AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಚುಚ್ಚಿ ಚುಚ್ಚಿ ಕೊಂದೆಯಲ್ಲೇ..’ ಎಂದಿದ್ದ ಗೌರಿ ಶಂಕರ್​ ಕಮ್​ಬ್ಯಾಕ್​; ಈ ಬಾರಿ ಹಳ್ಳಿ ಸೊಗಡಿನ ಸಿನಿಮಾ

'ಜೋಕಾಲಿ' ಸಿನಿಮಾದ 'ಚುಚ್ಚಿ ಚುಚ್ಚಿ ಕೊಂದೆಯಲ್ಲೇ ನನ್ನ ಹೃದಯನಾ..' ಹಾಡು ಬಹಳ ಫೇಮಸ್​. ಇಂದಿಗೂ ಆ ಹಾಡು ಎವರ್​ಗ್ರೀನ್​ ಆಗಿದೆ. ಆ ಗೀತೆಯಲ್ಲಿ ಗೌರಿ ಶಂಕರ್ ಸಖತ್ತಾಗಿ ಮಿಂಚಿದ್ದರು. ಈಗ ಅವರು ನಟಿಸಿದ ಹೊಸ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆಗೆ ಸಿದ್ಧತೆ ನಡೆದಿದೆ. ಆ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ..

'ಚುಚ್ಚಿ ಚುಚ್ಚಿ ಕೊಂದೆಯಲ್ಲೇ..' ಎಂದಿದ್ದ ಗೌರಿ ಶಂಕರ್​ ಕಮ್​ಬ್ಯಾಕ್​; ಈ ಬಾರಿ ಹಳ್ಳಿ ಸೊಗಡಿನ ಸಿನಿಮಾ
ಗೌರಿ ಶಂಕರ್​
ಮದನ್​ ಕುಮಾರ್​
|

Updated on: Oct 21, 2023 | 11:36 AM

Share

ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಿಗಬೇಕು ಎಂದರೆ ಹಲವು ವರ್ಷಗಳ ಶ್ರಮ ಬೇಕು. ಒಂದೇ ಚಿತ್ರಕ್ಕೆ ಬಿಗ್​ ಸಕ್ಸಸ್​ ಸಿಗದೇ ಇರಬಹುದು. ಆದರೆ ಮರಳಿ ಯತ್ನವ ಮಾಡು ಎಂಬ ಮನಸ್ಥಿತಿ ಇರುವುದು ಕೆಲವೇ ಮಂದಿಗೆ ಮಾತ್ರ. ಅಂಥವರ ಪೈಕಿ ನಟ ಗೌರಿ ಶಂಕರ್​ ಕೂಡ ಇದ್ದಾರೆ. ‘ಜೋಕಾಲಿ (Jokali)‘, ‘ರಾಜಹಂಸ’ ಸಿನಿಮಾಗಳ ಮೂಲಕ ಗುರುತಿಸಿಕೊಂಡ ಅವರು ಇತ್ತೀಚಿನ ವರ್ಷಗಳಲ್ಲಿ ಹೊಸ ಸಿನಿಮಾ ಮಾಡಿರಲಿಲ್ಲ. ಈಗ ಅವರು ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಹೊಸ ಸಬ್ಜೆಕ್ಟ್​ ಇಟ್ಟುಕೊಂಡು ಅವರು ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ರಾಜಹಂಸ’ ಬಿಡುಗಡೆಯಾಗಿ 5 ವರ್ಷ ಕಳೆದಿದೆ. ಹಾಗಿದ್ದರೂ ಕೂಡ ಗೌರಿ ಶಂಕರ್​ (Gowri Shankar) ಅವರ ಉತ್ಸಾಹ ಕಡಿಮೆ ಆಗಿಲ್ಲ. ಈ ಬಾರಿ ತಮ್ಮ ಚಿತ್ರವು ಪ್ರೇಕ್ಷಕರಿಗೆ ಮತ್ತಷ್ಟು ಇಷ್ಟವಾಗುತ್ತದೆ ಎಂಬ ಭರವಸೆಯೊಂದಿಗೆ ಅವರು ಸ್ಯಾಂಡಲ್​ವುಡ್​ನಲ್ಲಿ (Sandalwood) ಆಕ್ಟೀವ್​ ಆಗಿದ್ದಾರೆ.

