‘ರಿಚರ್ಡ್ ಆಂಟನಿ’ ಚಿತ್ರದಲ್ಲಿರಲ್ಲ ಬೆಂಗಳೂರು ಕಲಾವಿದರು; ಕಾರಣ ಕೊಟ್ಟ ರಕ್ಷಿತ್
‘ಉಳಿದವರು ಕಂಡಂತೆ’ ಸಿನಿಮಾ ಜನರ ಮನಸ್ಸನ್ನು ಗೆದ್ದಿತ್ತು. ಈ ಸಿನಿಮಾದಲ್ಲಿ ರಿಚರ್ಡ್ ಆಂಟನಿ (ರಕ್ಷಿತ್ ಶೆಟ್ಟಿ) ಪಾತ್ರ ಬರುತ್ತದೆ. ಅದನ್ನು ಮುಖ್ಯವಾಗಿ ಆಧರಿಸಿ ಸಿನಿಮಾ ಮಾಡಲು ರಕ್ಷಿತ್ ಮುಂದಾಗಿದ್ದಾರೆ. ಈ ಸಿನಿಮಾದ ಬಗ್ಗೆ ಅವರು ಅಪ್ಡೇಟ್ ಕೊಟ್ಟಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೋ’ ಬಳಿಕ ರಕ್ಷಿತ್ ಶೆಟ್ಟಿ (Rakshit Shetty) ಅವರ ಹೊಸ ಸಿನಿಮಾ ಘೋಷಣೆ ಆಗಿಲ್ಲ. ಕಳೆದ ವರ್ಷ ಈ ಚಿತ್ರದ ಪಾರ್ಟ್ ‘ಎ’ ಹಾಗೂ ಪಾರ್ಟ್ ‘ಬಿ’ ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ಈಗ ಅವರು ತಮ್ಮ ನಿರ್ದೇಶನದ ಸಿನಿಮಾ ‘ರಿಚರ್ಡ್ ಆಂಟನಿ’ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಈ ಸಿನಿಮಾ ಬಗ್ಗೆ ಅವರು ಕ್ರೇಜಿ ಅಪ್ಡೇಟ್ ಒಂದನ್ನು ಕೊಟ್ಟಿದ್ದಾರೆ. ಮೇ 1ರಿಂದ ಸಿನಿಮಾದ ಪ್ರೀ ಪ್ರೊಡಕ್ಷನ್ ಆರಂಭಿಸಲಿರುವ ಅವರು, 2025ಕ್ಕೆ ಸಿನಿಮಾನ ತೆರೆಗೆ ತರುವ ಆಲೋಚನೆಯಲ್ಲಿ ಇದ್ದಾರೆ. ವಿಶೇಷ ಎಂದರೆ ಕರಾವಳಿಯ ಕಲಾವಿದರು ಈ ಸಿನಿಮಾದಲ್ಲಿ ಮುಖ್ಯವಾಗಿ ನಟಿಸಲಿದ್ದಾರಂತೆ.
‘ಉಳಿದವರು ಕಂಡಂತೆ’ ಸಿನಿಮಾ ಜನರ ಮನಸ್ಸನ್ನು ಗೆದ್ದಿತ್ತು. ಥಿಯೇಟರ್ನಲ್ಲಿ ಈ ಚಿತ್ರ ಯಶಸ್ಸು ಕಾಣದೇ ಇದ್ದರು, ಆ ಬಳಿಕ ಈ ಚಿತ್ರವನ್ನು ಯೂಟ್ಯೂಬ್ನಲ್ಲಿ ನೋಡಿ ಜನರು ಮೆಚ್ಚಿಕೊಂಡರು. ಈ ಸಿನಿಮಾದಲ್ಲಿ ರಿಚರ್ಡ್ ಆಂಟನಿ (ರಕ್ಷಿತ್ ಶೆಟ್ಟಿ) ಪಾತ್ರ ಬರುತ್ತದೆ. ಅದನ್ನು ಮುಖ್ಯವಾಗಿ ಆಧರಿಸಿ ಸಿನಿಮಾ ಮಾಡಲು ರಕ್ಷಿತ್ ಮುಂದಾಗಿದ್ದಾರೆ. ಈ ಸಿನಿಮಾದ ಬಗ್ಗೆ ಅವರು ಅಪ್ಡೇಟ್ ಕೊಟ್ಟಿದ್ದಾರೆ.
