ಶರಣ್ ಕಂಠಸಿರಿಯಲ್ಲಿ ‘ಮರ್ಯಾದೆ ಪ್ರಶ್ನೆ’ ಹಾಡು; ಮಧ್ಯಮ ವರ್ಗದವರ ಜೀವನದ ಕಥೆ ವಿವರಿಸಿದ ಸಾಂಗ್

|

Updated on: Oct 18, 2024 | 11:56 AM

ಅರ್ಜುನ್ ರಾಮು ಅವರು ‘ಈಸಿ ಟೇಕ್ ಇಟ್ ಈಸಿ..’ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಜಾನಪದ ಶೈಲಿಯಲ್ಲಿ ಈ ಹಾಡು ಇದೆ. ನಟ ಶರಣ್ ಅವರು ಕಂಠ ಸಿರಿಯಲ್ಲಿ ಹಾಡು ಮೂಡಿ ಬಂದಿದೆ. ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ.

ಶರಣ್ ಕಂಠಸಿರಿಯಲ್ಲಿ ‘ಮರ್ಯಾದೆ ಪ್ರಶ್ನೆ’ ಹಾಡು; ಮಧ್ಯಮ ವರ್ಗದವರ ಜೀವನದ ಕಥೆ ವಿವರಿಸಿದ ಸಾಂಗ್
ಮರ್ಯಾದೆ ಪ್ರಶ್ನೆ
Follow us on

ನಟ ಶರಣ್ ಅವರು ಹಿರೋ ಆಗಿ ಫೇಮಸ್ ಆಗಿದ್ದಾರೆ. ಇದರ ಜೊತೆಗೆ ಅವರು ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಈಗ ‘ಸಕ್ಕತ್ ಸ್ಟುಡಿಯೋ’ ನಿರ್ಮಿಸಿರುವ ‘ಮರ್ಯಾದೆ ಪ್ರಶ್ನೆ’ ಚಿತ್ರದ ‘ಈಸಿ ಟೇಕ್ ಇಟ್ ಈಸಿ’ ಹಾಡನ್ನು ಹಾಡಿದ್ದಾರೆ. ಈ ಹಾಡು ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ಈ ಚಿತ್ರ ನವೆಂಬರ್ 22ಕ್ಕೆ ಬಿಡುಗಡೆ ಆಗುತ್ತಿದೆ.

ಅರ್ಜುನ್ ರಾಮು ಅವರು ‘ಈಸಿ ಟೇಕ್ ಇಟ್ ಈಸಿ..’ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಜಾನಪದ ಶೈಲಿಯಲ್ಲಿ ಈ ಹಾಡು ಇದೆ. ನಟ ಶರಣ್ ಅವರು ಕಂಠ ಸಿರಿಯಲ್ಲಿ ಹಾಡು ಮೂಡಿ ಬಂದಿದೆ. ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ. ಈ ಹಾಡಿನಲ್ಲಿ ನಟರ ಪಾತ್ರದ ಪರಿಚಯ ಮತ್ತು ಅವರು ಬದುಕುತ್ತಿರುವ ಮಧ್ಯಮ ವರ್ಗದ ಸಮಾಜದ ಬಗ್ಗೆ ವಿವರಿಸಲಾಗಿದೆ.

‘ಬಿಗ್ ಬಾಸ್ ಒಟಿಟಿ’ ಹಾಗೂ ‘ಬಿಗ್ ಬಾಸ್ ಸೀಸನ್ 9’ರ ಮೂಲಕ ಫೇಮಸ್ ಆದ ರಾಕೇಶ್ ಅಡಿಗ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ, ಮಹೇಶ್, ಪ್ರಭು, ಶೈನ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ಶ್ವೇತಾ ಆರ್ ಪ್ರಸಾದ್, ದಯಾಳ್ ಪದ್ಮನಾಭ್ ಸೇರಿ ಅನೇಕರು ನಟಿಸಿದ್ದಾರೆ.

ಈ ಚಿತ್ರವನ್ನು ‘ಸಕ್ಕತ್ ಸ್ಟುಡಿಯೋ’ ಅಡಿಯಲ್ಲಿ ಶ್ವೇತಾ ಆರ್. ಪ್ರಸಾದ್ ಹಾಗೂ ವಿದ್ಯಾ ಗಾಂಧಿ ರಾಜನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಸದ್ಯ ಟೈಟಲ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ‘ಮರ್ಯಾದೆ ಪ್ರಶ್ನೆ’ಗೆ ಸಿಕ್ತು ಉತ್ತರ; ಮಧ್ಯಮ ವರ್ಗದ ಭಾವನೆಗಳನ್ನು ಹೇಳಲಿದೆ ಸಿನಿಮಾ

ನಾಗರಾಜ್ ಸೋಮಯಾಜಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆರ್​ಜೆ ಪ್ರದೀಪ್ ಅವರು ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅವರೇ ಸಿನಿಮಾದ ಕ್ರಿಯೇಟಿವ್ ಹೆಡ್ ಕೂಡ ಹೌದು. ಸಂದೀಪ್ ವಲ್ಲುರಿ ಅವರ ಛಾಯಾಗ್ರಹಣ ಚಿತ್ರಕ್ಕೆ ಇದೆ. ಸಂಕೇತ್ ಶಿವಪ್ಪ ಅವರ ಸಂಕಲನ ಇದೆ. ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲೇ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.