ರಿಷಬ್ ಶೆಟ್ಟಿ ತಮಿಳು ಚಿತ್ರರಂಗಕ್ಕೆ ಹೊರಟು ಹೋಗಲು ನಿರ್ಧರಿಸಿದ್ದ: ರಕ್ಷಿತ್ ಶೆಟ್ಟಿ

Rishab Shetty: ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರದಾದ್ಯಂತ ಮನ್ನಣೆ ತಂದುಕೊಟ್ಟ ವ್ಯಕ್ತಿ. ಮಾತ್ರವಲ್ಲದೆ, ಪಂಚೆ ತೊಟ್ಟುಕೊಂಡು ಓಡಾಡುತ್ತಾ, ಕನ್ನಡತನವನ್ನು ಹೋದಲ್ಲೆಲ್ಲ ಪಸರಿಸುತ್ತಿದ್ದಾರೆ. ಇಂತಿಪ್ಪ ರಿಷಬ್ ಶೆಟ್ಟಿ, ಒಂದು ಸಮಯದಲ್ಲಿ ತಮಿಳು ಚಿತ್ರರಂಗಕ್ಕೆ ಹೋಗಿ ಬಿಡುವ ನಿಶ್ಚಯ ಮಾಡಿದ್ದರಂತೆ. ಈ ವಿಷಯ ಹೇಳಿರುವುದು ಅವರ ಆತ್ಮೀಯ ಗೆಳೆಯ ರಕ್ಷಿತ್ ಶೆಟ್ಟಿ.

ರಿಷಬ್ ಶೆಟ್ಟಿ ತಮಿಳು ಚಿತ್ರರಂಗಕ್ಕೆ ಹೊರಟು ಹೋಗಲು ನಿರ್ಧರಿಸಿದ್ದ: ರಕ್ಷಿತ್ ಶೆಟ್ಟಿ
Follow us
ಮಂಜುನಾಥ ಸಿ.
|

Updated on: Oct 21, 2023 | 5:02 PM

ಕಾಂತಾರ‘ (Kantara) ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಶಕ್ತಿಯನ್ನು ಭಾರತಕ್ಕೆ ಪರಿಚಯಿಸಿದ್ದಾರೆ ರಿಷಬ್ ಶೆಟ್ಟಿ (Rishab Shetty). ಮಾತ್ರವಲ್ಲದೆ ‘ಕಾಂತಾರ’ ಸಿನಿಮಾದ ಬಳಿಕ ರಾಷ್ಟ್ರಮಟ್ಟದಲ್ಲಿ ಗುರುತು ಸಂಪಾದಿಸಿದ ರಿಷಬ್, ತಾವು ಹೋದಲ್ಲೆಲ್ಲ ಪಂಚೆ ತೊಟ್ಟು ಕನ್ನಡತನವನ್ನು ಮೆರೆಯುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ವಿಶ್ವಸಂಸ್ಥೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಯೂ ಕನ್ನಡದಲ್ಲಿಯೇ ಮಾತನಾಡುವ ಪ್ರಯತ್ನ ಮಾಡಿದ್ದರು ರಿಷಬ್. ಕನ್ನಡದ ಬಗ್ಗೆ ಕರ್ನಾಟಕದ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿರುವ ರಿಷಬ್ ಶೆಟ್ಟಿ, ಒಂದು ಸಮಯದಲ್ಲಿ ತಮಿಳು ಚಿತ್ರರಂಗಕ್ಕೆ ಹೊರಟು ಬಿಡುವ ಆಲೋಚನೆ ಮಾಡಿದ್ದರಂತೆ.

