Martin Teaser Release Live Updates: ಧ್ರುವ ಸರ್ಜಾ (Dhruva Sarja) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ಟೀಸರ್ (Martin Movie Teaser) ಇಂದು ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಮಧ್ಯಾಹ್ನ 1 ಹಾಗೂ 2 ಗಂಟೆಗೆ ಮಾರ್ಟಿನ್ ಸಿನಿಮಾದ ಟೀಸರ್ ಅನ್ನು ಪ್ರದರ್ಶಿಸಲಾಗುತ್ತದೆ. ಈಗಾಗಲೇ ಮಧ್ಯಾಹ್ನ ಒಂದು ಗಂಟೆಯ ಶೋ ಸಂಪೂರ್ಣ ಬುಕ್ ಆಗಿದ್ದು ಎರಡು ಗಂಟೆಯ ಶೋ ಸಹ ಭಾಗಶಃ ಬುಕ್ ಆಗಿದೆ. ಧ್ರುವ ಸರ್ಜಾ ಅಭಿಮಾನಿಗಳು ಮಾತ್ರವಲ್ಲದೆ ಕೆಲವು ಸಿನಿಮಾ ಸೆಲೆಬ್ರಿಟಿಗಳು ಸಹ ಟೀಸರ್ ನೋಡಲು ಟಿಕೆಟ್ ಖರೀದಿಸಿದ್ದಾರೆ. ರಾಜಾಜಿನಗರ ಕೆಂಪೇಗೌಡ ಸಮುದಾಯ ಭವನದಿಂದ ಶುರುವಾದ ಅದ್ದೂರಿ ಮೆರವಣಿಗೆಯಲ್ಲಿ ಮೆರವಣಿಗೆಯಲ್ಲಿ ದ್ರುವ ಸರ್ಜಾ ಹಾಗು ಚಿತ್ರತಂಡ ಭಾಗಿಯಾಗಿದೆ. ಕಲಾತಂಡಗಳು ಬೈಕ್ ರ್ಯಾಲಿ ಜೊತೆ ಚಿತ್ರಮಂದಿರ ತಲುಪುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗಿದ್ದಾರೆ.
ಬಳ್ಳಾರಿ: ಈ ಬಾರಿ ಕರ್ನಾಕಟದಲ್ಲಿ ಪೂರ್ಣ ಬಹುಮತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಅಮಿತ್ ಶಾ ಹೇಳಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರಿನ ಎಸ್ಆರ್ಎಸ್ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಸಂಡೂರಿನ ಕುಮಾರಸ್ವಾಮಿ ದೇವರಿಗೆ ನನ್ನ ನಮಸ್ಕಾರಗಳು. ಕಾರ್ಯಕ್ರಮಕ್ಕೆ ಬರಲು ನನ್ನಿಂದ ತಡವಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ ಎಂದರು. ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಕುಟುಂಬವಾದಿ ಪಕ್ಷಗಳಾಗಿವೆ. ಕುಟುಂಬವಾದಿ ಪಕ್ಷಗಳಿಂದ ಬಡವರ ಕಲ್ಯಾಣ ಮಾಡುವುದಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಹೈಕಮಾಂಡ್ಗೆ ಎಟಿಎಂ ಆಗಿತ್ತು. ಕರ್ನಾಟಕ ಕಾಂಗ್ರೆಸ್ ದೆಹಲಿ ಹೈಕಮಾಂಡ್ಗೆ ಎಟಿಎಂ ಆಗಿತ್ತು ಎಂದು ಆರೋಪಿಸಿದರು. ಪಿಎಫ್ಐ ಸಂಘಟನೆಯನ್ನು ಪ್ರಧಾನಿ ಮೋದಿ ನಿಷೇಧ ಮಾಡಿದರು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ PFI ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆದುಕೊಂಡಿದ್ದರು ಎಂದರು.
ಕೆಲವೇ ನಿಮಿಷಗಳಲ್ಲಿ ಮಾರ್ಟಿನ್ ಸಿನಿಮಾದ ಟೀಸರ್ ಬಿಡುಗಡೆ ಆಗಲಿದ್ದು, ಧ್ರುವ ಸರ್ಜಾ ಅಭಿಮಾನಿಗಳು ಘೋಷಣೆಗಳ ಕೂಗುತ್ತಾ ವೀರೇಶ್ ಚಿತ್ರಮಂದಿರ ಪ್ರವೇಶ ಮಾಡಿದ್ದಾರೆ. 1 ಗಂಟೆಗೆ ಸಿನಿಮಾದ ಟೀಸರ್ ಪ್ರದರ್ಶನ ನಡೆಯಲಿದೆ.
