ಬೆದರಿಕೆ ಸಂದೇಶ ಕಳಿಸಿದ ಆರೋಪ, ಮಾಳವಿಕಾಗೆ ಟ್ರಾಯ್ ನೊಟೀಸ್: ನಿಜಕ್ಕೂ ನಡೆದಿರುವುದೇನು?

|

Updated on: Nov 03, 2023 | 8:54 PM

Malavika Avinash: ನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ವಿರುದ್ಧ ಹಲವರಿಗೆ ಬೆದರಿಕೆ ಸಂದೇಶ ಕಳಿಸಿರುವ ಆರೋಪವನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಹೊರಿಸಿ ನೊಟೀಸ್ ನೀಡಿದೆ. ಆದರೆ ನಿಜಕ್ಕೂ ನಡೆದಿರುವುದೇನು?

ಬೆದರಿಕೆ ಸಂದೇಶ ಕಳಿಸಿದ ಆರೋಪ, ಮಾಳವಿಕಾಗೆ ಟ್ರಾಯ್ ನೊಟೀಸ್: ನಿಜಕ್ಕೂ ನಡೆದಿರುವುದೇನು?
Follow us on

ನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್​ಗೆ (Malavika Avinash) ಟ್ರಾಯ್ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) ನೊಟೀಸ್ ನೀಡಿದೆ. ಹಲವರಿಗೆ ಬೆದರಿಕೆ ಸಂದೇಶ ಹಾಗೂ ಕರೆಗಳನ್ನು ಮಾಡಿದ ಆರೋಪವನ್ನು ಟ್ರಾಯ್ ಮಾಳವಿಕಾ ಅವಿನಾಶ್ ವಿರುದ್ಧ ಹೊರಿಸಿದೆ. ಟ್ರಾಯ್ ನೀಡಿರುವ ನೊಟೀಸ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಮಾಳವಿಕಾ ಅವಿನಾಶ್ ನಿಜಕ್ಕೂ ನಡೆದಿರುವುದು ಏನು ಎಂದು ವಿವರಿಸಿದ್ದಾರೆ, ಮಾತ್ರವಲ್ಲದೆ ನಾಗರೀಕರು ಎಚ್ಚರಿಕೆಯಿಂದ ಇರುವಂತೆ ಸಂದೇಶವನ್ನೂ ನೀಡಿದ್ದಾರೆ.

ಕೊಡಗಿನಲ್ಲಿ ಕುಟುಂಬದವರೊಟ್ಟಿಗೆ ಕಾಲ ಕಳೆಯುತ್ತಿದ್ದ ಮಾಳವಿಕಾ ಅವರಿಗೆ ಟ್ರಾಯ್​ ಸಂಸ್ಥೆಯವರು ಕರೆ ಮಾಡಿ, ತಾವು ಹಲವರಿಗೆ ಬೆದರಿಕೆ ಸಂದೇಶ ಕಳಿಸಿರುವ ಕಾರಣ ತಮ್ಮ ಮೊಬೈಲ್ ಸಿಮ್ ಅನ್ನು ನಿಷ್ಕ್ರಿಯ ಮಾಡಾಗುವುದು ಎಂದಿದ್ದಾರೆ. ಇದರಿಂದ ಅವಾಕ್ಕಾದ ಮಾಳವಿಕಾ, ಇನ್ನಷ್ಟು ಮಾಹಿತಿಯನ್ನು ಕೇಳಿದ್ದಾರೆ.