ಈ ವಿಷಯವನ್ನು ರಿಷಬ್​ರ ಆತ್ಮೀಯ ಸ್ನೇಹಿತ್ ರಕ್ಷಿತ್ ಶೆಟ್ಟಿಯೇ ತಿಳಿಸಿದ್ದು, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗ ಹೇಗೆ ಕಳೆದ ಹತ್ತು ವರ್ಷಗಳಲ್ಲಿ ಬದಲಾಗುತ್ತಾ ಬಂದಿದೆ ಎಂಬ ವಿಷಯ ಮಾತನಾಡುತ್ತಾ, ”ನಾನು ಸಿನಿಮಾ ನಟ, ನಿರ್ದೇಶಕ ಆಗಬೇಕು ಎಂದು ಬಂದಾಗ ಬಂದಾಗ, ನನ್ನ ವಾರಗೆಯ ಕೆಲವರು ಇಲ್ಲಿಗಿಂತಲೂ ಬೇರೆ ಭಾಷೆಯ ಚಿತ್ರರಂಗ ಹೆಚ್ಚು ಸೂಕ್ತವಾಗಿದೆ, ಹೊಸತನಕ್ಕೆ ಪರಭಾಷೆಯಲ್ಲಿ ಅವಕಾಶ ಇದೆ ಎಂದು ತಮಿಳು, ತೆಲುಗು ಚಿತ್ರರಂಗಗಳಿಗೆ ಹೋದರು, ಕೆಲವರು ಬಾಂಬೆಗೆ ಹೋಗಿ ಕೆಲಸ ಮಾಡಲು ಆರಂಭಿಸಿದರು. ಅವರು ಈಗಲೂ ಅಲ್ಲಿಯೇ ಇದ್ದಾರೆ. ಆಗ ಕನ್ನಡದಲ್ಲಿ ಕಮರ್ಷಿಯಲ್, ಒಂದು ಸಿದ್ಧ ಮಾದರಿಯ ಸಿನಿಮಾಗಳೇ ಬಹಳ ಹೆಚ್ಚು ನಿರ್ಮಾಣವಾಗುತ್ತಿತ್ತು, ಅವರಿಗೆ ಅವರ ರೀತಿಯ ಸಿನಿಮಾ ಮಾಡಲಿಕ್ಕಿತ್ತು ಹಾಗಾಗಿ ಬೇರೆಡೆ ಹೋದರು” ಎಂದಿದ್ದಾರೆ.

ಇದನ್ನೂ ಓದಿ:ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿಯ ಸಿನಿಮಾ, ಕಾಂತಾರ ಅಲ್ಲ

