Kichcha Sudeep
‘ಮ್ಯಾಕ್ಸ್’ ಯಶಸ್ಸಿನ ಬಳಿಕ ಕಿಚ್ಚ ಸುದೀಪ್ (Kichcha Sudeep) ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ‘ಮಾರ್ಕ್’ ಸಿನಿಮಾ (Mark Movie) ಮಾಡಿದ್ದಾರೆ. ಈ ಕಾಂಬಿನೇಷನ್ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಇಂದು (ಡಿಸೆಂಬರ್ 25) ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಮುಂಜಾನೆಯೇ ಫಸ್ಟ್ ಶೋ ಆರಂಭ ಆಗಿದೆ. ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಿ ಸಂಭ್ರಮಿಸುತ್ತಿದ್ದಾರೆ. ಬಹುಭಾಷೆಯ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಾಸ್ ಅವತಾರದಲ್ಲಿ ಕಿಚ್ಚ ಸುದೀಪ್ ಅವರು ಮನರಂಜನೆ ನೀಡಿದ್ದಾರೆ. ಸುದೀಪ್ ಜೊತೆ ಯೋಗಿ ಬಾಬು, ಶೈನ್ ಟಾಮ್ ಚಾಕೋ, ಪ್ರತಾಪ್, ಅರ್ಚನಾ ಕೊಟ್ಟಿಗೆ, ರೋಶಿನಿ ಪ್ರಕಾಶ್ ಮುಂತಾದವರು ನಟಿಸಿರುವ ‘ಮಾರ್ಕ್’ ಸಿನಿಮಾದ ಫಸ್ಟ್ ಹಾಫ್ ವಿಮರ್ಶೆ (Mark Movie First Half Review) ಇಲ್ಲಿದೆ..
- ಕ್ರೈಮ್ ಥ್ರಿಲ್ಲರ್ ಕಥಾಹಂದರ ‘ಮಾರ್ಕ್’ ಸಿನಿಮಾದಲ್ಲಿ ಇದೆ. ಚಿತ್ರದ ಆರಂಭದಲ್ಲೇ ವಿಲನ್ ಡ್ರ್ಯಾಗನ್ ಮಂಜು ಅವರು ಅಬ್ಬರಿಸಿದ್ದಾರೆ.
- ‘ದಾದಾ ಯಾರ್ ಗೊತ್ತಾ’ ಹಾಡು ಸಿನಿಮಾದ ಶುರುವಿನಲ್ಲೇ ಇದೆ. ಈ ಸಾಂಗ್ ಮೂಲಕವೇ ಕಿಚ್ಚ ಸುದೀಪ್ ಅವರು ಮಾಸ್ ಎಂಟ್ರಿ ನೀಡುತ್ತಾರೆ.
- ಆ್ಯಕ್ಷನ್ ಇಷ್ಟ ಪಡುವವರಿಗೆ ಮಾರ್ಕ್ ಸಿನಿಮಾದ ಆರಂಭದಲ್ಲೇ ಮನರಂಜನೆ ಇದೆ. ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ.
- ಡ್ರಗ್ಸ್ ಮಾಫಿಯಾ, ಮಕ್ಕಳ ಅಪಹರಣ, ರಾಜಕೀಯ, ಫ್ಯಾಮಿಲಿ ಸೆಂಟಿಮೆಂಟ್ ಕೂಡ ಮಾರ್ಕ್ ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಇದೆ.
- ಬಿಡುಗಡೆಗೂ ಮುನ್ನ ವೈರಲ್ ಆದ ‘ಮಸ್ತ್ ಮಲೈಕಾ..’ ಹಾಡು ಸಹ ಈ ಸಿನಿಮಾದ ಮೊದಲಾರ್ಧದಲ್ಲೇ ಇದೆ. ನಿಶ್ವಿಕಾ ನಾಯ್ಡು, ಸುದೀಪ್ ಡ್ಯಾನ್ಸ್ ಸೂಪರ್.
- ನವೀನ್ ಚಂದ್ರ, ವಿಕ್ರಾಂತ್, ಶೈನ್ ಟಾಮ್ ಚಾಕೋ, ಯೋಗಿ ಬಾಬು, ಗುರು ಸೋಮಸುಂದರಂ ಸೇರಿದಂತೆ ಹಲವರು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
- ಇಂಟರ್‌ವಲ್‌ಗಿಂತ ಮುನ್ನ ಬರುವ ಫೈಟಿಂಗ್ ಸೀನ್ ಅಭಿಮಾನಿಗಳಿಗೆ ಇಷ್ಟ ಆಗುತ್ತದೆ. ಮೊದಲಾರ್ಧದಲ್ಲಿ ಒಟ್ಟು ಮೂರು ಆ್ಯಕ್ಷನ್ ದೃಶ್ಯಗಳಿವೆ.
- ಬಹುತೇಕ ‘ಮ್ಯಾಕ್ಸ್’ ಸಿನಿಮಾದ ರೀತಿಯೇ ‘ಮಾರ್ಕ್’ ಚಿತ್ರ ಮೂಡಿಬಂದಿದೆ. ಕೆಲವೇ ಗಂಟೆಗಳಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
- ಯಾವುದೇ ವಿಳಂಬ ಇಲ್ಲದೇ ಪಟಪಟನೇ ಕಥೆ ಸಾಗುತ್ತದೆ. ಮುಂದೇನು ಎಂಬ ಕುತೂಹಲ ಈ ಸಿನಿಮಾದ ಪ್ರತಿ ದೃಶ್ಯದಲ್ಲೂ ಮೂಡುತ್ತದೆ.
- ಸೆಕೆಂಡ್ ಹಾಫ್ ಮೇಲೆ ನಿರೀಕ್ಷೆ ಮೂಡುವ ರೀತಿಯಲ್ಲಿ ಇಂಟರ್‌ವಲ್ ಎದುರಾಗುತ್ತದೆ. ಸಾಕಷ್ಟು ಟ್ವಿಸ್ಟ್ ಕೂಡ ಮಾರ್ಕ್ ಸಿನಿಮಾದಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.