‘ಜೋಕಾಲಿ’ ಸಿನಿಮಾದ ‘ಚುಚ್ಚಿ ಚುಚ್ಚಿ ಕೊಂದೆಯಲ್ಲೇ ನನ್ನ ಹೃದಯನಾ..’ ಹಾಡು ಬಹಳ ಫೇಮಸ್​. ಆ ಹಾಡಿನಲ್ಲಿ ಗೌರಿ ಶಂಕರ್ ಸಖತ್ತಾಗಿ ಮಿಂಚಿದ್ದರು. ಇಂದಿಗೂ ಆ ಹಾಡು ಎವರ್​ಗ್ರೀನ್​ ಆಗಿದೆ. ಅದೇ ರೀತಿ ಸಿನಿಮಾ ಮೇಲಿನ ಆಸಕ್ತಿ ಕೂಡ ಗೌರಿ ಶಂಕರ್​ ಅವರಲ್ಲಿ ಹಚ್ಚ ಹಸಿರಾಗಿದೆ. ಅವರು ನಟಿಸಿದ್ದ ‘ರಾಜಹಂಸ’ ಸಿನಿಮಾಗೆ ಉತ್ತಮ ವಿಮರ್ಶೆ ಸಿಕ್ಕಿತ್ತು. ಅವರ ನಟನೆಗೆ ಪ್ರಶಂಸೆ ವ್ಯಕ್ತವಾಗಿತ್ತು. ಈಗ ಮತ್ತೊಂದು ಡಿಫರೆಂಟ್​ ಸಿನಿಮಾದೊಂದಿಗೆ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗ್ರಾಮೀಣ ಸೊಗಡಿನ ಕಥೆ ಇರುವ ಹೊಸ ಚಿತ್ರದಲ್ಲಿ ಹೀರೋ ಆಗಿ ನಟಿಸುವುದು ಮಾತ್ರವಲ್ಲದೇ ಅವರೇ ‘ಜನಮನ ಸಿನಿಮಾ’ ಬ್ಯಾನರ್​ ಮೂಲಕ ನಿರ್ಮಾಣ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ಫ್ಯಾನ್ಸ್​ ಕೈಯಿಂದ ‘ಅರ್ದಂಬರ್ಧ ಪ್ರೇಮಕಥೆ’ ಹಾಡು ಬಿಡುಗಡೆ; ‘ಹುಚ್ಚು ಮನಸ ಹುಡುಗಿ..’ ಅಂತಿದ್ದಾರೆ ಅರವಿಂದ್​ ಕೆ.ಪಿ.

ಗೌರಿ ಶಂಕರ್​ ನಟನೆಯ ಹೊಸ ಚಿತ್ರಕ್ಕೆ ಈಗಾಗಲೇ ಶೂಟಿಂಗ್ ಮುಕ್ತಾಯ ಆಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮೊದಲು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ, ನಂತರ ಒಂದೊಂದೇ ಮಾಹಿತಿ ಬಿಟ್ಟುಕೊಡಲು ಚಿತ್ರತಂಡ ಸಿದ್ಧವಾಗಿದೆ. ಆದಷ್ಟು ಬೇಗ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಇಡೀ ತಂಡ ಕಾರ್ಯನಿರತವಾಗಿದೆ.

ಇದನ್ನೂ ಓದಿ: ಬರೋಬ್ಬರಿ 60 ಅಡಿ ಎತ್ತರದ ಪೋಸ್ಟರ್​ ಮೂಲಕ ಅನಾವರಣ ಆಯ್ತು ‘ಕ್ಯಾಪ್ಚರ್​’ ಶೀರ್ಷಿಕೆ

ಈ ಚಿತ್ರದ ಫಸ್ಟ್ ಲುಕ್ ಟೈಟಲ್ ಪೋಸ್ಟರ್ ಬಿಡುಗಡೆಗೆ ಸಿದ್ಧತೆ ನಡೆದಿದೆ. ಅ.24ರಂದು ಬೆಳಗ್ಗೆ 11.11ಕ್ಕೆ ಚಿತ್ರದ ಫಸ್ಟ್​ ಲುಕ್​ ಹಂಚಿಕೊಳ್ಳಲು ಗೌರಿ ಶಂಕರ್​ ನಿರ್ಧರಿಸಿದ್ದಾರೆ. ತಮ್ಮ ಹೊಸ ಸಿನಿಮಾದ ಕುರಿತು ಅವರು ಮಾತನಾಡಿದ್ದಾರೆ. ‘ಇದು ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ. ಈವರೆಗೂ ಯಾರೂ ನೋಡಿರದ ಮತ್ತು ಮಾಡಿರದ ಸಬ್ಜೆಕ್ಟ್ ಈ ಸಿನಿಮಾದಲ್ಲಿ ಇರಲಿದೆ. ಕನ್ನಡದ ಸಿನಿಪ್ರಿಯರಿಗೆ ಖಂಡಿತವಾಗಿ ಈ ಸಿನಿಮಾ ಇಷ್ಟ ಆಗುತ್ತದೆ’ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್