Manvita Kamat: ಮಾನ್ವಿತಾದ್ದು ಲವ್ ಮ್ಯಾರೇಜ್? ಅಸಲಿ ವಿಚಾರ ಹೇಳಿದ ನಟಿ

ಮೇ 1ಕ್ಕೆ ವಿವಾಹ ನಡೆಯಲಿದೆ. ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರ ನಡೆಯಲಿದೆ. ಏಪ್ರಿಲ್ 29ರಂದು ಹಳದಿ ಶಾಸ್ತ್ರ ನಡೆಯಲಿದೆ. ಸಂಗೀತ್ ಕಾರ್ಯಕ್ರಮ ಮತ್ತು ಎಂಗೇಜ್‌ಮೆಂಟ್ ಏಪ್ರಿಲ್ 30ರಂದು ನಡೆಯಲಿದೆ ಎಂದು ಮಾನ್ವಿತಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.  

Manvita Kamat: ಮಾನ್ವಿತಾದ್ದು ಲವ್ ಮ್ಯಾರೇಜ್? ಅಸಲಿ ವಿಚಾರ ಹೇಳಿದ ನಟಿ
ಮಾನ್ವಿತಾ
Follow us
ರಾಜೇಶ್ ದುಗ್ಗುಮನೆ
|

Updated on: Apr 27, 2024 | 3:46 PM

ನಟಿ ಮಾನ್ವಿತಾ ಕಾಮತ್ (Manvita Kamath) ಅವರು ವಿವಾಹ ಆಗುತ್ತಿದ್ದಾರೆ. ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಅವರನ್ನು ಮಾನ್ವಿತಾ ಕೈಹಿಡಿಯುತ್ತಿದ್ದಾರೆ. ಕೊಂಕಣಿ ಸಾಂಪ್ರದಾಯದಂತೆ ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ವಿವಾಹ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಲು ಮಾನ್ವಿತಾ ಅವರು ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಅವರು ಮದುವೆ ಬಳಿಕ ಯಾವೆಲ್ಲ ಪ್ಲ್ಯಾನ್ ಹೊಂದಿದ್ದಾರೆ ಎನ್ನುವ ಬಗ್ಗೆ ಅವರು ಮಾತನಾಡಿದ್ದಾರೆ.

ಮೇ 1ಕ್ಕೆ ವಿವಾಹ ನಡೆಯಲಿದೆ. ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರ ನಡೆಯಲಿದೆ. ಏಪ್ರಿಲ್ 29ರಂದು ಹಳದಿ ಶಾಸ್ತ್ರ ನಡೆಯಲಿದೆ. ಸಂಗೀತ್ ಕಾರ್ಯಕ್ರಮ ಮತ್ತು ಎಂಗೇಜ್‌ಮೆಂಟ್ ಏಪ್ರಿಲ್ 30ರಂದು ನಡೆಯಲಿದೆ ಎಂದು ಮಾನ್ವಿತಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮಾನ್ವಿತಾ ಅವರದ್ದು ಲವ್ ಮ್ಯಾರೇಜ್ ಎನ್ನುವ ಗಾಸಿಪ್ ಇದೆ. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ‘ನಮ್ಮದು ಅರೇಂಜ್ಡ್ ಮ್ಯಾರೇಜ್. ಮುಂದಿನ 3 ತಿಂಗಳು ಶುಭ ಮುಹೂರ್ತ ಇರಲಿಲ್ಲ. ಹೀಗಾಗಿ, ಮೇ 1ಕ್ಕೆ ಮದುವೆ ಆಗುತ್ತಿದ್ದೇವೆ. ಕನ್ನಡ ಚಿತ್ರರಂಗದ ಕಲಾವಿದರಿಗಾಗಿ ಗೆಟ್​​ ಟುಗೆದರ್ ಮಾಡೋ ಯೋಜನೆ ಇದೆ’ ಎಂದು ಮಾನ್ವಿತಾ ಹೇಳಿದ್ದಾರೆ.

ಸಾಮಾನ್ಯವಾಗಿ ಮದುವೆ ಆದ ಬಳಿಕ ನಟಿಯರು ಸಿನಿಮಾರಂಗದಿಂದ ದೂರವೇ ಇರುತ್ತಾರೆ. ಮದುವೆ ಬಳಿಕ ಸಿನಿಮಾ ಮಾಡುತ್ತಾ ಇರುವವರೂ ಇದ್ದಾರೆ. ಇದರಲ್ಲಿ ಒಬ್ಬೊಬ್ಬರ ನಿರ್ಧಾರ ಒಂದೊಂದು ರೀತಿ ಇದೆ. ಈ ಬಗ್ಗೆ ಮಾನ್ವಿತಾ ಮಾತನಾಡಿದ್ದಾರೆ. ‘ಮದುವೆ ನಂತರವೂ ಸಿನಿಮಾಗಳನ್ನು ಮಾಡುತ್ತೇನೆ. ವೈಯಕ್ತಿಕ ಬೇರೆ, ಪ್ರೊಫೆಷನಲ್ ಬೇರೆ. ಅದನ್ನು ಮಿಕ್ಸ್ ಅಪ್ ಮಾಡಲ್ಲ’ ಎಂದಿದ್ದಾರೆ ಮಾನ್ವಿತಾ.

ಇದನ್ನೂ ಓದಿ: ನಟಿ ಮಾನ್ವಿತಾಗೆ ಕೂಡಿಬಂತು ಕಂಕಣ ಭಾಗ್ಯ; ಹುಡ್ಗ ಯಾರು? ಮದ್ವೆ ಎಲ್ಲಿ?

ಮದುವೆ ಬಳಿಕ ಮಾನ್ವಿತಾ ಸಿನಿಮಾ ಮಾಡಿದರೆ ತಮಗೆ ಯಾವುದೇ ಅಭ್ಯಂತರ ಇಲ್ಲ ಎಂದು ಮಾನ್ವಿತಾ ಹೇಳಿದ್ದಾರೆ.  ಮೈಸೂರಿನಲ್ಲಿ ಅರುಣ್ ಇಂಜಿನಿಯರಿಂಗ್ ಮಾಡಿದ್ದಾರೆ. ಅವರಿಗೆ ಸಿನಿಮಾ ರಂಗದಲ್ಲಿ ಹೆಚ್ಚು ಆಸಕ್ತಿ ಇಲ್ಲವಂತೆ. ಸದ್ಯ ಮಾನ್ವಿತಾ ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