ್​ ಲೂಪ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​; ‘ಮಮ್ಮಿ’ ಖ್ಯಾತಿಯ ಲೋಹಿತ್​ ನಿರ್ದೇಶನ

ಪ್ರಜ್ವಲ್​ ದೇವರಾಜ್​ ನಟನೆಯ 35ನೇ ಚಿತ್ರವಾಗಿ ‘ಮಾಫಿಯಾ’ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ 3 ಸಾಂಗ್ಸ್​ ಇವೆ. ಅನೂಪ್ ಸೀಳಿನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಎಸ್. ಪಾಂಡಿಕುಮಾರ್ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಪ್ರಜ್ವಲ್ ದೇವರಾಜ್ ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ದೇವರಾಜ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬುದು ವಿಶೇಷ. ಸಾಧುಕೋಕಿಲ, ವಿಜಯ್ ಚೆಂಡೂರ್, ಶೈನ್ ಶೆಟ್ಟಿ, ವಾಸುಕಿ ವೈಭವ್ ಸೇರಿದಂತೆ ಅನೇಕರು ‘ಮಾಫಿಯಾ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.