ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಬಿನಲ್ಲಿ ಬಣ್ಣ ಬದಲಿಸಿ ಕೆಂಪಾದ ಕತೆ

Sapta Sagaradache Ello Side B: ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್ ನಟಿಸಿದ್ದ ನವಿರು ಪ್ರೇಮಕತೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾದ ಎರಡನೇ ಭಾಗ ಬಿಡುಗಡೆಗೆ ಸಜ್ಜಾಗಿದ್ದು ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಬಿನಲ್ಲಿ ಬಣ್ಣ ಬದಲಿಸಿ ಕೆಂಪಾದ ಕತೆ
ಎಸ್​ಎಸ್​ಇ2
Follow us
ಮಂಜುನಾಥ ಸಿ.
|

Updated on:Nov 04, 2023 | 7:12 PM

ರಕ್ಷಿತ್ ಶೆಟ್ಟಿ (Rakshit Shetty), ರುಕ್ಮಿಣಿ ವಸಂತ್ (Rukmini Vasanth) ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸೆಪ್ಟೆಂಬರ್ 1 ರಂದು ಬಿಡುಗಡೆ ಆಗಿ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಹೊಡಿ, ಬಡಿ ಸಿನಿಮಾಗಳ ಜಮಾನಾದಲ್ಲಿ ನವಿರು ಪ್ರೇಮಕತೆಯನ್ನು ಇಂಟೆನ್ಸ್​ ಆಗಿ ಹೇಳಿರುವ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಮನು ಹಾಗೂ ಪ್ರಿಯಾಳ ಜಗತ್ತಿನಲ್ಲಿ ತಾವೂ ಒಬ್ಬರಾಗಿ ಅವರ ಪ್ರೀತಿ, ಖುಷಿ, ದುಃಖಗಳನ್ನು ತಾವೂ ಅನುಭವಿಸಿ ಹೊಸ ರೀತಿಯ ಅನುಭವ ಪಡೆದಿದ್ದರು. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವು ಒಂದು ಕುತೂಹಕಲಕಾರಿ ಘಟ್ಟದಲ್ಲಿ ಅಂತ್ಯವಾಗಿ, ಕತೆಯಲ್ಲಿ ಮುಂದೆ ಏನಾಯ್ತು ಎಂಬುದನ್ನು ಮುಂದಿನ ಭಾಗದಲ್ಲಿ ತೋರಿಸುವುದಾಗಿ ಹೇಳಿದ್ದರು ನಿರ್ದೇಶಕ ಹೇಮಂತ್ ರಾವ್.

ಅಂತೆಯೇ ಇದೀಗ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಸೈಡ್ ಬಿ ಅಥವಾ ಎರಡನೇ ಭಾಗದ ಟ್ರೈಲರ್ ಬಿಡುಗಡೆ ಆಗಿದೆ. ಮೊದಲ ಭಾಗದ ಟ್ರೈಲರ್​ನಲ್ಲಿ ನೀಲಿ ಬಣ್ಣ ಢಾಳಾಗಿ ಕಂಡಿತ್ತು, ಆದರೆ ಸೈಡ್ ಬಿನಲ್ಲಿ ನವಿರಾದ ನೀಲಿ ಬಣ್ಣದ ಸ್ಥಾನವನ್ನು ಕೆಂಪು ಬಣ್ಣ ಆಕ್ರಮಿಸಿದೆ. ಅಪ್ಪಟ ಪ್ರೇಮಿಯಾಗಿದ್ದ ಮನು, ಇಲ್ಲಿ ಅವತಾರ ಬದಲಿಸಿಕೊಂಡು ವೈಯಲೆಂಟ್ ಆಗಿದ್ದಾನೆ. ಕೈಯಲ್ಲಿ ಚಾಕು ಸಹ ಇದೆ.

ಮೊದಲ ಭಾಗದಲ್ಲಿ ಜೈಲು ಪಾಲಾಗಿ ತನ್ನ ಪ್ರೀತಿಗೆ ದೂರವಾಗುವ ಸನ್ನಿವೇಶ ತಂದುಕೊಂಡಿದ್ದ ಮನು, ಎರಡನೇ ಭಾಗದಲ್ಲಿ ಜೈಲಿನಿಂದ ಬಿಡುಗಡೆಯನ್ನೇನೋ ಪಡೆದಿದ್ದಾನೆ. ಆದರೆ ಪ್ರಿಯಾಳ ನೆನಪಿನಿಂದ ಹೊರಗೆ ಬಂದಿಲ್ಲ. ಪ್ರಿಯಾ ಈಗ ಭಿನ್ನ ಜಗತ್ತಿನಲ್ಲಿ ಬದುಕುತ್ತಿದ್ದಾಳೆ. ಎದುರು-ಬದುರು ಇದ್ದರೂ ಸಹ ಒಬ್ಬೊಬ್ಬರು ಒಂದೊಂದು ತೀರವಾಗಿಬಿಟ್ಟಿದ್ದಾರೆ ಪ್ರಿಯಾ ಹಾಗೂ ಮನು.

ಇದನ್ನೂ ಓದಿ:ನವೆಂಬರ್​ 17ಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಬಿಡುಗಡೆ; ಈ ಬಾರಿ ಏನು ಸ್ಪೆಷಲ್​?

ಟ್ರೈಲರ್​ನಲ್ಲಿ ಚೈತ್ರಾ ಆಚಾರ್ ಸಹ ಇದ್ದಾರೆ. ಮನು, ಪ್ರಿಯಾಳ ನೆನಪಿನಿಂದ ಹೊರಗೆ ಬರಲು ಚೈತ್ರಾ ಆಚಾರ್ ನಿರ್ವಹಿಸಿರುವ ಸುರಭಿ ಪಾತ್ರದ ಸಾಂಗತ್ಯಕ್ಕೆ ಜಾರುವ ಕೆಲವು ದೃಶ್ಯಗಳನ್ನು ಟ್ರೈಲರ್​ನಲ್ಲಿ ತೋರಿಸಲಾಗಿದೆ. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಅಚ್ಯುತ್ ಕುಮಾರ್ ಈ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಎರಡನೇ ಭಾಗದಲ್ಲಿ ಗೋಪಾಲ ದೇಶಪಾಂಡೆ ಅವರಿಗೆ ಮಹತ್ವದ ಪಾತ್ರ ಇರುವಂತಿದೆ.

ಮೊದಲ ಭಾಗದಂತೆಯೇ ಎರಡನೇ ಭಾಗದಲ್ಲಿಯೂ ಸಂಗೀತ, ನಿರೂಪಣಾ ವಿಧಾನ, ಕ್ಯಾಮೆರಾ ಕೆಲಸಗಳು ಗಮನ ಸೆಳೆಯುವಂತಿದೆ. ಇದರ ಕೆಲವು ಝಲಕ್​ಗಳು ಟ್ರೈಲರ್​ನಲ್ಲಿಯೇ ಕಾಣ ಸಿಗುತ್ತವೆ. ಹೇಮಂತ್ ರಾವ್ ನಿರ್ದೇಶನದ ಈ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ನಿರ್ಮಾಣ ರಕ್ಷಿತ್ ಶೆಟ್ಟಿ ಅವರದ್ದೇ. ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾ ನವೆಂಬರ್ 17ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:08 pm, Sat, 4 November 23

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