ವೀರೇಶ್ ಚಿತ್ರಮಂದಿರದಲ್ಲಿ ತಲೆ ಎತ್ತಿರುವ ದ್ರುವ ಸರ್ಜಾ ಕಟೌಟ್ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ಥಿಯೇಟರ್ ಮುಂದೆ ತಮಟೆ ಸೌಂಡ್ಗೆ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದಾರೆ. ಇದರ ನಡುವೆ ಮೆರವಣಿಗೆ ಮೂಲಕ ವಿರೇಶ್ ಚಿತ್ರಮಂದಿರಕ್ಕೆ ನಿರ್ದೆಶಕ ಎ.ಪಿ ಅರ್ಜುನ್ ಹಾಗು ನಾಯಕಿ ವೈಭವಿ ಶಾಂಡಿಲ್ಯಾ ಆಗಮಿಸಿದ್ದಾರೆ.
ವೀರೇಶ್ ಚಿತ್ರಮಂದಿರದ ಮುಂದೆ ಧ್ರುವ ಸರ್ಜಾ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಡೊಳ್ಳು ಕುಣಿತ, ಪಟಾಕಿ ಹೊಡೆತ ಜೋರಾಗಿ ಸಾಗಿವೆ.
ಆಟೋ ಬೈಕ್ ರ್ಯಾಲಿ ಮೂಲಕ ಧ್ರವ ಸರ್ಜಾ ಅಭಿಮಾನಿಗಳು ವೀರೇಶ್ ಚಿತ್ರಮಂದಿರ ತಲುಪಿದ್ದಾರೆ. ಕೆಲವೇ ಹೊತ್ತಿನಲ್ಲಿ ಮಾರ್ಟಿನ್ ಟೀಸರ್ ಬಿಡುಗಡೆ ಆಗಲಿದೆ.
ಮಾರ್ಟಿನ್ ಟೀಸರ್ ರಿಲೀಸ್ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚಂಡೆ-ಮದ್ದಳೆ ಕಲಾ ತಂಡಗಳು ಭಾಗಿಯಾಗಿವೆ. ಜೊತೆಗೆ ಆಂಜನೇಯನ ವೇಷಧಾರಿಗಳು ಕೂಡ ಭಾಗಿ ಆಗಿರುವುದು ವಿಶೇಷ. ಧ್ರುವ ಸರ್ಜಾ ಆಂಜನೇಯ ಸ್ವಾಮಿಯ ಪರಮ ಭಕ್ತರು.
ಮಾರ್ಟಿನ್ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ರಾಜಾಜಿನಗರ ಕೆಂಪೇಗೌಡ ಸಮುದಾಯ ಭವನದಿಂದ ಮೆರವಣಿಗೆ ಆರಂಭವಾಗಿದ್ದು ಧ್ರುವ ಸರ್ಜಾ ಹಾಗೂ ಚಿತ್ರತಂಡ ಭಾಗಿಯಾಗಿದೆ. ಕಲಾ ತಂಡಗಳು ಮೆರವಣಿಗೆಯಲ್ಲಿದ್ದು ಫ್ಯಾನ್ಸ್ ಬೈಕ್ ರ್ಯಾಲಿ ಮಾಡುತ್ತಾ ವೀರೇಶ್ ಚಿತ್ರಮಂದಿರವನ್ನು ತಲುಪಲಿದ್ದಾರೆ.
ಮಾರ್ಟಿನ್ ಟೀಸರ್ ಇಂದು ಮಧ್ಯಾಹ್ನ 1 ಹಾಗೂ 2 ಗಂಟೆಗೆ ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಅದೇರೀತಿ ಸಂಜೆ 5 ಗಂಟೆ 5 ನಿಮಿಷಕ್ಕೆ ಅಧಿಕೃತವಾಗಿ ಯೂಟ್ಯೂಬ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ರಿಲೀಸ್ ಆಗಲಿದೆ.
ರಾಜಾಜಿನಗರ ಕೆಂಪೇಗೌಡ ಸಮುದಾಯ ಭವನದಿಂದ ಅದ್ದೂರಿ ಮೆರವಣಿಗೆ ಆರಂಭವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗಿದ್ದಾರೆ. ಡೊಳ್ಳು ಕುಣಿತ, ಚೆಂಡೇ, ವಾಧ್ಯ, ಜನಪದ ಕಲಾ ತಂಡಗಳ ಜೊತೆ ಚಿತ್ರತಂಡದ ಸಂಭ್ರಮಿಸುತ್ತಿದೆ. ಅಭಿಮಾನಿಗಳಂತೂ ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ ಖುಷಿ ಪಡುತ್ತಿದ್ದಾರೆ.
ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ಟೀಸರ್ ಇಂದು ಮಧ್ಯಾಹ್ನ 1 ಹಾಗೂ 2 ಗಂಟೆಗೆ ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ.
Published On - 10:38 am, Thu, 23 February 23