”ಅಷ್ಟು ಮಾತ್ರವೇ ಅಲ್ಲ, ಒಂದು ಸಮಯದಲ್ಲಿ ಸ್ವತಃ ರಿಷಬ್ ಶೆಟ್ಟಿ ಸಹ ತಮಿಳು ಚಿತ್ರರಂಗಕ್ಕೆ ಹೋಗಿ ಬಿಡುವ ಮನಸ್ಸು ಮಾಡಿದ್ದರು. ಆದರೆ ನನಗೆ ಅದು ಇಷ್ಟವಿರಲಿಲ್ಲ, ಇಲ್ಲ ನಾವು ಇಲ್ಲೇ ಇದ್ದು ಇಲ್ಲೇ ಕೆಲಸ ಮಾಡಬೇಕು ಎಂದೆ. ಬೆಂಗಳೂರಿನ ಸಿನಿಮಾ ಮೇಕರ್​ಗಳು ಪರಭಾಷೆಯ ಸಿನಿಮಾಗಳಿಂದಲೂ ಪ್ರಭಾವಕ್ಕೆ ಒಳಗಾಗುತ್ತಾರೆ. ಮಲಯಾಳಂ, ತಮಿಳುನಾಡಿನಲ್ಲಿ ಸಿನಿಮಾ ಮಾಡಿದಾಗ ಅವರು ಭಾಷಾ ವೈವಿಧ್ಯತೆಯನ್ನು ಸಮಾನವಾಗಿ ಕಾಣುತ್ತಾರೆ, ಸಿನಿಮಾಗಳಲ್ಲಿಯೂ ಪ್ರಯೋಗಿಸುತ್ತಾರೆ. ಆದರೆ ಕನ್ನಡದಲ್ಲಿ ಆ ಸಮಯದಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. ಆಗೆಲ್ಲ ಕೇವಲ ಬೆಂಗಳೂರು ಕನ್ನಡ, ಮಂಡ್ಯ ಕನ್ನಡವನ್ನು ಮಾತ್ರವೇ ಸಿನಿಮಾಗಳಲ್ಲಿ ಬಳಸಲಾಗುತ್ತಿತ್ತು. ನಾವು ‘ಉಳಿದವರು ಕಂಡಂತೆ’ ಸಿನಿಮಾ ಮಾಡುವ ವರೆಗೆ ಉಡುಪಿ, ಮಂಗಳೂರು ಕನ್ನಡವನ್ನು ಕೇವಲ ಹಾಸ್ಯಕ್ಕಾಗಿ ಮಾತ್ರ ಬಳಸಲಾಗುತ್ತಿತ್ತು. ಆ ಭಾಗದ ಕತೆಗಳನ್ನು ಸಹ ನಿರ್ಲಕ್ಷಿಸಲಾಗಿತ್ತು” ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಸಂದರ್ಶನದಲ್ಲಿ ಪವನ್ ಕುಮಾರ್ ನಿರ್ದೇಶಿಸಿದ ‘ಲೂಸಿಯಾ’ ಸಿನಿಮಾ ಬಗ್ಗೆಯೂ ಮಾತನಾಡಿರುವ ರಕ್ಷಿತ್ ಶೆಟ್ಟಿ, ಪವನ್ ಕುಮಾರ್ ಮಾಡಿದ ‘ಲೂಸಿಯಾ’ ಅದೇ ಜನರೇಷನ್​ನ ಸಿನಿಮಾ ಮೇಕರ್​ಗಳಾದ ನಮಗೆ ಸ್ಪೂರ್ತಿ ತುಂಬಿತು. ಆಗೆಲ್ಲ ವರ್ಷಕ್ಕೆ ಒಂದಷ್ಟೆ ಭಿನ್ನ ಸಿನಿಮಾ ಬರುತ್ತಿತ್ತು, ‘ಲೂಸಿಯಾ’ ಅದರ ನಂತರದ ವರ್ಷ ‘ಉಳಿದವರು ಕಂಡಂತೆ’, ಅದರ ನಂತರದ ವರ್ಷ ‘ರಂಗಿತರಂಗ’, ಅದಾದ ಬಳಿಕ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಹೀಗೆ ಬರುತ್ತಾ ಹೋದವು. ಪವನ್ ಕುಮಾರ್ ತಂಡದಲ್ಲಿದ್ದ ಕೆಲವು ಅಸಿಸ್ಟೆಂಟ್ ಡೈರೆಕ್ಟರ್​ಗಳು ಈಗ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಾದ ಬದಲಾವಣೆಯನ್ನು ಜಗತ್ತು ಈಗ ನೋಡುತ್ತಿದೆ. ಆದರೆ ಕಳೆದ ಹತ್ತು ವರ್ಷಗಳಿಂದಲೂ ಆ ಬದಲಾವಣೆ ನಿಧಾನಕ್ಕೆ ನಡೆಯುತ್ತಲೇ ಇತ್ತು” ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಅದೇ ಸಂದರ್ಶನದಲ್ಲಿ ಹಾಜರಿದ್ದ ನಿರ್ದೇಶಕ ಹೇಮಂತ್ ರಾವ್ ಸಹ ರಕ್ಷಿತ್ ಶೆಟ್ಟಿಯ ಮಾತು ಅನುಮೋದಿಸುತ್ತಾ, ”ನಮಗೆಲ್ಲ ಒಂದು ಹಠ ಇತ್ತು, ಇದು ನಮ್ಮ ಭಾಷೆ, ನಾವು ಇಲ್ಲೇ ಇರಬೇಕು, ಇಲ್ಲಿಯೇ ಕೆಲಸ ಮಾಡಬೇಕು ಎಂದು. ಹಾಗಾಗಿ ನಾವು ಉಳಿದುಕೊಂಡೆವು. ಪವನ್ ಕುಮಾರ್ ‘ಲೂಸಿಯಾ’ ಮಾಡಿದಾಗ ನಮಗೆ ಆಶ್ಚರ್ಯವಾಯಿತು. ನನಗೆ ಚಿತ್ರರಂಗ ಹಣ ಕೊಡುವುದು ಬೇಡ ನಾನು ಬೇರೆಯದ್ದೇ ಹಾದಿ ಹಿಡಿದು ನನ್ನ ರೀತಿಯಲ್ಲಿಯೇ ಸಿನಿಮಾ ಮಾಡುತ್ತೀನಿ ಎಂದು ಮಾಡಿ ತೋರಿಸಿದರು. ಅದಾದ ನಂತರ ‘ಉಳಿದವರು ಕಂಡಂತೆ’ ಸಿನಿಮಾ ಬಂತು. ಇವರಿಂದ ಸ್ಪೂರ್ತಿ ಪಡೆದು ನಮ್ಮಂಥಹಾ ನಿರ್ದೇಶಕರು ಸಹ, ಓಕೆ ನಾವು ಹೇಳಬೇಕಾದ ಕತೆಯನ್ನು ಹೇಳಬಹುದು ಎಂಬ ಧೈರ್ಯ ಮೂಡಿತು. ಆಗೆಲ್ಲ ಸಿದ್ಧ ಮಾದರಿ ಬಿಟ್ಟು ಸಿನಿಮಾ ಮಾಡುವ ಐದಾರು ಮಂದಿ ಸಿಗುತ್ತಿದ್ದರು. ಈಗ ಅವರ ಸಂಖ್ಯೆ ಐವತ್ತಾಗಿದೆ, ಅದು ಇನ್ನೂ ಹೆಚ್ಚಾಗುತ್ತಿದೆ” ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