‘ರಿಚರ್ಡ್ ಆಂಟನಿ ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸ ಶುರುವಾಗಿದೆ. ಮತ ಹಾಕೋದು ಇದೆ ಎಂದು ನಾನು ಇಲ್ಲಿಗೆ ಶಿಫ್ಟ್ ಆದೆ. ಶೀಘ್ರವೇ ನಮ್ಮ ಟೀಂ ಕೂಡ ಇಲ್ಲಿಗೆ ಶಿಫ್ಟ್ ಆಗ್ತಿದೆ. ಮೇ 1ರಿಂದ ಸಿನಿಮಾದ ಪ್ರೀಪ್ರಡೊಕ್ಷನ್ ಕೆಲಸ ಆರಂಭಿಸುತ್ತೇವೆ. ಶೇ. 50-60ರಷ್ಟು ಶೂಟಿಂಗ್ ಕರಾವಳಿ ಭಾಗದಲ್ಲೇ ನಡೆಯಲಿದೆ. ಉಳಿದವರು ಕಂಡಂತೆ ಸಿನಿಮಾ ಮಾಡುವಾಗ ಲೊಕೇಶನ್ ಹುಡುಕುವುದು ಎಷ್ಟು ಸುಲಭ ಇತ್ತೋ, ಈಗ ಹಾಗಿಲ್ಲ. ಕೆಲವು ಲೊಕೇಶನ್ಗೆ ಕೇರಳ ಹೋಗಬೇಕಾಗಿ ಬರಬಹುದು. ಕೆಲವುದಕ್ಕೆ ಗೋಕರ್ಣ ಹೋಗಬೇಕಾಗಿ ಬರಹುದು. ಹೀಗಾಗಿ, ಸಿನಿಮಾನ ಉಡುಪಿಯಲ್ಲೇ ಶೂಟ್ ಮಾಡುತ್ತೇನೆ ಎಂದು ಹೇಳಲ್ಲ’ ಎಂದಿದ್ದಾರೆ ರಕ್ಷಿತ್.
‘ಅನೇಕ ಸೆಲೆಬ್ರಿಟಿಗಳು ಬಂದು ಸಿನಿಮಾದಲ್ಲಿ ಚಾನ್ಸ್ ಕೇಳ್ತಾ ಇದಾರೆ. ಆದರೆ, ಅವರನ್ನು ಹಾಕಿಕೊಳ್ಳೋಕೆ ಆಗಲ್ಲ. ಏಕೆಂದರೆ ಕಲಾವಿದರಿಗೆ ಉಡುಪಿ ಭಾಷೆ ಬರೋದು ಮುಖ್ಯ. ಇಲ್ಲಿನ ಸ್ಲ್ಯಾಂಗ್ ಎಲ್ಲರಿಗೂ ಬರೋಲ್ಲ. ಬೇರೆಯವರು ಮಾತನಾಡಿದರೆ ಅದು ಅನುಕರಣೆ ರೀತಿ ಅನಿಸುತ್ತದೆ. ಹೀಗಾಗಿ, ಸಿನಿಮಾದಲ್ಲಿ ನಟಿಸೋ ಎಲ್ಲರೂ ಇಲ್ಲಿಯ ಕಲಾವಿದರೇ ಆಗಿರುತ್ತಾರೆ. ಮುಂದಿನ ವರ್ಷಕ್ಕೆ ಸಿನಿಮಾ ರೆಡಿ ಆಗುತ್ತದೆ’ ಎಂದು ರಕ್ಷಿತ್ ಹೇಳಿದ್ದಾರೆ.