ಇದನ್ನೂ ಓದಿ:ಆಧಾರ್​​ ಫಿಂಗರ್​​ ಪ್ರಿಂಟ್​ಗೇ ಕನ್ನ, ಖಾತೆಯಿಂದ ಹಣ ವಿತ್​ಡ್ರಾ: ಮಂಗಳೂರಿನಲ್ಲಿ ಸೈಬರ್ ಚೋರರು ಹಣ ಎಗರಿಸುತ್ತಿದ್ದುದು ಹೀಗೆ

ಆಗ ತಿಳಿದು ಬಂದಿರುವುದೇನೆಂದರೆ, ಮಾಳವಿಕಾ ಅವಿನಾಶ್ ಅವರ ಆಧಾರ್ ಮಾಹಿತಿಯನ್ನು ಬಳಸಿಕೊಂಡು ಅನಾಮಧೇಯ ವ್ಯಕ್ತಿ ಮುಂಬೈನಲ್ಲಿ ಸಿಮ್ ಒಂದನ್ನು ಖರೀದಿಸಿ ಬಳಿಕ ಅದೇ ನಂಬರ್​ನಿಂದ ಹಲವರಿಗೆ ಬೆದರಿಕೆ ಕರೆಗಳು ಹಾಗೂ ಸಂದೇಶಗಳನ್ನು ಮಾಡಿದ್ದಾನೆ. ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿದರು ನಂಬರ್ ಆಧರಿಸಿ ಪೊಲೀಸರಿಗೆ ದೂರು ನೀಡಿದ್ದು, ಅದು ಟ್ರಾಯ್ ಗಮನಕ್ಕೆ ಬಂದು, ಸಿಮ್​ ಕುರಿತು ಮಾಹಿತಿ ಹುಡುಕಿದಾಗ ಅದು ಮಾಳವಿಕಾ ಅವಿನಾಶ್​ ಅವರ ಆಧಾರ್ ಕಾರ್ಡ್ ಬಳಸಿ ಪಡೆದ ಸಿಮ್ ಆಗಿದ್ದರಿಂದಲೂ, ಅದೇ ಆಧಾರ್​ನಿಂದ ಪಡೆದ ಇನ್ನೊಂದು ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಟ್ರಾಯ್​ನವರು ಎಚ್ಚರಿಕೆ ಹಾಗೂ ನೊಟೀಸ್​ ಅನ್ನು ನೀಡಿದ್ದಾರೆ.

ಪ್ರಕರಣದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ ಮಾಳವಿಕಾ ಅವಿನಾಶ್, ಫೋಟೊ ಇರುವ ದಾಖಲೆಯನ್ನು ಬೇರೊಬ್ಬ ವ್ಯಕ್ತಿ ಹೇಗೆ ಬಳಸಲು ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸಿರುವ ಮಾಳವಿಕಾ ಅವಿನಾಶ್, ಪ್ರಕರಣದ ಕುರಿತು ಮುಂಬೈಗೆ ಹೋಗಿ ದೂರು ನೀಡಲು ನಿರಾಕರಿಸಿದ ಮಾಳವಿಕಾ, ವಿಡಿಯೋ ಕಾಲ್ ಮೂಲಕ ಮುಂಬೈ ಪೊಲೀಸರ ಬಳಿ ಹೇಳಿಕೆ ದಾಖಲಿಸಿದ್ದಾರೆ. ಮಾಳವಿಕಾರ ಹೇಳಿಕೆಯನ್ನು ಕೋರ್ಟ್​ಗೆ ಸಲ್ಲಿಕೆ ಮಾಡಿ, ಅವರ ಹೆಸರಿನಲ್ಲಿ ಅಕ್ರಮವಾಗಿ ವಿತರಣೆಯಾಗಿದ್ದ ಸಿಮ್ ಅನ್ನು ರದ್ದು ಮಾಡಿಸಿದ್ದಾರೆ ಪೊಲೀಸರು. ಆಧಾರ್ ಮಾಹಿತಿ ಸೋರಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಜೊತೆಗೆ ಖಾಸಗಿ ಮಾಹಿತಿ ಬಗ್ಗೆ ಜಾಗೃತೆವಹಿಸಬೇಕೆಂದು ಮನವಿ ಸಹ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:52 pm, Fri, 3 November 23